ಮಹತ್ವದ ಆದೇಶವೊಂದರಲ್ಲಿ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಂ ನಾಗಪ್ರಸನ್ನರವರಿದ್ದ ಏಕ ಸದಸ್ಯ ನ್ಯಾಯಪೀಠವು ಮದುವೆಯಾದ ಹೆಣ್ಣು ಮಕ್ಕಳು ಸಹಾ ಅನುಕಂಪದ ಅಧಾರದ ಸಕಾ೯ರಿ ನೌಕರಿಗೆ ಅಹ೯ರು ಎಂದು ತೀಪಿ೯ತ್ತಿದೆ
ಭುವನೇಶ್ವರಿ ವಿ ಪುರಾಣಿಕ್ ರವರ ಕೇಸ್ನಲ್ಲಿ ಸೋದರ ಖಾಸಗಿ ನೌಕರಿಮಾಡುತ್ತಿದ್ದು ಅನುಕಂಪದ ಆಧಾರದ ನೌಕರಿಗೆ ಅಜಿ೯ಸಲ್ಲಿಸದ ಕಾರಣ ಆ ನೌಕರಿ ತನಗೆ ನೀಡಬೇಕೆಂದು ಸಲ್ಲಿಸಿದ ಅಜಿ೯ಯನ್ನು ರಾಜ್ಯ ಸಕಾ೯ರ ನಿರಾಕರಿಸಿತ್ತು ಸದರಿ ವಿಚಾರ ನ್ಯಾಯಲಯದ ಮುಂದೆ ಬಂದು ಹೆಣ್ಣು ಮಗಳು ಮದುವೆಯಾದ ಕಾರಣಕ್ಕೆ ಅವಳು ಕುಟುಂಬದವಳಲ್ಲ ಎಂದು ಹೇಳಲು ಬರುವುದಿಲ್ಲ ಗಂಡುಮಕ್ಕಳು ಮದುವೆಯಾದಮೇಲೆ ಕುಟುಂಬ ಸದಸ್ಯರಾಗಿ ಮುಂದುವರೆಯುವುದಾದರೆ ಹೆಣ್ಣು ಮಕ್ಕಳು ಸಹಾ ಕುಟುಂಬದ ಸದಸ್ಯರಾಗಿರುತ್ತಾರೆ ಇಲ್ಲದೆ ಹೋದರೆ ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸದರಿ ಅಜಿ೯ಯನ್ನು ಪುರಸ್ಕರಿಸಿದೆ.
ಸದರಿ ಆದೇಶದಲ್ಲಿ ಸಂವಿಧಾನದ ಪರಿಚ್ಛೇದ 14 ಮತ್ತು 15 ಉಲ್ಲಂಘನೆ ಹಾಗೂ ಕೆ ಸಿ ಎ ಸ್ ಆರ್ ಅಧಿನಿಯಮ(ಅನುಕಂಪದ ಆಧಾರದ ಮೇಲೆ ನೇಮಕಾತಿ) 1996 ರ ನಿಯಮ 2(1)(ಎ)(ಐ),ನಿಯಮ 2(1)(ಬಿ) ಮತ್ತು 3(2)(ಐ)(ಸಿ) ತಾರತಮ್ಯದಿಂದ ಕೂಡಿದೆ ಎಂದು ಆದೇಶಿಸಿದೆ
buy cheap generic domperidone – buy cyclobenzaprine without a prescription cyclobenzaprine without prescription