ಭದ್ರಾ ಮೇಲ್ದಂಡೆ ಯೊಜನೆ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲವಾದರೂ ವಾಣಿವಿಲಾಸಸಾಗರಕ್ಕೆ ನೀರು ಹರಿಸಲು ಯಾವುದೇ ತೊಂದರೆಯಿಲ್ಲ ಇಂತಹ ಸಂದಭ೯ದಲ್ಲೇ ಹೀಗಾದರೆ ಮುಂದೇನು ? ಎಂಬ ಚಿಂತೆ ರೈತರನ್ನ ಕಾಡುತ್ತಿದೆ.
ಹಾಲಿ ಭದ್ರಾದಿಂದ 12.5 ಟಿ ಎಂ ಸಿ ನೀರು ಹರಿಸಲು ಯಾವುದೇ ತಾಂತ್ರಿಕ ತೊಂದರೆಯಿಲ್ಲ. ಸದ್ಯ 6 ಟಿ ಎಂ ಸಿ ನೀರು ವಾಣಿವಿಲಾಸ ಸಾಗರಕ್ಕೆ ಹರಿಸಲಾಗಿದೆ ಹಾಗೂ ಮಾಚ೯ ತಿಂಗಳವರೆಗೆ ನೀರು ಬಿಡಲು ಅವಕಾಶವಿದೆ ಹಾಗೂ ಸಾಕಷ್ಟು ನೀರಿನ ಸಂಗ್ರಹವಿದೆ. ಇದ್ದಕ್ಕಿದ್ದಂತೆ ನೀರು ನಿಲ್ಲಿಸಿರುವುದು ನೋಡಿದರೆ ಸಕಾ೯ರ ನೀರಿನ ವಿಷಯದಲ್ಲಿ ರಾಜಕೀಯ ಮಾಡಲು ಹೊರಟಿದೆಯೆ ? ಎಂಬ ಸಂಶಯ ಮೂಡುತ್ತಿದೆ.
ಇದರಿಂದ ಸದಾ ಬರಗಾಲ ಪೀಡಿತ ಜನರ ಅಶಾಗೋಪುರವೇ ಕುಸಿದಿದೆ ಎಂದರೆ ಅತಿಶಯೊಕ್ತಿಯಾಗಲಾರದು ಹೆಚ್ಚಿನ ಮಾಹಿತಿಗೆ ವೀಡೀಯೊ ವೀಕ್ಷಿಸಿ.
ಮುಂದುವೆರೆದು ಕಾನೂನು ಹೊರಾಟಕ್ಕೂ ಮುಂದಾಗಲು ಯೋಚಿಸುತ್ತಿದೆ ಎಂದು ವಾಣಿವಿಲಾಸ ಸಾಗರ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ರವರು ತಿಳಿಸಿದರು.