SHARE

Loading

ಭಾರತೀಯ ಕಿಸಾನ್ ಸಂಘದಿಂದ ಇಂದು ವಾಣಿವಿಲಾಸಪುರ.ಕುರುಬರಹಳ್ಳಿ.ಕಾತ್ರಿಕೇನಹಳ್ಳಿ ಮತ್ತು ರಂಗೇನಹಳ್ಳಿ ಹಾಗೂ ಇತರೆ ಗ್ರಾಮ ಸಮಿತಿಗಳಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ಆಯಾ ಗ್ರಾಮ ಸಮಿತಿಗಳ ಅದ್ಶಕ್ಷ ಅಧ್ಶಕ್ಷತೆಯಲ್ಲಿ ನೆರವೇರಿಸಲಾಯಿತು.ಈ ಪೂಜಾ ಕಾರ್ಯಕ್ರಮವನ್ನುದ್ದೇಶಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ ಮಂಜುನಾಥ.ಆರ್.ಕಾತ್ರಿಕೇನಹಳ್ಳಿ ಮಾತನಾಡಿ ದೇಶದಾದ್ಶಂತ ನಮ್ಮ ಸಂಘಟನೆಯಿಂದ ಎಲ್ಲಾ ಗ್ರಾಮಘಟಕಗಳಲ್ಲಿಯೂ ಕೂಡ ಭಾರತಮಾತಾ ಪೂಜಾ ಕಾರ್ಯಕ್ರಮ ನೆರವೇರಿಸುತ್ತಿದ್ದಾರೆ ಇದರ ಉದ್ದೇಶ ಪ್ರತಿಯೊಂದು ಪ್ರಾಣಿ ಸಂಕುಲವು ಜೀವಿಸಬೇಕಾದರೆ ಪ್ರಕೃತಿಯಲ್ಲಿ ಸಿಗುವ ನೆಲ ಜಲ ಗಾಳಿ ಎಲ್ಲವೂ ಕೂಡ ನಮಗೆ ಅವಶ್ಶಕವಾಗಿರುತ್ತದೆ ಇದೆಲ್ಲದನ್ನೂ ಕೊಡುವ ಭೂ ಮಾತೆಗೆ ಋಣ ತೀರಿಸಬೇಕಾದರೆ ನಾವೂ ಪ್ರಕೃತಿಯನ್ನು ರಕ್ಷಿಸಬೇಕು ನಾವು ತಾಯಿ ಭಾರತಾಂಭೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ನಮ್ಮ ಸಂಘಟನೆಯು ದೇಶದಾದ್ಶಂತ ಮಾಡುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸದಸ್ಶರಾದ ಕೆ.ಕುಮಾರ್. ತಾಲ್ಲೂಕು ಅದ್ಶಕ್ಷರಾದ ಸುಬ್ರಮಣಿ.ತಾಲ್ಲೂಕು ಕಾರ್ಯಧರ್ಶಿಗಳಾದ ಪುಟ್ಟರಾಜು ಹಾಗೂ ಆಯಾ ಗ್ರಾಮ ಸಮಿತಿ ಅಧ್ಶಕ್ಷರು ಪದಾಧಿಕಾರಿಗಳು ಸದಸ್ಶರು ಹಾಗೂ ಊರಿನ ರೈತ ಮುಖಂಡರು ಹಾಜರಿದ್ದರು.

By admin

Leave a Reply

Your email address will not be published. Required fields are marked *

Translate »