SHARE

Loading

ಮಧುಗಿರಿಯಲ್ಲಿ ಸಮಾಜ ಮುಖಿಯಾಗಿ ಸೇವಾ ಮನೋಭಾವ ದಿಂದ ಕಾರ್ಯನರ್ವಹಿಸುತ್ತಿರುವ ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ಗೆ ಈಗ ಐದನೇ ವರ್ಷದ ಸಂಭ್ರಮ. ಸಮಾನ ಮನಸ್ಕ ಮಹಿಳೆಯರು ಒಂದೆಡೆ ಸೇರಿ ಶಿಕ್ಷಣ, ಆರೋಗ್ಯ ,ಮಹಿಳಾ ಸಬಲೀಕರಣ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ದುರ್ಬಲರ ಸೇವೆಗೆ ಮಹಿಳಾ ಚಾರಿಟಬಲ್ ಟ್ರಸ್ಟ್ ಉದಾರ ದಾನಿಗಳ ನೆರವಿನಿಂದ ಅನೇಕ ಸೇವಾ ಕಾರ್ಯಕ್ರಮ ಗಳಲ್ಲಿ ತೊಡಗಿಸಿಕೊಂಡಿರುವುದು ಹೆಗ್ಗಳಿಕೆಯಾಗಿದೆ. ಕೆಲವು ಭಾರತೀಯ ಆಚಾರ ವಿಚಾರ ಸಂಸ್ಕೃತಿ ಯ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ಪುಸ್ತಕ ದ ರೂಪದಲ್ಲಿ ಸಹ ಹೊರತರಲು ಟ್ರಸ್ಟ್ ಶ್ರಮಿಸುತ್ತಿರುವುದು ಸಹ ಸ್ವಾಗತಾರ್ಹ ಸಂಗತಿಯಾಗಿದೆ. ವಾರ್ಷಿಕೋತ್ಸವ ದ ಸುಸಂದರ್ಭದಲ್ಲಿ ಮಹಿಳಾ ಟ್ರಸ್ಟ್ ನ ಹಿರಿಮೆ ಎತ್ತರಕ್ಕೆ ಬೆಳೆಯಲಿ ಇನ್ನೂ ಹೆಚ್ಚು ಸಮಾಜಸೇವೆಯಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸೋಣವೇ

ವರದಿ ಮತ್ತು ಜಾಹಿರಾತಿಗಾಗಿ ಸಂಪಕಿ೯ಸಿ
ಸಂಪಾದಕರು:ವಿನೋದ್ ಕುಮಾರ್ ಬಿ.ಏನ್.9742494797

By admin

0 thoughts on “ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ಗೆ ಈಗ ಐದನೇ ವರ್ಷದ ಸಂಭ್ರಮ”

Leave a Reply

Your email address will not be published. Required fields are marked *

Translate »