SHARE

Loading

ಜಲ ಜೀವನ್ ಮಿಷನ್ ಯೋಜನೆಯಡಿ ಹಿರಿಯೂರು ತಾಲ್ಲೂಕಿನ 131 ಹಳ್ಳಿಗಳಿಗೆ ನಳದ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದು ಸಂತಸ ತಂದಿದೆ. ೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕಿ ಪೂಣಿ೯ಮಾ ಶ್ರಿನಿವಾಸ್ ರವರ ಕಾರ್ಯಕ್ಕೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು. ಚಿತ್ರದುರ್ಗ ರಸ್ತೆಯ NH 4 ಸಮೀಪದಲ್ಲಿ ಶಾಸಕರಿಗೆ ಶಾಲು ಹೊದೆಸಿ,ಸನ್ಮಾನಿಸಿ , ಗೌರವಿಸಲಾಯಿತು ಹಾಗೂ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ ನೀರಾವರಿ ಹೋರಾಟಗಾರರ ಕಸವನಹಳ್ಳಿ ರಮೇಶ್ “ಐವತ್ತು ವರ್ಷಗಳ ಹಿಂದೆ ವಾಣಿವಿಲಾಸ ಸಾಗರ ದಿಂದ ಚಿತ್ರದುರ್ಗ ನಗರಕ್ಕೆ ನೀರು ಸರಬರಾಜು ಮಾಡಲಾಯಿತು,ಕಳೆದ ಹತ್ತು ವರ್ಷಗಳ ಹಿಂದೆ ಚಳಕೆರೆ ಮತ್ತು ನಾಯಕನಹಟ್ಟಿಗೆ ಕುಡಿಯುವ ನೀರು ಕೊಡಲಾಯಿತು.
ಆದರೆ ವಾಣಿವಿಲಾಸ ಸಾಗರದ ಬುಡದಲ್ಲಿರುವ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿನ ಬೇಡಿಕೆ ಬೇಡಿಕೆ ಆಗಿಯೇ ಉಳಿಯಿತು. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಚಿತ್ರದುರ್ಗ ನಗರಕ್ಕೆ ನೀರು ಸರಬರಾಜು ಮಾಡಿದರು. ಆದರೆ ಹಿರಿಯೂರು ತಾಲ್ಲೂಕಿನ 131 ಹಳ್ಳಿಗಳಿಗೆ ವಾಣಿವಿಲಾಸ ಸಾಗರ ಮತ್ತು ಗಾಯತ್ರಿ ಜಲಾಶಯ ಇದ್ದರೂ ಸಹ ಕುಡಿಯುವ ನೀರು ಕೊಡಲಾಗಲಿಲ್ಲ.
ಅ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸಿರುವುದು ಅತ್ಯಂತ ಅಭಿನಂದನಾರ್ಹ ಕೆಲಸ.. ಗ್ರಾಮೀಣ ಭಾಗದ ಬಡವರ , ದಲಿತರ,ಮಹಿಳೆಯರ ಬಹುದಿನದ ಬೇಡಿಕೆ ಕುಡಿಯುವ ನೀರು , ವಿಷಪೂರಿತ ಕುಡಿಯುವ ನೀರಿ ನಿಂದಾ ಅನಾರೋಗ್ಯಕೊಳಗಾಗಿ ತೊಂದರೆಗೊಳಗಾ ಗಿದ್ದ ಬಡಜನತೆ ವಾಣಿವಿಲಾಸ ಸಾಗರ ಮತ್ತು ಗಾಯತ್ರಿ ಜಲಾಶಯದ ಶುದ್ಧ ಕುಡಿಯುವ ನೀರು ಸರಬರಾಜು ಹಾಗುವ ಕಾರಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಪಿಟ್ಲಾಲಿ ಶ್ರೀನಿವಾಸ್, ರಾಮಚಂದ್ರ ಕಸವನಹಳ್ಳಿ, ಮೋಹನ್ ಗೌಡ ರಂಗನಾಥಪುರ, ಟಿಎನ್ ವೆಂಕಟೇಶ್, ಸಂಭ್ರಮ ಅಂಚಿ ಕೊಂಡರು

By admin

0 thoughts on “ದೀಪದ ಕೆಳಗೆ ಕತ್ತಲೆ ” ಮತ್ತು ಕುಡಿಯುವ ನೀರಿನ ಭಾಗ್ಯ”

Leave a Reply

Your email address will not be published. Required fields are marked *

Translate »