ಕನಿಷ್ಠ ಶೇ.60 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ನಿಗದಿತ ಅರ್ಜಿಗಳನ್ನು ಸಂಸ್ಥೆಯ ಮುಖ್ಯಸ್ಥರ ದೃಢೀಕರಿಸಿದ ಅಂಕ ಪಟ್ಟಿಯೊಂದಿಗೆ ಕಾರ್ಯದರ್ಶಿ/ಖಜಾಂಚಿಗಳ ಕಛೇರಿ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಂಗಳೂರು -560002 ಈ ವಿಳಾಸಕ್ಕೆ ಸಲ್ಲಿಸಲು ತಿಳಿಸಿದೆ. ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುತ್ತದೆ
2019-20ನೇ ಸಾಲಿನ ಏಪ್ರಿಲ್ ಮತ್ತು ಜೂನ್ 2020ರಲ್ಲಿ ನಡೆದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ(ಆರ್ಟ್ಸ್, ಸೈನ್ಸ್, ಕಾಮರ್ಸ್) (ಸಿಬಿಎಸ್ಇ, ಐಸಿಎಸ್ಇ ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ) ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
2019-20ನೇ ಸಾಲಿನ ಪದವಿ ಅಂತಿಮ ವರ್ಷ (ಬಿಎ, ಬಿಎಸಿ, ಬಿಕಾಂ, ಬಿಇಡಿ, ಬಿಸಿಎ, ಬಿಬಿಎಂ, ಬಿಎಸ್ ಸಿ ಎ, ಬಿ ಹೆಚ್ ಎಂ, ಎಲ್ ಎಲ್ ಬಿ) ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
2019-20ನೇ ಸಾಲಿನಲ್ಲಿ ಬಿಇ 6ನೇ ಸೆಮಿಸ್ಟರ್ ಉತ್ತೀರ್ಣರಾದವರು, ಈಗ ಬಿಇ 7ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಓದುತ್ತಿರುವವರು ಅರ್ಜಿಸಲ್ಲಿಸಬಹುದಾಗಿರುತ್ತದೆ. 2019-20ನೇ ಸಾಲಿನಲ್ಲಿ 2ನೇ ಫೇಸ್ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು (MBBS, BDS, BHMS, BUMS, BAMS ಹಾಗೂ 3ನೇ ಫೇಸ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
2019-20ನೇ ಸಾಲಿನಲ್ಲಿ 2ನೇ ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ( ಎಂಎ, ಎಂಎಸ್ಸಿ, ಎಂಕಾಂ, ಎಂಎಡ್) ಹಾಗೂ 3ನೇ ಸಮಿಸ್ಟರ್ ಸ್ನಾತ್ತಕೋತ್ತರ ಪದಿವ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿಯ ಉಪ ನಿರ್ದೇಶಕರು ಹಾಗೂ ಪ್ರಭಾರಾಧಿಕಾರಿಗಳು 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ನಿಧಿಯ ವತಿಯಿಂದ ಜಿಲ್ಲಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿಕ್ಷಕರುಗಳ, ನಿವೃತ್ತ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-12-2020 ಆಗಿರುತ್ತದೆ
Thank you for aparchunity
Tq for opportunity
Schlorship ge jai jai
Thank for giving this opportunity
Very good initiative from the govt.thank you for the same . My daughter passed her MBBS in the year 2018, is she eligible for the scholarship?
for PG she can claim
Very good initiative from the govt.thank you for the same . My daughter passed her MBBS in the year 2018, is she eligible for the scholarship?