ಮಧುಗಿರಿ: ಸಕಲ ಜೀವರಾಶಿಗಳ ರಕ್ಷಕ ಗಂಗೆಯನ್ನು ಪೂಜಿಸುವುದು ನಮ್ಮ ಸಂಸ್ಕೃತಿ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ದೊಡೇರಿ ಹೋಬಳಿ ವಿರುಪಗೊಂಡನಹಳ್ಳಿ ಗ್ರಾಮದ ರಂಗನಾಥ ಸ್ವಾಮಿ ಉತ್ಸವ ಹಾಗೂ ಕೋಡಿ ಬಿದ್ದ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಬಾರಿ ನಿರೀಕ್ಷೆಗೂ ಮೀರಿ ಅಧಿಕ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ರೈತನು ತನ್ನ ಬದುಕು ಕಟ್ಟಿಕೊಂಡು ಸಂಕಷ್ಟಗಳಿಂದ ದೂರವಾಗಲಿ. ನಮಗೆ ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಯೋಧರ ಬಗ್ಗೆ ನಮ್ಮ ನಿತ್ಯ ಪ್ರಾರ್ಥನೆ ಇರಲಿ, ಧರ್ಮದ ಹಾದಿಯಲ್ಲಿ ನಡೆದು ಧರ್ಮವನ್ನು ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ರಾಜಣ್ಣ, ನಾಗಭೂಷಣ್, ಕುಮಾರ್, ರಂಗನಾಥಪ್ಪ, ಚಂದ್ರಶೇಖರ್, ರಾಮಣ್ಣ, ಪಟ್ಟದ ಪೂಜಾರ್ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು