SHARE

Loading

ಶ್ವೇಶ್ವರಯ್ಯ ಜಲ ನಿಗಮ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಗಿರಿಜನ ಉಪಯೋಜನೆಯಡಿ ಕರೇಮಾದೇನಹಳ್ಳಿ ಗ್ರಾಮದ ರಸ್ತೆ ಹಾಗೂ ಚರಂಡಿ ಕಾಮಗಾರಿಗಾಗಿ 70 ಲಕ್ಷ ರೂ ಅನುದಾನ ಮಂಜೂರು ಮಾಡಿಸಿ ಇಂದು ಭೂಮಿ ಪೂಜೆಯನ್ನು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ರವರು ನೆರವೇರಿಸಿದರು.. ಹಾಗೆಯೇ ಕಂದಾಯ ಇಲಾಖೆಯಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಣೆ ಮತ್ತು .. ಸಾಮಾಜಿಕ ಭದ್ರತೆ ಯೋಜನೆಯಡಿ ಮಂಜೂರಾದ ಆದೇಶ ಪ್ರತಿಗಳನ್ನು ವಿತರಿಸಿದರು ಜೊತೆಗೆ ಕೃಷಿ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಪರಿಕರಗಳ ವಿತರಣೆ ಮಾಡಿದರು…

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಆದಷ್ಟು ಶೀಘ್ರವಾಗಿ ಬಾಕಿ ಇರುವ ಎಲ್ಲಾ ಸಾಗುವಳಿ ಚೀಟಿ ನೀಡುವ ಕೆಲಸ ಆಗಬೇಕು ಎಂದು ತಾಲ್ಲೂಕ್ ದಂಡಾಧಿಕಾರಿಗಳಾದ ಮಮತಾ ಮೇಡಂ ಅವರಿಗೆ ಸಭೆಯಲ್ಲಿಯೇ ಸೂಚಿಸಿದರು.. ಜೊತೆಗೆ ಗೋಮಾಳ ಮತ್ತು ಅರಣ್ಯ ಎಂಬ ಕಾರಣಕ್ಕೆ ಸಾಗುವಳಿ ನೀಡಲು ಅಡಚಣೆಯಾಗುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಕಮಿಟಿ ರಚನೆಯಾಗಿದೆ ಅದರಲ್ಲಿ ನಾನೇ ಸೂಕ್ತ ಕಾನೂನು ರೂಪಿಸಿ ಮುಂದಿನ ದಿನಗಳಲ್ಲಿ ಗೋಮಾಳ ಮತ್ತು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡುವ ಮೂಲಕ ರೈತರಲ್ಲಿ ಆಶಾಭಾವನೆ ಮೂಡುವಂತೆ ಮಾಡಿದ್ದಾರೆ.. ಇದೇ ವಿಷಯವಾಗಿ ಮಾತನಾಡುವಾಗ ಬಡ ರೈತರನ್ನು ನೆನೆದು ಭಾವನಾತ್ಮಕವಾಗಿ ಕಣ್ಣಂಚಲ್ಲಿ ನೀರು ತುಂಬಿಕೊಂಡ ಸಚಿವರ ಸಹೃದಯ…ಕಂಡು ನೆರೆದಿದ್ದ ಅವರ ಅಭಿಮಾನಿಗಳ ಕಣ್ಣುಗಳೂ ಒದ್ದೆಯಾಗುವಂತೆ ಮಾಡಿತು..

ಈ ಕಾರ್ಯಕ್ರಮದಲ್ಲಿ ತಾಲ್ಲೂಕ್ ದಂಡಾಧಿಕಾರಿಗಳಾದ ಶ್ರೀಮತಿ ಮಮತರವರು ರಾಮಲಿಂಗಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಪವಿತ್ರ ಈರಣ್ಣನವರು ..ಮಾಜಿ ತಾಲ್ಲೂಕ್ ಪಂಚಾಯ್ತಿ ಅಧ್ಯಕ್ಷರಾದ ಬುಕ್ಕಾಪಟ್ಣ ಮಂಜುನಾಥ್..ಬಿ.ಜೆ.ಪಿ ಮುಖಂಡರಾದ ಹೊಸಪಾಳ್ಯ ಸತ್ಯನಾರಾಯಣ್..ಬುಕ್ಕಾಪಟ್ಣ ಸತ್ಯನಾರಾಯಣ್ ..ಬರಕನಾಳ್ ವಿಶ್ವನಾಥ್ ಮತ್ತು ಗ್ರಾಮಪಂಚಾಯ್ತಿಯ ಸದಸ್ಯರುಗಳಾದ ಪುಟ್ಟಚನ್ನಪ್ಪ..ಶಾಂತರಾಜು..ಲಕ್ಷ್ಮಯ್ಯ..ಶ್ರೀನಿವಾಸ್..ಗಿರೀಶ್..ರೇವಣ್ಣ.. ಕರಿಯಪ್ಪ..ಪುಟ್ಟೇಗೌಡ್ರು..ರಂಗಧಾಮಯ್ಯ..ನರಸಿಂಹಮೂರ್ತಿ..ಶಿಡ್ಲೇಕೋಣ ಸ್ವಾಮಿ..ಮುಂತಾದವರು ಹಾಜರಿದ್ದರು.

By admin

Leave a Reply

Your email address will not be published. Required fields are marked *

Translate »