ಇಂದು ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು, ಗುಜ್ಜನಡು ಗ್ರಾಮದಲ್ಲಿ ಶ್ರೀಸಾಯಿ ಲಾ ಛೇಂಬರ್ಸ್ ವತಿಯಿಂದ 2022ನೇ ವರ್ಷದ ನೂತನ ದಿನದರ್ಶಿಕೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜಸೇವಕರಾದ ಶ್ರೀಮತಿ ಸಾಯಿಸುಮನ ಹನುಮಂತರಾಯಪ್ಪ ಅವರು ವಹಿಸಿಕೊಂಡಿದ್ದರು ಈ ಸಮಾರಂಭದಲ್ಲಿ ಪ್ರಾಸ್ಥವಿಕ ಭಾಷಣವನ್ನು ಪಾವಗಡ ತಾಲ್ಲೂಕು ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಪಾಳೇಗಾರ್ ಲೋಕೇಶ್ ಅಣ್ಣ ಅವರು ನೆಡೆಸಿಕೊಟ್ಟರು ಮತ್ತು ಮುಖ್ಯ ಅತಿಥಿಗಳ ಭಾಷಣವನ್ನು ಚಿನ್ನಮ್ಮನಹಳ್ಳಿ ಗ್ರಾಮದ ಯುವಮುಖಂಡರು ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಜಯರಾಮಣ್ಣ ಹಾಗೂ ಕೆ ಟಿ ಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಸಂಜೀವರೆಡ್ಡಿ ಅಣ್ಣನವರು ನೆಡೆಸಿಕೊಟ್ಟರು, ಇದೇ ಸಂಧರ್ಭದಲ್ಲಿ ಬುಡುಸನಹಳ್ಳಿ ಗ್ರಾಮದ ರಮೇಶ್ ಅವರು ತುಮಕೂರಿನ ಅಕ್ಷಯ B.ed ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅವರ ಮುಂದಿನ ವಿಧ್ಯಾಭ್ಯಾಸದ ಖರ್ಚಿಗೆ ಶ್ರೀಮತಿ ಸಾಯಿಸುಮನ ಹನುಮಂತರಾಯಪ್ಪ ಅವರು ಅರ್ಥಿಕ ಸಹಾಯವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ನಮ್ಮ ಗುಜ್ಜನಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಮ್ಮ ರಾಜಣ್ಣ, ಸದಸ್ಯರಾದ ಅನ್ನಪೂರ್ಣಮ್ಮ, Uಚಂದ್ರಪ್ಪ, ಹನುಮಂತರಾಯಪ್ಪ, ಜಗನ್ನಾಥ್, ನಾಗಮಣಿ, ಉಷಾ ಅಶೋಕ್, ಚಂದ್ರಶೇಖರ್ ಉಪಸ್ಥಿತರಿದ್ದರು ಹಾಗೂ ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೊಡಿಗೆಹಳ್ಳಿ ನರಸಿಂಹಪ್ಪಣ್ಣ, ಮಾಜಿ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರಾದ ಕದಿರೇಹಳ್ಳಿ ಜಗನ್ನಾಥ್ ಅಣ್ಣ ಅವರು ಮತ್ತು ನಮ್ಮ ಮಂಗಳವಾಡ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮುಖಂಡರಾದ T ದಾಸಣ್ಣ, ಗೊಂಚಿಕಾರ್ ದಾಸಣ್ಣ, LIC ಮುತ್ತುರಾಯಪ್ಪ, ಮುಗದಾಳಬೆಟ್ಟ ನರಸಿಂಹಮೂರ್ತಿ, ಭಾಸ್ಕರ್ ನಾಯಕ,
ರಾಮಚಂದ್ರಪ್ಪ, ರಂಗೇಗೌಡ, ಹೆಂಜಾರಪ್ಪ, ಮದ್ದೆ ರಾಮಲಿಂಗಪ್ಪ , ರಾಜೇಗೌಡ, ನಾಗರಾಜಪ್ಪ, ರತ್ನಮ್ಮ ಭೂತೇಗೌಡ, ಕಾಂತರಾಜು, ನರಸೇಗೌಡ, ಅಮರೇಂದ್ರನಾಥ್, ಮಹಂತೇಶ್, ಚಂದನ್, ಅಜಯ್ ಗೌಡ ದೇವಲಕೆರೆ, ಅಶೋಕ್, ಈಶ್ವರ, ಹನುಮಂತರಾಯ, ರಾಜಣ್ಣ, ರಘುನಂದನ್, ಶಿವರಾಜ್. ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು… ಈ ಸುಂದರ ಸರಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಣೆ ಮಾಡುವ ಮೂಲಕ ನೆಡೆಸಿಕೊಟ್ಟ ಗುಜ್ಜನಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕಾಪು ರಾಧಾಕೃಷ್ಣ ಸರ್ ಅವರಿಗೆ ಶ್ರೀಮತಿ ಸಾಯಿಸುಮನ ಹನುಮಂತರಾಯಪ್ಪ ಅವರು ಧನ್ಯವಾದಗಳನ್ನು ತಿಳಿಸಿದರು.