ತುರವೆಕರೆ ತಾಲೂಕಿನ ಕಸಬಾ ಹೋಬಳಿ ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ವಿಗ್ರಹ ಪ್ರಾಣಪ್ರತಿಷ್ಟಾಪನ ಮಹೋತ್ಸವದ ದಿವ್ಯಾಸಾನಿಧ್ಯವಹಿಸಿ ಆಶಿವ೯ಚನ ನೀಡುತ್ತಾ ಪರಮಪೂಜ್ಯ ಜಗದ್ಗುರು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಯವರು ದೇವೇಗೌಡರ ಸೋಲಿನ ವ್ಯಾಖ್ಯಾನ ಮಾಡುತ್ತಾ ಕುಂಚಿಟಿಗ ಸಮಾಜವನ್ನ ಒಂದೊಂದೆ ತೊಟ್ಟು ವಿಷ ಹಾಕಿ ಕೊಂದು ಬಿಟ್ಟರು ಅದರ ಪ್ರತಿಫಲವೇ ದೇವೇಗೌಡರ ಸೋಲು ಹಾಗೂ ಇಳಿವಯಸ್ಸಿನಲ್ಲೂ ಸಹಾ ರಾಜ್ಯದ ನೆಲ ಜಲದ ಬಗ್ಗೆ ಧ್ವನಿಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.ಕಳೆದ ಬಾರಿ ಪರಮಪೂಜ್ಯರು ಬರೆದ ಪತ್ರದ ಆಧಾರದಮೇಲೆ ದೇವೇಗೌಡರು ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರ ಮೂಲಕ ಕೇಂದ್ರ ಓ ಬಿ ಸಿ ಸೇಪ೯ಡೆಗೆ ಶಿಫಾರಸ್ಸು ಪತ್ರಬರೆದರು ಎಂದು ನುಡಿದರು.ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಉಪಜಾತಿಗಳ ಮಧ್ಯೆ ಧಮ೯ ಧಮ೯ಗಳ ಮಧ್ಯೆ ಬಿರುಕು ತಂದು ಸಮಾಜದ ಸಾಮರಸ್ಯ ಹಾಳು ಮಾಡುವ ವಿಷಪಾತಕರ ಬಗ್ಗೆ ಎಚ್ಚರದಿಂದಿರಲು ಸಹ ತಿಳಿಸಿದರು. ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪನವರ ನೇರ ನಡೆಯ ಬಗ್ಗೆಯೂ ಸಹಾ ಪ್ರಶಂಸೆ ವ್ಯಕ್ತಪಡಿಸಿದರು. ಮಾಜಿ ಶಾಸಕರ ಹೋರಾಟದ ಪ್ರತಿಫಲವೇ ಇಂದು ನೀರಾವರಿ ಯೋಜನೆ ಜಾರಿಯಾಗಿದೆ ಎಂದರು.
stromectol tablets for humans for sale – stromectol 3 mg price carbamazepine 400mg canada