SHARE

Loading

ಬೆಂಗಳೂರಿನ ಸೌಹಾರ್ದ ಸಹಕಾರಿ ಸೌಧದಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸೇವಾ ಭದ್ರತೆಗಾಗಿ ನಡೆದ ಸಭೆಯಲ್ಲಿ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ ನಾರಾಯಣ ರವರೊಂದಿಗೆ ಮಾನ್ಯ ವಿಧಾನ ಪರಿಷತ್ ಶಾಸಕರಾದ ಪುಟ್ಟಣ್ಣರವರು , ಶ್ರೀ ಚಿದಾನಂದ್ ಎಂ ಗೌಡ , ವೈ.ಎ. ನಾರಾಯಣ ಸ್ವಾಮಿ, ಅರುಣ್ ಷಹಪುರ್ ಮುಂತಾದ ಎಲ್ಲಾ ಪದವೀಧರ ಕ್ಷೇತ್ರದ ಶಾಸಕರು ಹಾಗೂ ಶಿಕ್ಷಕರ ಕ್ಷೇತ್ರದ ಶಾಸಕರು ಭಾಗವಹಿಸಿ, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಹಾಗೂ ಸೇವಾ ಭದ್ರತೆಯ ಬಗ್ಗೆ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಎಲ್ಲಾ ಶಾಸಕರುಗಳ ಮನವಿಯನ್ನು ಪರಿಗಣಿಸಿದ ಮಾನ್ಯ ಸಚಿವರು ಮುಂದಿನ ಮಂಗಳವಾರ ಮದ್ಯಾಹ್ನ ವಿಧಾನ ಸೌಧದಲ್ಲಿ ಮತ್ತೊಂದು ಸಭೆ ನಡೆಸಿ ಪೂರಕವಾದ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.

By admin

0 thoughts on “ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸೇವಾ ಭದ್ರತೆಗಾಗಿ ಸಭೆ”

Leave a Reply

Your email address will not be published. Required fields are marked *

Translate »