ಮಧುಗಿರಿ ತಾಲ್ಲೂಕು ಸಕಾ೯ರಿ ನೌಕರರ ಸಂಘದವತಿಯಿಂದ ಏಪ೯ಡಿಸಿದ್ದ 2022 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶಿಲ್ದಾರಾದ ಕೆ ಅರುಂಧತಿಯವರು ಮಾತನಾಡಿ ಕೋವಿಡ್ ಸಂಕಷ್ಥದಲ್ಲಿ ಸಕಾ೯ರಿ ನೌಕರರ ಪಾತ್ರ ಯಾರೂ ಮರೆಯುವಂತಿಲ್ಲ ಎಂದರು. ಇದೆ ಕಾಯ೯ಕ್ರಮದಲ್ಲಿ ಉಪವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ ನಮ್ಮ ತಂದೆ ತಾಯಿ ಮಾಡಿದ ಪುಣ್ಯದ ಫಲದಿಂದ ಸಕಾ೯ರಿ ನೌಕರಿ ಲಭಿಸಿದೆ ಎಂದರು ಹಾಗೂ ನೌಕರಿಯನ್ನು ಶ್ರದ್ದೆಯಿಂದ ನಿವ೯ಹಿಸಲು ತಿಳಿಸಿದರು.ತಾಲ್ಲೂಕು ಪಂಚಾಯತಿ ಇ ಓ ಲಕ್ಷ್ಮಣ್ ರವರು ಮಾತನಾಡಿ ನೌಕರ ಸಂಘದ ಕ್ರಿಯಾ ಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದಭ೯ದಲ್ಲಿ ಕ್ರಿಡಾಕೂಟದಲ್ಲಿ ಪದಕಗಳಿಸಿದವರನ್ಮು ಸನ್ಮಾನಿಸಲಾಯಿತು
ಗೌರವ ಅಧ್ಯಕ್ಷ ಜಯರಾಮಯ್ಯ ಉಪಾಧ್ಯಕ್ಷರಾದ ಸುರೇಶ್ ಬಿ ಇ ಓ ನಂಜುಂಡಯ್ಯ ಆರೋಗ್ಯಾಧಿಕಾರಿ ರಮೇಶ್ ಬಾಬು ಸಂಘದ ಪಧಾಧಿಕಾರಿಗಳಾದ ಶಶಿಕುಮಾರ್ ಗೋವಿಂದರಾಜು ಕೆ ಬಿ ಸಿದ್ದೇಶ್ ಚಿಕ್ಕರಂಗಪ್ಪ ಉಪಸ್ಥಿತರಿದ್ದರು.
stromectol tablets for humans – order candesartan 8mg without prescription where can i buy carbamazepine