SHARE

Loading

ನಾವಿಂದು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ .ಕೊರೋನ ವೈರಾಣು ಮತ್ತು ರಾಜಕೀಯ ವೈರಾಣುಗಳು ,ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ತಳಮಳಗೊಳಿಸುತ್ತಿವೆ .ಕುವೆಂಪುರವರ ಚಿಂತನೆಗಳು ರೋಗಗ್ರಸ್ತ ಮನಸ್ಸಿಗೆ ಕೊಡುವ ಔಷಧಗಳು.  ಎಂದು ಹಿರಿಯ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯರವರು ನುಡಿದರು.

ಕರ್ನಾಟಕ ಲೇಖಕಿಯರ ಸಂಘ (ರಿ)  ತುಮಕೂರು ಜಿಲ್ಲಾ ಶಾಖೆಯು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು  ಸದರಿ ಕಾಲೇಜಿನ ಮಹಿಳಾ ಸಬಲೀಕರಣ ವೇದಿಕೆ ಸಹಯೋಗದೊಂದಿಗೆ , ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡುತ್ತಾ ಮೇಲಿನಂತೆ ನುಡಿದರು ಮತ್ತು ಕುವೆಂಪು ರವರ ಎರಡು ಕಾದಂಬರಿಗಳು ಮಹಾನ್ ಕೃತಿಗಳು. ಕುವೆಂಪು ಬಹುದೊಡ್ಡ ಸ್ತ್ರೀ ಸಂವೇದನೆಯನ್ನು ಇಟ್ಟುಕೊಂಡ ಲೇಖಕ.ಅವರ ಸಾಹಿತ್ಯ ದಲ್ಲಿ ಸ್ತ್ರೀ ಪ್ರಧಾನತೆಯ ಹೆಸರುಗಳು ,ಹೆಣ್ಣಿನ ಒಳಸಂಕಟಗಳು ,ಸಂಕಥನಗಳು ಇವೆ.ಪ್ರತಿಭಟನಾ ಶಕ್ತಿಯ  ಸ್ತ್ರೀ ಪಾತ್ರಗಳಿವೆ.

20 ನೇ ಶತಮಾನದ ಎಲ್ಲಾ ಕನ್ನಡ ಪ್ರಜ್ಞೆಯನ್ನು ಬೆಳೆಸಿದವರು.ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಬೆಳೆಸಬೇಕು . ಕುವೆಂಪುರವರ ಸಾಹಿತ್ಯ ಅದರಲ್ಲೂ, ಅವರ ವಿಚಾರ ಸಾಹಿತ್ಯ ಓದಿಸಿದರೆ , ಮುಂದಿನ ದಿನಗಳಲ್ಲಿ ಸಮಾಜ ಸ್ವಾಸ್ಥ್ಯ ವಾಗಿ ಇರಬಲ್ಲದು ಎಂದು ಹೇಳಿದರು.

ಕಾರ್ಯಕ್ರಮದ ಭಾಗವಾದ “ಮಲೆಗಳಲ್ಲಿ ಮದುಮಗಳು ಮತ್ತು ಮಹಿಳೆ ” ಎಂಬ ವಿಷಯದ ಬಗ್ಗೆ ಉಮಾ ಗ್ಯಾರಳ್ಳ ರವರು ಉಪನ್ಯಾಸ ನೀಡುತ್ತಾ ಕುವೆಂಪುರವರ ಎರಡು ಕಾದಂಬರಿಗಳೂ ಮಹಾಕಾವ್ಯಗಳೇ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ,
ಪ್ರಾರಂಭದಲ್ಲಿಯೇ ಹೇಳಿರುವಂತೆ ಇಲ್ಲಿ ಯಾರೂ ಮುಖ್ಯರಲ್ಲ .ಯಾರೂ ಅಮುಖ್ಯರಲ್ಲ. ಎಲ್ಲಾ ಪಾತ್ರಗಳೂ ಮುಖ್ಯವಾಗಿವೆ.
ಕಾದಂಬರಿಯಲ್ಲಿ ಬರುವ ಎಲ್ಲಾ ಮಹಿಳೆಯರೂ ಅಕ್ಷರಸ್ಥ ರಲ್ಲ. ಮಹಿಳೆಯರು ಕಲಿಯುವುದು ಹಾಸ್ಯಾಸ್ಪದ ಎಂದು ತಿಳಿದಿದ್ದ ಕಾಲದಲ್ಲೂ ಸೇಸಿ ,ತಿಮ್ಮಿ ,ಪೀಂಚಲು ಚಿನ್ನಮ್ಮ ನಂತಹ ಹೆಣ್ಣು ಪಾತ್ರಗಳು ಹೆದರುವುದಿಲ್ಲ . ಅಪಾಯದ ಅರಿವಿದ್ದೂ ಧೈರ್ಯ ವಾಗಿ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪ್ರೀತಿಯೇ ಪ್ರತಿಭಟನೆಯಾಗಿರುತ್ತದೆ ಎಂದು ನುಡಿದರು.

ಲೇಖಕಿಯರ ಸಂಘದ ಅಧ್ಯಕ್ಷರಾದ ಜಿ.ಮಲ್ಲಿಕಾ ಬಸವರಾಜು ರವರು ಪ್ರಸ್ತಾವನೆ ಮಾಡುತ್ತಾ, ಕುವೆಂಪುರವರ ವಿಶ್ವ ಮಾನವ ಸಂದೇಶ ಮತ್ತು ಮಂತ್ರಮಾಂಗಲ್ಯದ ಮಹತ್ವವನ್ನು, ಇದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು  ತಿಳಿಸಿದರು, ವರ್ತಮಾನದ ತಲ್ಲಣಗಳಿಗೆ ,ಸಂಕಟಗಳಿಗೆ ಕುವೆಂಪುರವರ ಬರಹದಲ್ಲಿ ಪರಿಹಾರವಿದೆ. ಬದುಕು ಬರಹ ಒಂದೇ ಆಗಿದ್ದವರು ಕುವೆಂಪುರವರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ,ಕಾಲೇಜಿನ ಪ್ರಾಂಶುಪಾಲರಾದ ವಸಂತ ಟಿ.ಡಿ.ರವರು ಮಾತನಾಡುತ್ತಾ ,ಕುವೆಂಪುರವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು .ಆ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕು ಎಂದರು.

ಲಲಿತಾ ಮಲ್ಲಪ್ಪರವರು ನಾಡಗೀತೆಯನ್ನು , ಲೇಖಕಿಯರ ಸಂಘದ ಉಪಾಧ್ಯಕ್ಷರಾದ ಸಿ.ಎ.ಇಂದಿರಾ ರವರು ಕುವೆಂಪುರವರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಸದರಿ ಕಾಲೇಜಿನ ,ಮಹಿಳಾ ಸಬಲೀಕರಣ ವೇದಿಕೆಯ ಸಂಚಾಲಕರಾದ ರೇಣುಕಾರವರು,
ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ
ಸಿ.ಎನ್.ಸುಗುಣಾ ದೇವಿ . ಖಜಾಂಚಿ ಸಿ.ಎಲ್.ಸುನಂದಮ್ಮ ,ಸದಸ್ಯರಾದ ಸುಶೀಲಾ ಸದಾಶಿವಯ್ಯ ,ಮುದ್ದರಂಗಮ್ಮ ,ಮರಿಯಂಬಿರವರು ಕಾರ್ಯಕ್ರಮ ದಲ್ಲಿ  ಹಾಜರಿದ್ದರು

ಕೃಷ್ಣನಾಯಕ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿ, ಮರಿಯಂಬಿ ರವರು ಸ್ವಾಗತಿಸಿ ,
ಡಾ/ ಶಿವಲಿಂಗಮೂರ್ತಿ ರವರು ವಂದನಾರ್ಪಣೆ ಮಾಡಿದರು.

By admin

0 thoughts on “ಕುವೆಂಪುರವರ ಚಿಂತನೆಗಳು ರೋಗಗ್ರಸ್ತ ಮನಸ್ಸಿಗೆ ಔಷಧಗಳು”

Leave a Reply

Your email address will not be published. Required fields are marked *

Translate »