ಆರೋಗ್ಯ ಸಚಿವರಾದ ಡಾಕ್ಟರ್ ಕೇ. ಸುಧಾಕರ್ ಅವರಿಗೆ ಹಿರಿಯೂರ್ ತಾಲ್ಲೂಕ್ ಆಶಾ ಕಾರ್ಯಕರ್ತರಿಂದ ಸಂಬಳ ಹೆಚ್ಚಳ ಮತ್ತು ಸೇವಾ ಭದ್ರತೆಗೆ ಮನವಿ.
ಕಳೆದ 12 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಕಡಿಮೆ ಸಂಬಳಕ್ಕೆ ಆರೋಗ್ಯ ಸೇವೆಗಳಾದ ಬಾಣಂತಿಯರು ಗರ್ಭಿಣಿಯರು ಮಕ್ಕಳು ವೃದ್ಧರು ಹಾಗೂ ಅನಾರೋಗ್ಯ ಪೀಡಿತರು.ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಕರೋನಾ ಕಾಯಿಲೆ ಸಂಬಂಧ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದೇವೆ ಆದರೆ ಸಂಬಳ ಏರಿಕೆ ಮಾತ್ರ ಆಗುತ್ತಿಲ್ಲ.ಅಗತ್ಯವಸ್ತುಗಳ ಬೆಲೆ ದಿನೇದಿನೆ ಏರಿಕೆಯಾಗುತ್ತಿದೆ.
ಮಕ್ಕಳ ಶಾಲಾ ಪೀಸು, ಅಗತ್ಯ ವಸ್ತುಗಳ ಖರೀದಿ ಇತ್ಯಾದಿಗಳಿಗೆ ತೊಂದರೆಯಾಗುತ್ತಿದೆ.ಪಕ್ಕದ ಆಂಧ್ರಪ್ರದೇಶದಲ್ಲಿ ಪ್ರತಿತಿಂಗಳು ನಿಶ್ಚಿತ 12000 ಸಂಬಳ ಕೊಡುತ್ತಿದ್ದಾರೆ ಅದರಂತೆ ನಮಗೂ ಸಹ ಕೊಡಬೇಕೆಂದು ಮನವಿ ಮಾಡುತ್ತೇವೆ. ಸೇವಾ ಭದ್ರತೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸುತ್ತೇವೆ.ಎಂದು ಆಶಾ ಕಾರ್ಯಕರ್ತರ ಪರವಾಗಿ ಕಸವನಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ಉಷಾ ತಿಪ್ಪೇಸ್ವಾಮಿಯವರು ಮಾನ್ಯ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.