ಬೆಳಗಾವಿಯಲ್ಲಿ MES ಪುಂಡರು ನಾಡಿನ ಸ್ವಾಭಿಮಾನದ, ಅಸ್ಮಿತೆಯ ಪ್ರತೀಕವಾದ ನಾಡ ಧ್ವಜವನ್ನು ಸುಟ್ಟಿರುವುದು ಹಾಗೂ ನಾಡಿನ ಬಹುದೊಡ್ಡ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿರಾಯಣ್ಣರ ಪ್ರತಿಮೆ ವಿರೂಪಗೊಳಿಸಿರುವುದು ಅಕ್ಷಮ್ಯ ಅಪರಾಧ.
ಸರ್ಕಾರಗಳು ಕೇವಲ ಆಡಳಿತ ನಡೆಸುವುದಕ್ಕೆ ಮಾತ್ರವಲ್ಲದೆ, ಯಾವ ನೆಲದಲ್ಲಿ ಆಡಳಿತ ನಡೆಸುತ್ತಾರೊ ಆ ನೆಲದ ಸ್ವಾಭಿಮಾನವನ್ನ, ಸಂಸ್ಕೃತಿಯನ್ನ, ಭಾಷೆಯನ್ನ, ಪರಂಪರೆಯನ್ನ ಎತ್ತಿ ಹಿಡಿಯುವಂತ, ಬೆಳೆಸುವಂತ, ಸಂರಕ್ಷಿಸುವಂತ ಜವಾಬ್ದಾರಿಯನ್ನು ಕೂಡ ಜನ ಅವರಿಗೆ ನೀಡಿರುತ್ತಾರೆ. ಆದ್ದರಿಂದ ನಾಡಿನ ಯಾವುದೇ ಮೂಲೆಯಲ್ಲಿ ಭಾಷೆಗೆ, ನೆಲಕ್ಕೆ, ಜಲಕ್ಕೆ, ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾದಾಗ ಸರ್ಕಾರಗಳು ತುರ್ತು ಕ್ರಮ ಕೈಕೊಳ್ಳಬೇಕಾಗುತ್ತದೆ ಮತ್ತು ಅಂತಹ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯುವಂತ ಕೆಲಸಗಳನ್ನು ಮಾಡಬೇಕಾಗುತ್ತದೆ….
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು,
ಪೀಠಾಧ್ಯಕ್ಷರು, ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನ.