SHARE

Loading

ದೊಡ್ಡಬಳ್ಳಾಪುರ: ಎಂಎಸ್ಟಿಪಿ ಘಟಕ ಮುಚ್ಚುವಂತೆ ಆಗ್ರಹಿಸಿ ಜ.20ರ ಬಳಿಕೆ ಧರಣಿ ಕೂರುವುದಾಗಿ ಶಾಸಕ ವೆಂಕಟರಮಣಯ್ಯ ಹೇಳಿದ್ದಾರೆ.ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿಗೆ ವಿಷ ಕಂಟಕವಾಗಿ ಪರಿಣಮಿಸಿ ಅವೈಜ್ಞಾನಿಕವಾಗಿ ಕಸದ ವಿಲೇವಾರಿ ಮಾಡಿ ತಾಲೂಕಿನ ಶುದ್ಧ ಪರಿಸರವನ್ನು ಹಾಳು ಮಾಡಿರುವ ಎಂಎಸಿಪಿ ಘಟಕಕ್ಕೆ ಬೀಗ ಜಡಿಯಬೇಕೆಂದು ಕಳೆದ ನವೆಂಬರ್‌ನಲ್ಲಿ ಹೋರಾಟ ಮಾಡಿದಾಗ ಜಿಲ್ಲಾ ಉಸ್ತುವಾರಿ ಸಚಿವ ನಾಗರಾಜು ಸ್ಥಳಕ್ಕೆ ಆಗಮಿಸಿ ಸಿಎಂ ಜತೆ ಹೋರಾಟಗಾರರ ಸಭೆ ಏರ್ಪಡಿಸಿದ ಬಳಿಕ ಪರಿಹಾರದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಸಚಿವರು ನೀಡಿದ್ದ ಭರವಸೆ ಹುಸಿಯಾಗಿದೆ. ಹೀಗಾಗಿ ಸಮಸ್ಯೆ ಬಗೆಹರಿಸದಿದ್ದರೆ ಜ. 20ರ ಬಳಿಕ ಉಪವಾಸ ಸತ್ಯಾಗ್ರಹ ಕೂರುವುದಾಗಿ ತಿಳಿಸಿದರು.

By admin

Leave a Reply

Your email address will not be published. Required fields are marked *

Translate »