ಕೊರಟಗೆರೆ:-ತಾಲೂಕಿನವಜ್ಜನಕುರಿಕೆ -ಸ್ವ ಉದ್ಯೋಗ ಆಧಾರಿತ ರೈತ ಕ್ಷೇತ್ರ ಪಾಠ ವಜ್ಜನ ಕುರಿಕೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷಿ ಮೇಲ್ವಿಚಾರಕ ಸಂತೋಷ ತಾಲೂಕಿನಲ್ಲಿ ವ್ಯಾಪಾರ ಆದಾರಿತ ಸ್ವ ಉದ್ಯೋಗ ಮಾಡುವ ಸದಸ್ಯರಿಗೆ ಯೋಜನೆ ವತಿಯಿಂದ ಕಡಿಮೆ ಬಡ್ಡಿದರದ ಸಿಡ್ಬಿ ಸಮೃದ್ಧಿ ಸಾಲ ಸೌಲಭ್ಯ ಇದ್ದು ಪ್ರಯೋಜನ ಪಡೆಯುವುದರ ಜೊತೆಗೆ ಯೋಜನೆಯ ತುಮಕೂರು ವತಿಯಿಂದ ಸಿಗುವ ತರಬೇತಿಗಳ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ರೂಪಿಸಿ ಕೊಳ್ಳಿ ಎಂದು ತಿಳಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಜ್ಜನಕುರಿಕೆ ಗ್ರಾಮ ಪಂಚಾಯತ್ ಸದಸ್ಯ ಸಂಜಯ್ ಕುಮಾರ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಕಾರ್ಯಕ್ರಮ ನಡೆಸುತ್ತಿದ್ದು ಗ್ರಾಮದ ಎಲ್ಲರೂ ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಿರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಜ್ಜನ ಕುರಿಕೆ ಗ್ರಾಮ ಪಂಚಾಯತ್ ಸದಸ್ಯರು ಆದ ರಾಮಲಕ್ಷಮ್ಮ, ಸೇವಾಪ್ರತಿನಿಧಿ ಅಭಿಲಾಶ, ಸಂಘದ ಸದಸ್ಯರು ಇದ್ದರು.
