ಮಧುಗಿರಿ: ತಾಲೂಕಿನ ಗಡಿಭಾಗವಾದ ಐಡಿಹಳ್ಳಿ ಹೋಬಳಿಗೆ ನೂತನ ಪೊಲೀಸ್ ಠಾಣೆ ನೀಡುವಂತೆ ಸದನ ದಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದರು.
ಸದನದಲ್ಲಿ ಭಾಗವಹಿಸಿ ಚುಕ್ಕೆ ಪ್ರಶ್ನೆ ಮೂಲಕ ತಾಲೂಕಿಗೆ ಪೊಲೀಸ್ ಠಾಣೆಗೆ ಒತ್ತಾಯಿಸಿ ಮಾತನಾಡಿ, ಶಾಸಕರು, ಐಡಿಹಳ್ಳಿ ಗಡಿಭಾಗವಾಗಿದೆ. ಸೂತ್ತಲೂ ನೆರೆಯ ಆಂಧ್ರದ ಭೌಗೋಳಿಕ ಪ್ರದೇಶವೇ ತುಂಬಿದೆ, ಅಲ್ಲದೆ ಪುರವರ ಹೋಬಳಿಯನ್ನು ಕೂಡ ಕೊಡಿಗೇನ ಹಳ್ಳಿಗೆ ಹಾಗೂ ಮಿಡಿಗೇಶಿಗೆ ಸರಹದ್ದು ನಿಗದಿಪಡಿಸಿದ್ದು, 15-20 ಕಿ.ಮೀ. ದೂರದ ಹಾದಿಯಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಸಚಿವ ಐಡಿಹಳ್ಳಿಗೆ ನೂತನ ಪೊಲೀಸ್ ಠಾಣೆ ಮಂಜೂರು ಒತ್ತಾಯಿಸಿದರು. ಮನವಿ ತಿರಸ್ಕರಿಸಿದ ಸಚಿವ ಅರಗ ಜ್ಞಾನೇಂದ್ರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಪೊಲೀಸ್ ನಿಯಮದ ಪ್ರಕಾರ 50 ಸಾವಿರ ಜನಸಂಖ್ಯೆ ಇರಬೇಕಿದೆ. 100ಕ್ಕೂ ಹೆಚ್ಚು ಅಪರಾಧ ಪ್ರಕರಣ ಈ ವ್ಯಾಪ್ತಿಯಲ್ಲಿ ನಡೆಯಬೇಕಿದೆ. ಅಲ್ಲದೆ, ಮಧುಗಿರಿಯಲ್ಲಿ ಕಾನೂನು ಸುವ್ಯವಸ್ಥೆ ಸಮರ್ಥವಾಗಿದ್ದು, ಈ ಬಗ್ಗೆ ಯಾವುದೇ ಅಹಿತಕರ ಈ ಘಟನೆಗಳು ವರದಿಯಾಗಿ ನಿರ್ದಿಷ್ಟ ಪ್ರಕರಣ ದಾಖಲಾಗುತ್ತಿಲ್ಲ. ಆದ್ದರಿಂದ ಐಡಿಹಳ್ಳಿಗೆ ನೂತನವಾಗಿ ಪೊಲೀಸ್ ಠಾಣೆ ಮಂಜೂರಿಗೆ ಕಾನೂನಿನಲ್ಲಿ ಅವಕಾಶ ಇಲ್ಲದ ಮನವಿಯನ್ನು ಕಾರಣ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ.