SHARE

Loading

ಇಂದು ನಮ್ಮ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ದೊರತಿದೆ ಅಂದರೆ, ಅದರ ಹಿಂದಿನ ದಾರಿ ತುಂಬಾ ಕಷ್ಟಕರವಾಗಿತ್ತು. ಎಷ್ಟೇ ಕಷ್ಟ ಬಂದರು, ಅಡೆತಡೆಗಳಾದರು, ಸರಕಾರಕ್ಕೆ ಬೆಂಬಿಡದೆ. ಬೇತಾಳನಂತೆ ಬೆನ್ನು ಹತ್ತಿ ನಮಗೆ ನ್ಯಾಯ ಕೊಡಿಸುವಲ್ಲಿ ಯಶಸ್ವೀ ಆಗಿದ್ದರೆ ನಮ್ಮ ಹೋರಾಟದ ಹುಲಿ ಶಿವಾಜಿ ಅಣ್ಣನವರು. ದಿನಾಂಕ: 20-03-2020ರಂದು ಕೇಂದ್ರ ಸರಕಾರ ತಳವಾರ ಪರಿವಾರ ಸಮುದಾಯಕ್ಕೆ st ಮೀಸಲಾತಿ ಆದೇಶ ಹೊರಡಿಸಿತು, ನಾವು ಎಲ್ಲರೂ ಖುಷಿ ಪಟ್ಟೆವು. ಅದರೇ ಆ ಖುಷಿ ತುಂಬಾ ದಿನ ಉಳಿಯಲಿಲ್ಲ. ನಮ್ಮ ತಳವಾರ ಸಮಾಜಕ್ಕೆ st ಮೀಸಲಾತಿ ನೀಡಬಾರದು ಎಂಬ ದುರಾಲೋಚನೆಯಿಂದ ರಾಜ್ಯ ಸರಕಾರ, ಮತ್ತು ಕೆಲವು bjp ನಾಯಕರು ಕೇಂದ್ರ ಸರಕಾರದ ಆದೇಶವನ್ನು ತಿರುಚಿ ಹೇಳಿಕೆ ನೀಡುತ್ತಾ ಸಾಗಿದರು. ಇದರಿಂದ ಬೇಸೆತ್ತ ನಮ್ಮ ಯುವ ಹೋರಾಟಗಾರಗು ಸರ್ಕಾರಕ್ಕೆ ಸವಾಲ್ ಎಸೆದರು. ನಮ್ಮ ಹಕ್ಕನ್ನು ನಾವು ಹೋರಾಟದಿಂದ ತೆಗೆದುಕೊಳ್ಳೋಣ ಎಂದು ಯುವಕರಲ್ಲಿ ಹೋರಾಟದ ಕಿಚ್ಚು ಹಚ್ಚಿದರು. ಅದರಂತೆ ಹಳ್ಳಿ ಹಳ್ಳಿಗನ್ನು ಸುತ್ತಾಡಿ ಸಮಾಜದ ಸಂಘಟನೆ ಮಾಡಿದರು ನಮ್ಮ ಹೋರಾಟದ ಹುಲಿ ಶಿವಾಜಿ ಮೇಟಗಾರ ಅವರು. ತಳವಾರ ಪರಿವಾರ ಸಮಾಜವನ್ನು st ಪಟ್ಟಿಗೆ ಸೇರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದರು ರಾಜ್ಯ ಸರಕಾರ st ಪ್ರಮಾಣ ಪತ್ರ ನೀಡದೆ ಅನ್ಯಾಯ ಮಾಡುತ್ತಿದ್ದು, ಉಪ ಮುಖ್ಯಮಂತ್ರಿಗಳು ದ್ವಂದ್ವ ಹೇಳಿಕೆ ನೀಡುತ್ತಿದ್ದು.. ಕೇಂದ್ರ ಸರಕಾರದ ಆದೇಶವನ್ನು ತಿರುಚಿ… ರಾಜ್ಯ ಸರಕಾರ ಬೇರೆ ಬೇರೆ ಸುತ್ತೋಲೆಗಳನ್ನು ಹೊರಡಿಸುತ್ತಾ.. ನಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹ ವಿಸ್ತಾರವಾಗಿ..07-07-2020ರಂದು ಲೈವ್ ಬಂದು ಹೇಳಲಾಯಿತು. 24-07-2020ರಂದು ವಿಜಯಪುರದಲ್ಲಿ ಬ್ರಹತ್ ಹೋರಾಟ ಮಾಡಿ ನಮ್ಮ ಹಕ್ಕು ಪಡಿಯೋಕ್ಕೆ ಯುವಕರಿಗೆ ಕರೆ ನೀಡಿದರು. 21-07-2020ರಂದು ಲೈವ್ ಬರುವ ಮೂಲಕ… ದಿನಾಂಕ 24-07-2020ರಂದು ವಿಜಯಪುರದಲ್ಲಿ ನಡೆಯಬೇಕಿದ್ದ ಹೋರಾಟವನ್ನು ಜಿಲ್ಲೆಯ ಹಿರಿಯರ ಮಾರ್ಗದರ್ಶನ ದಿಂದ 15ದಿನ ಮುಂದುಡಿದ ಬಗ್ಗೆ ಹೇಳಲಾಯಿತು. 21-08-2020ರಂದು ಲೈವ್ ಬಂದು ನಮ್ಮ ಬೇಡಿಕೆಗೆ ಯಾರು ಸ್ಪಂದನೆ ನೀಡದೆ ಇರದ ಕಾರಣ 31-08-2020ರಂದು ವಿಜಾಪುರ ದಲ್ಲಿ ತಳವಾರ ಸಮಾಜದ ವಿಭಿನ್ನವಾದ ಬ್ರಹತ್ ಹೋರಾಟದ ಬಗ್ಗೆ ಹೇಳಿದರು. 29-08-2020ರಂದು ಲೈವ್ ಬರುವ ಮೂಲಕ ಕಾಡು ಜನರ ವೇಷದಲ್ಲಿ, ಅರಬೆತ್ತಲೆಯಾಗಿ.. ಸೊಂಟಕ್ಕೆ ಬೇವಿನ ತಪ್ಪಲ್ಲ ಕಟ್ಟಿಕೊಂಡು ದಿನಾಂಕ 31-08-2020ರಂದು ವಿಜಯಪುರದಲ್ಲಿ ಹೋರಾಟ ಮಾಡುವುದುರ ಬಗ್ಗೆ ಮಾತನಾಡಲಾಯಿತು. 31-8-2020ರಂದು ವಿಜಯಪುರದಲ್ಲಿ 10ಸಾವಿರಕ್ಕು ಅದಿಕ ಜನಗಳು ಸೇರಿ ಕಾಡು ಜನರ ವೇಷದಲ್ಲಿ, ಅರಬೆತ್ತಲೆಯಾಗಿ.. ಪ್ರತಿಭಟನೆ ಮೆರವಣಿಗೆ ಮೂಲಕ dc ಗೆ ಮನವಿ ನೀಡಲಾಯಿತು. 01-10-2020ರಂದು ಫೇಸ್ಬುಕ್ ಲೈವ್ ಬಂದು ಚಳಿಗಾಲ ಅಧಿವೇಶನದಲ್ಲಿ ನಮ್ಮ ಸಮಾಜದ ಬಗ್ಗೆ ಯಾರು ಧ್ವನಿ ಎತ್ತದೇ ಇದ್ದಿದಕ್ಕೆ, ನ್ಯಾಯ ಸಿಗದಿದ್ದಕ್ಕೆ.. ಸರಕಾರದ ವಿರುದ್ಧ ಆಕ್ರೋಶ ವೆಕ್ತಪಡಿಸಿದರು. ದಿನಾಂಕ 05-10-2020ರಂದು ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನಲ್ಲಿ, 09-10-2020ರಂದು ಆಳಂದ್ ತಾಲೂಕಲ್ಲಿ, ಹಾಗೂ ಅಪಜಲಪುರಲ್ಲಿ… ಸುರುಪುರು ತಾಲೂಕಲ್ಲಿ ತಳವಾರ ಸಮಾಜದ ಹೋರಾಟಗಳು ಆದವು. ದಿನಾಂಕ:11-11-2020ರಂದು ಮುದೋಳ’ದಲ್ಲಿ ಬೇಟೆಗಾರರ ವೇಷದಲ್ಲಿ… ಯುವಕರು, ಸಾವಿರಾರು ಮಹಿಳೆಯರು ಸೇರಿ ಬ್ರಹತ್ st ಹೋರಾಟ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲಾಯಿತು. ಹೀಗೆ ನಾನಾ ಜಿಲ್ಲೆಗಳಲ್ಲಿ… ನಾನಾ ವೇಷ ಭೂಷಣ ತೊಟ್ಟು… 15ತಿಂಗಳಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಹೇಳುತ್ತಾ ಹೊರಟರೆ ಶಿವಾಜಿ ಅಣ್ಣನ ಹೋರಾಟದ ಹಾದಿ ಮುಗಿಯುವದಿಲ್ಲ. ಜೀವನದುದ್ದಕ್ಕೂ ಹತ್ತು ಹಲವು, ವಿಭಿನ್ನ ವಿಶಿಷ್ಟವಾದ ಹೋರಾಟಗಳನ್ನು ಮಾಡುತ್ತ ಬಂದವರು ಶಿವಾಜಿ ಮೇಟಗಾರ್ ಅವರು. ಇಂತಹ ನಿಷ್ಷಕ್ಷವಾದ ಹೋರಾಟಗಾರರಿಗೆ, ಹೋರಾಟಗಳಿಗೆ ಬೆಂಬಲಿಸಿದರಿಗಿಂತ ಹೀಯಾಳಿಸಿದವರು, ಕಾಲು ಎಳದವರೇ ಹೆಚ್ಚು. ಅದನೆಲ್ಲ ಮೆಟ್ಟಿ ನಿಂತು… ಸಮಾಜಕ್ಕಾಗಿ ತಮ್ಮ ಸರ್ವಸ್ವನ್ನೇ ಮುಡುಪಾಗಿಟ್ಟ ಸಮಾಜ ಸೇವಕ, ತಳವಾರ ಸಮಾಜದ ಅಪರೂಪದ ಮುತ್ತು, ಹೋರಾಟದ ಹುಲಿ ಶಿವಾಜಿ ಅಣ್ಣನವರಿಗೆ ಸಲಾಂ ಹೇಳಲೇ ಬೇಕು. ಇಂತಿ ನಿಮ್ಮ ಸಹೋದರ #ಅಲೋಕ್_ರೋಡಗಿ.

By admin

0 thoughts on “ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ”

Leave a Reply

Your email address will not be published. Required fields are marked *

Translate »