Education & Job https://vishwaprabha.com Tue, 01 Mar 2022 08:46:36 +0000 en-US hourly 1 https://wordpress.org/?v=6.6.2 185986473 ಉನ್ನತ ಶಿಕ್ಷಣದಲ್ಲಿ GER (ಒಟ್ಟು ದಾಖಲಾತಿ ಅನುಪಾತ) ಹೆಚ್ಚಿಸಲು ಕೇಂದ್ರ ಸಕಾ೯ರದಿಂದ ಮಹತ್ವದ ತೀಮಾ೯ನ https://vishwaprabha.com/2022/02/1177/?utm_source=rss&utm_medium=rss&utm_campaign=%25e0%25b2%2589%25e0%25b2%25a8%25e0%25b3%258d%25e0%25b2%25a8%25e0%25b2%25a4-%25e0%25b2%25b6%25e0%25b2%25bf%25e0%25b2%2595%25e0%25b3%258d%25e0%25b2%25b7%25e0%25b2%25a3%25e0%25b2%25a6%25e0%25b2%25b2%25e0%25b3%258d%25e0%25b2%25b2%25e0%25b2%25bf-ger-%25e0%25b2%2592%25e0%25b2%259f%25e0%25b3%258d%25e0%25b2%259f%25e0%25b3%2581 https://vishwaprabha.com/2022/02/1177/#respond Wed, 23 Feb 2022 06:30:58 +0000 https://vishwaprabha.com/?p=1177

Loading

ಉನ್ನತ ಶಿಕ್ಷಣ ಇಲಾಖೆಯ900 ಸ್ವಾಯತ್ತ ಕಾಲೇಜುಗಳಲ್ಲಿ ಅನ್ಲೈನ್ ಪದವಿ ನೀಡಲು ಅನುಮತಿ ನೀಡುವುದರ ಮೂಲಕ ಒಟ್ಟು ದಾಖಲಾತಿ ಅನುಪಾತ ಶೇ 50 ಕ್ಕೆ ಹೆಚ್ಚಿಸಲು ಅನುಕೂಲವಾಗುವಂತೆ ಯು ಜಿ ಸಿ ಯಿಂದ 2022-2023ಕ್ಕೆ ಜಾರಿಗೆ ಬರುವಂತೆ ಅನುಮತಿಸಲು ತೀಮಾ೯ನಿಸಲಾಗಿದೆ. ಇದರಿಂದ ಉದ್ಯೋಗದ ಜೊತೆಗೆ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ.ಸದ್ಯ ಕೇವಲ ವಿಶ್ವವಿಧ್ಯಾಲಯಗಳು ಮಾತ್ರ ಆನ್ಲೈನ್ ಪದವಿ ನೀಡಲು ಅವಕಾಶವಿತ್ತು

]]>
https://vishwaprabha.com/2022/02/1177/feed/ 0 1177
ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ ಅಳವಡಿಕೆ https://vishwaprabha.com/2022/01/1045/?utm_source=rss&utm_medium=rss&utm_campaign=%25e0%25b2%25b5%25e0%25b2%25bf-%25e0%25b2%25b5%25e0%25b2%25bf-%25e0%25b2%2597%25e0%25b2%25b3%25e0%25b2%25b2%25e0%25b3%258d%25e0%25b2%25b2%25e0%25b2%25bf-%25e0%25b2%25b8%25e0%25b3%2581%25e0%25b2%2597%25e0%25b2%25ae-%25e0%25b2%25aa%25e0%25b2%25b0%25e0%25b3%2580%25e0%25b2%2595%25e0%25b3%258d%25e0%25b2%25b7%25e0%25b2%25be https://vishwaprabha.com/2022/01/1045/#respond Mon, 24 Jan 2022 16:02:22 +0000 https://vishwaprabha.com/?p=1045

Loading

ಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ `ಇ-ಸಹಮತಿ’ಗೆ ಹಸಿರು ನಿಶಾನೆ

ಬೆಂಗಳೂರು: ಉನ್ನತ ಶಿಕ್ಷಣ ವಲಯದಲ್ಲಿ ಪರೀಕ್ಷಾಂಗವನ್ನು ಸದೃಢಗೊಳಿಸುವ ಪರೀಕ್ಷಾ ತಂತ್ರಾಂಶ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿಗಳನ್ನು ಸುಗಮವಾಗಿ ಒದಗಿಸುವ `ಇ-ಸಹಮತಿ’ ಉಪಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಚಾಲನೆ ನೀಡಿದರು.

ವಿಧಾನಸೌಧದಲ್ಲಿ ಇದರ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಇದರಿಂದ ವಿ.ವಿ.ಗಳು ಪರೀಕ್ಷೆ ಮತ್ತು ಅಂಕಪಟ್ಟಿಗಳ ಬಾಬ್ತಿಗೆಂದು ಖರ್ಚು ಮಾಡುತ್ತಿದ್ದ ಸುಮಾರು 60 ಕೋಟಿ ರೂ. ಹಣ ಉಳಿತಾಯವಾಗಲಿದೆ. ಜೊತೆಗೆ, ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ದಂಧೆಗೆ ಇದರಿಂದ ಕಡಿವಾಣ ಬೀಳಲಿದ್ದು, ಮಾನ್ಯತೆ ಹೊಂದಿರುವ 3,400ಕ್ಕೂ ಹೆಚ್ಚು ಕಾಲೇಜುಗಳ 16 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದರು.

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ಯೋಜನೆಯಡಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. 10 ಮಾಡ್ಯೂಲ್ ಗಳನ್ನು ಒಳಗೊಂಡಿರುವ ಈ ಯೋಜನೆಯಡಿ 2021ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ಪ್ರವೇಶಾತಿ ಮತ್ತು ಶೈಕ್ಷಣಿಕ ಹಾಗೂ ತರಗತಿ ನಿರ್ವಹಣೆ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಉಳಿದವುಗಳನ್ನು ಜೂನ್ ಹೊತ್ತಿಗೆ ಅಳವಡಿಸಲಾಗುವುದು. ಇಂತಹ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ಅವರು ಹೇಳಿದರು.

ಸದ್ಯಕ್ಕೆ ಸರಕಾರಿ ಸ್ವಾಮ್ಯದ 24 ವಿ.ವಿ.ಗಳ ಪೈಕಿ ಎರಡು ವಿ.ವಿ.ಗಳು ತಮ್ಮದೇ ಆದ ಪರೀಕ್ಷಾ ನಿರ್ವಹಣೆಯ ತಂತ್ರಾಂಶಗಳನ್ನು ಹೊಂದಿದ್ದರೆ, 8 ವಿ.ವಿ.ಗಳಲ್ಲಿ ಯಾವುದೇ ಪರೀಕ್ಷಾ ತಂತ್ರಾಂಶಗಳಿಲ್ಲ. ಮಿಕ್ಕ ವಿ.ವಿ.ಗಳು ಇದಕ್ಕೆಲ್ಲ ಹೊರಗುತ್ತಿಗೆಯನ್ನು ನೆಚ್ಚಿಕೊಂಡಿದ್ದವು. ಈಗ ಅಭಿವೃದ್ಧಿಪಡಿಸಿರುವ ಪರೀಕ್ಷಾ ನಿರ್ವಹಣಾ ತಂತ್ರಾಂಶದ ಮೂಲಕ ಡಿಜಿಟಲ್ ಮೌಲ್ಯಮಾಪನ, ಆನ್ಲೈನ್ ಮೂಲಕ ಪ್ರಶ್ನೆಪತ್ರಿಕೆ, ಪ್ರವೇಶಪತ್ರ, ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿ, ಪ್ರಯೋಗಾಲಯಗಳ ಬ್ಯಾಚ್ ನಿರ್ವಹಣೆ, ಅಂಕಪಟ್ಟಿ ಪೂರೈಕೆ ಮುಂತಾದವು ಸಾಧ್ಯವಾಗಲಿವೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಬಹುಶಿಸ್ತೀಯ ಪಠ್ಯಕ್ರಮವನ್ನು ಇಲ್ಲಿ ಪರಿಗಣಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ಮೊಟಕುಗೊಳಿಸಿದರೆ ಅಥವಾ ಮರುಪ್ರವೇಶ ಬಯಸಿದರೆ ಅದನ್ನೂ ಸಾಧ್ಯವಾಗಿಸುವ ವ್ಯವಸ್ಥೆಯನ್ನು ಈ ತಂತ್ರಾಂಶದಲ್ಲಿ ಕಲ್ಪಿಸಲಾಗಿದ್ದು, ತಮಗೆ ಅಗತ್ಯವೆನಿಸಿದಾಗ ಪ್ರಮಾಣಪತ್ರಗಳನ್ನು ಪಡೆಯಬಹುದು ಎಂದು ಅಶ್ವತ್ಥನಾರಾಯಣ ನುಡಿದರು.

ಇದಲ್ಲದೆ, ಇ-ಸಹಮತಿ’ ತಂತ್ರಾಂಶದ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಡೇಟಾವನ್ನು ರಾಷ್ಟ್ರೀಯ ಶೈಕ್ಷಣಿಕ ಸಾಧನಾ ಭಂಡಾರಕ್ಕೆ (ನ್ಯಾಷನಲ್ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್- ಎನ್ಎಬಿಸಿ) ಸೇರಿಸಲು ಹಾಗೂ ಉದ್ಯೋಗಧಾತರ ಜತೆಗೆ ಅಂಕಪಟ್ಟಿ ಹಂಚಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಇವೆಲ್ಲವೂ ಎನ್ಕ್ರಿಪ್ಟೆಡ್ ರೂಪದಲ್ಲಿ ಇರಲಿದ್ದು, ಪ್ರತೀ ಸೆಮಿಸ್ಟರಿನ ಅಂಕಪಟ್ಟಿಗಳನ್ನು ನೇರವಾಗಿಡಿಜಿಲಾಕರ್-ಎನ್ಎಡಿ’ಗೆ ನೇರವಾಗಿ ವರ್ಗಾಯಿಸಬಹುದು. ಈ ಪ್ರಕ್ರಿಯೆಯಲ್ಲಿ ಭದ್ರತೆ ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ವಿ.ವಿ.ಗಳು ತಮ್ಮ ಸ್ವಾಯತ್ತತೆಗೆ ಅನುಸಾರವಾಗಿ ಪರೀಕ್ಷೆಯ ನಿಯಮಗಳನ್ನು ಈ ತಂತ್ರಾಂಶದಲ್ಲಿ ರೂಪಿಸಿ, ಅಳವಡಿಸುವ ಸ್ವಾತಂತ್ರ್ಯವೂ ಇದೆ. ಇದರ ಅನುಷ್ಠಾನಕ್ಕೆ 24/7 ಕಾರ್ಯನಿರ್ವಹಿಸುವ ಸಹಾಯವಾಣಿ ವ್ಯವಸ್ಥೆಯೂ ಇರಲಿದೆ.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕುಮಾರ್ ನಾಯಕ್, ಇ-ಆಡಳಿತ ಕೇಂದ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ ಮತ್ತು ಹಲವು ವಿ.ವಿ.ಗಳ ಕುಲಪತಿಗಳು ಹಾಗೂ ಕುಲಸಚಿವರು ಇದ್ದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಅವರು ವರ್ಚುವಲ್ ಮೂಲಕ ಹಾಜರಾಗಿದ್ದರು.

]]>
https://vishwaprabha.com/2022/01/1045/feed/ 0 1045
ಶಿಕ್ಷಕರ ನೇಮಕಾತಿ ಪೂರ್ವದಲ್ಲಿ ಸೇವಾನಿರತ ಪ್ರಾಥಮಿಕ ಪದವೀಧರ ಶಿಕ್ಷಕರ ವಿಲೀನಗೊಳಿಸಿ ನೇಮಕಾತಿ ನೆಡೆಸಿ ರಾಜ್ಯಪ್ರಧಾನಕಾರ್ಯದರ್ಶಿ-HR ಶಶಿಕುಮಾರ್ ಆಗ್ರಹ https://vishwaprabha.com/2022/01/1028/?utm_source=rss&utm_medium=rss&utm_campaign=%25e0%25b2%25b6%25e0%25b2%25bf%25e0%25b2%2595%25e0%25b3%258d%25e0%25b2%25b7%25e0%25b2%2595%25e0%25b2%25b0-%25e0%25b2%25a8%25e0%25b3%2587%25e0%25b2%25ae%25e0%25b2%2595%25e0%25b2%25be%25e0%25b2%25a4%25e0%25b2%25bf-%25e0%25b2%25aa%25e0%25b3%2582%25e0%25b2%25b0%25e0%25b3%258d%25e0%25b2%25b5%25e0%25b2%25a6%25e0%25b2%25b2%25e0%25b3%258d https://vishwaprabha.com/2022/01/1028/#respond Mon, 24 Jan 2022 13:58:38 +0000 https://vishwaprabha.com/?p=1028

Loading

ಸರ್ಕಾರ 6 ರಿಂದ 8 ನೇ ತರಗತಿ ಬೋಧಿಸಲು 15,000 ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪದವೀಧರ ಶಿಕ್ಷಕರ ಸಂಘ ಸ್ವಾಗತಿಸುತ್ತದೆ ಆದರೆ, ಪ್ರಸ್ತುತವಾಗಿ ರಾಜ್ಯದ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಳೆದ 20-30 ವರ್ಷಗಳಿಂದ BA/BSC… BED/MED ಪದವಿಗಳನ್ನು ಪಡೆದು ಇದೇ ಶಾಲೆಗಳಲ್ಲಿ 80,000 ಕ್ಕೂ ಅಧಿಕ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು ನಮ್ಮನ್ನು 1 ರಿಂದ 5 ನೇ ತರಗತಿ ಶಿಕ್ಷಕರೆಂದು ಸೀಮಿತಗೊಳಿಸಿ ಹಿಂಬಡ್ತಿ ನೀಡಿ ವೇತನ ತಾರತಮ್ಯ ಮಾಡುತ್ತ ನಮ್ಮನ್ನು 6 ರಿಂದ 8 ನೇ ತರಗತಿ ಶಿಕ್ಷಕರೆಂದು ಪರಿಗಣಿಸದೇ 6 ರಿಂದ 8 ನೇ ತರಗತಿ ಮಕ್ಕಳಿಗೆ ಬೋಧಿಸಲು ಅಗತ್ಯವಾದ ಎಲ್ಲಾ ಅರ್ಹತೆಗಳು ಇದ್ದರು ಸಹ ನಮ್ಮನ್ನು ಸರ್ಕಾರ ಮತ್ತು ಶಿಕ್ಷಣ ಇಲಾಖೆ 6 ರಿಂದ 8 ನೇ ಶಿಕ್ಷಕರೆಂದು ವಿಲೀನಗೊಳಿಸದೆ ನಮ್ಮಿಂದ 6 ರಿಂದ 8 ನೇ ತರಗತಿ ಮಕ್ಕಳಿಗೆ ಬೋಧನೆ ಮಾಡಿಸುತ್ತಾ ನಮಗೂ ಮತ್ತು ಮಕ್ಕಳಿಗೂ ಕೂಡ ಅನ್ಯಾಯ ಮಾಡುತ್ತಿರುವುದು ನಿಜಕ್ಕೂ ಶಿಕ್ಷಕರ ವಲಯದಲ್ಲಿ ಅತ್ಯಂತ ಬೇಸರವನ್ನು ಮೂಡಿಸಿದೆ.. ಈ ಅನ್ಯಾಯವನ್ನು ಖಂಡಿಸಿ ಕಳೆದ 5 ವರ್ಷಗಲಿಂದಲೂ ಪದವೀಧರ ಶಿಕ್ಷಕರ ಸಂಘ ಉಪವಾಸ ಸತ್ಯಾಗ್ರಹ,ತರಬೇತಿ ಬಹಿಷ್ಕಾರ,ಕಪ್ಪು ಪಟ್ಟಿ ಪ್ರದರ್ಶನ ಚಳುವಳಿಗಳು ನೆಡೆಸುತ್ತಾ ಬಂದಿದೆ..ಜೊತೆಗೆ ಶಿಕ್ಷಣ ಮಂತ್ರಿಗಳಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಸರ್ಕಾರ ಮತ್ತು ಇಲಾಖೆಯಿಂದ ನ್ಯಾಯ ಒದಗಿಸಲು ಸತತವಾಗಿ ಶ್ರಮಿಸುತ್ತಿದೆ..
ಕಾನೂನಿನ ಪ್ರಕಾರ ಇಲಾಖೆಯಲ್ಲಿ ನೇಮಕಾತಿಯ ಜೊತೆಜೊತೆಯಲ್ಲಿ ಬಡ್ತಿ/ವಿಲೀನ ಪ್ರಕ್ರಿಯೆ ಮಾಡಬೇಕಾದ್ದು ಇಲಾಖೆಯ ಆದ್ಯ ಕರ್ತವ್ಯ..2017 ರಲ್ಲೇ ಮೊದಲ ನೇಮಕಾತಿ ಆಗಿದ್ದರು ಕಳೆದ 5 ವರ್ಷಗಳಿಂದ ಸರ್ಕಾರ ಮತ್ತು ಇಲಾಖೆ ವಿಳಂಬ ನೀತಿ ಅನಿಸರಿಸುತ್ತಿರುವುದು ಮತ್ತು ಅವರೇ ರೂಪಿಸಿರುವ ನೀತಿ ನಿಯಮಗಳನ್ನು ಮರೆತು ಕಾರ್ಯರೂಪಕ್ಕೆ ತರದೆ ಪದವೀಧರ ಮತ್ತು ಅನುಭವಿ ಶಿಕ್ಷಕರಿಗೆ ಅನ್ಯಾಯ ಮಾಡಲಾಗುತ್ತಿದೆ.ಈಗ ಸರ್ಕಾರ ಮತ್ತು ಇಲಾಖೆ ಸೇವಾನಿರತ ಪದವೀಧರ ಶಿಕ್ಷಕರನ್ನು ವಿಲೀನಗೊಳಿಸದೇ ಈಗಾಗಲೇ 12,000 GPT ಶಿಕ್ಷಕರ ನೇಮಕಾತಿಯಾಗಿದೆ… ಈಗ 4 ನೇ ಬಾರಿಗೆ ಹೊಸದಾಗಿ ಮತ್ತೆ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನೆಡೆಸಲು ಹೊರಟಿದೆ.. ಇದು ಇಷ್ಟು ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಾ ಉನ್ನತ ವ್ಯಾಸಂಗ ಮಾಡಿರುವ ಸೇವಾನಿರತ ಪದವೀಧರ ಶಿಕ್ಷಕರಿಗೆ ಸರ್ಕಾರ ಮತ್ತು ಇಲಾಖೆ ಮಾಡುತ್ತಿರುವ ಘೋರ ಅನ್ಯಾಯವಾಗಿದ್ದು ನಾವೆಲ್ಲೇರು ತಾಳ್ಮೆಯಿಂದ ನಮ್ಮ ಪದವಿಗಳಿಗೆ ಒಂದಲ್ಲ ಒಂದು ದಿನ ಬೆಲೆ,ಗೌರವ ಸಿಗುತ್ತದೆ ನಮಗೂ ಬಡ್ತಿ ಸಿಗುತ್ತದೆ ಎಂಬ ಆಶಾಭಾವನೆಯಿಂದ ಜಾತಕಪಕ್ಷಿಗಳಂತೆ ಕಾಯುತ್ತ ಕುಳಿತ್ತಿದ್ದೇವೆ ಆದರೆ,ಸರ್ಕಾರ ಮತ್ತು ಇಲಾಖಾ ಮಟ್ಟದಲ್ಲಿ ನಮಗೆ ನ್ಯಾಯ ನೀಡುವ ಯಾವುದೇ ಪ್ರಕ್ರಿಯೆಗಳು ಕಳೆದ 5 ವರ್ಷಗಳಿಂದಲೂ ನೆಡೆಯುತ್ತಿಲ್ಲ ಒಂದು ಕಡೆ ನೀವುಗಳು 1 ರಿಂದ 5 ನೇ ತರಗತಿ ಶಿಕ್ಷಕರು ಎನ್ನುವುದು..
ಇನ್ನೊಂದು ಕಡೆ ನಮ್ಮಿಂದಲೇ 6 ರಿಂದ 8 ನೇ ತರಗತಿ ಮಕ್ಕಳಿಗೆ ಪಾಠ ಮಾಡಿಸುವುದು..6 ರಿಂದ 8 ನೇ ತರಗತಿ ಶಿಕ್ಷಕರೆಂದು ಪರಿಗಣಿಸಲು ಅರ್ಹತೆಗಳು ಇದ್ದರು ವಿಲೀನ ಪ್ರಕ್ರಿಯೆ ಮಾಡದೆ ಇರುವ ವಿಚಿತ್ರ ನಡವಳಿಕೆಯ ಬಗ್ಗೆ ಶಿಕ್ಷಕರ ವಲಯದಲ್ಲಿ ಕಳೆದ 5 ವರ್ಷದಿಂದಲೂ ಅಸಮಾಧಾನವಿದೆ
ಇಷ್ಟು ವರ್ಷ ನಮಗೆ ಅನ್ಯಾಯವಾದರು ತಾಳ್ಮೆಯಿಂದ ಇಷ್ಟು ವರ್ಷ ಪಾಠ ಬೋದಿಸುತ್ತಾ ಬಂದಿದ್ದೇವೆ ಆದರೆ, ಶಿಕ್ಷಣ ಇಲಾಖೆಯಿಂದ ನಮಗೆ ನ್ಯಾಯ ದೊರಕುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲದ ಕಾರಣ ವಿಧಿ ಇಲ್ಲದೆ ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಶಿಕ್ಷಕರ ನೇಮಕಾತಿ ಪೂರ್ವದಲ್ಲಿ ಸೇವಾನಿರತ ಪದವೀಧರ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಮತ್ತು ಇಲಾಖೆಗೆ ಮನವರಿಕೆ ಮಾಡಲು ಹಾಗೂ ನಮಗೆ ನ್ಯಾಯ ಸಿಗುವವರೆಗೂ
ಫೆಬ್ರವರಿ ತಿಂಗಳಿನಿಂದ ಅನಿರ್ದಿಷ್ಟ ಅವಧಿಗೆ ಕರ್ನಾಟಕ ರಾಜ್ಯಾಧ್ಯಂತ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8 ತರಗತಿ ಬೋಧನೆ ಮತ್ತು ಅ ತರಗತಿಗಳಿಗೆ ಸಂಬಂಧಪಟ್ಟ ಎಲ್ಲಾ ಕಲಿಕಾ ಬೋಧನಾ ಹಾಗೂ ದಾಖಲೆ ನಿರ್ವಹಿಸಿವುದನ್ನು ನಿಲ್ಲಿಸಲಾಗುವುದು
ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯ/ಜಿಲ್ಲಾ/ತಾಲ್ಲೂಕ್ ಘಟಕಗಳು ಎಂದು ಸಂಘದ ರಾಜ್ಯಾಧ್ಯಕ್ಷರಾದ SY ಸೋರಟ್ಟಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ HR ಶಶಿಕುಮಾರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ

]]>
https://vishwaprabha.com/2022/01/1028/feed/ 0 1028
ಪ್ರಬೋಧಿನೀ ಗುರುಕುಲದ ಪ್ರವೇಶಕ್ಕಾಗಿ ಅರ್ಜಿ https://vishwaprabha.com/2022/01/1002/?utm_source=rss&utm_medium=rss&utm_campaign=%25e0%25b2%25aa%25e0%25b3%258d%25e0%25b2%25b0%25e0%25b2%25ac%25e0%25b3%258b%25e0%25b2%25a7%25e0%25b2%25bf%25e0%25b2%25a8%25e0%25b3%2580-%25e0%25b2%2597%25e0%25b3%2581%25e0%25b2%25b0%25e0%25b3%2581%25e0%25b2%2595%25e0%25b3%2581%25e0%25b2%25b2%25e0%25b2%25a6-%25e0%25b2%25aa%25e0%25b3%258d%25e0%25b2%25b0%25e0%25b2%25b5%25e0%25b3%2587 https://vishwaprabha.com/2022/01/1002/#respond Thu, 20 Jan 2022 13:52:34 +0000 https://vishwaprabha.com/?p=1002

Loading

ಪ್ರಬೋಧಿನೀ ಗುರುಕುಲದಲ್ಲಿ 2022-2023 ನೇ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡಬಯಸುವ ಗಂಡುಮಕ್ಕಳಿಗೆ ಅರ್ಜಿಗಳು ದೊರೆಯುತ್ತಿದ್ದು, ಆಸಕ್ತರು ಪ್ರಬೋಧಿನೀ ಗುರುಕುಲದ ವಿಳಾಸಕ್ಕೆ ರೂ 250/- M.O ಕಳುಹಿಸುವ ಮೂಲಕ ಅರ್ಜಿಯನ್ನು ಪಡೆಯಬೇಕಾಗಿ ಈ ಮೂಲಕ ತಿಳಿಸಲಾಗಿದೆ.

ಗುರುಕುಲ ಶಿಕ್ಷಣ ಯಾರಿಗೆ ಮತ್ತು ಹೇಗೆ?

• ಪ್ರಸ್ತುತ 5 ನೇ ತರಗತಿ ಪರೀಕ್ಷೆ ಬರೆಯಲಿರುವ 11 ವರ್ಷತುಂಬಿದ ಗಂಡುಮಕ್ಕಳಿಗೆ
ಪ್ರವೇಶ
• ಗುರುಕುಲದ ಒಟ್ಟು ಕಲಿಕೆಯ ಅವಧಿ 12 ವರ್ಷಗಳು
• ತಂದೆ, ತಾಯಿ ಹಾಗೂ ವಿದ್ಯಾರ್ಥಿಯ ಸಂದರ್ಶನ ಮಾಡಲಾಗುತ್ತದೆ.
• ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲಾ ಎಂಬ ಪಂಚಮುಖೀ ಶಿಕ್ಷಣ ವ್ಯವಸ್ಥೆ
• ಆರ್ಷ ಪರಂಪರೆಯ ಅಧ್ಯಾತ್ಮ ಆಧಾರಿತ ಶಿಕ್ಷಣದೊಂದಿಗೆ, ಗಣಿತ, ವಿಜ್ಞಾನ,
ಇತಿಹಾಸದ ಶಿಕ್ಷಣ.
• ಸಂಸ್ಕೃತದಲ್ಲಿ ದೈನಂದಿನ ವ್ಯವಹಾರ ಮತ್ತು ಶಾಸ್ತ್ರೀಯ ಅಧ್ಯಯನಕ್ಕೆ ಒತ್ತು.
• ಕನ್ನಡದೊಂದಿಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಕಲಿಕೆಗೆ ಸೂಕ್ತ ಅವಕಾಶ
• ಶಿಕ್ಷಣ ದೊಂದಿಗೆ , ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಉಚಿತವಾಗಿ
ನೀಡಲಾಗುತ್ತದೆ.

ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 31-03-2022

M.O ಕಳುಹಿಸಬೇಕಾದ ವಿಳಾಸ
ವ್ಯವಸ್ಥಾಪಕರು,
ಪ್ರಬೋಧಿನೀ ಗುರುಕುಲ.
ಚಿತ್ರಕೂಟ, ಅದ್ದಡ ಗ್ರಾಮ, ಹರಿಹರಪುರ ಅಂಚೆ. ಕೊಪ್ಪ ತಾಲ್ಲೂಕು.
ಚಿಕ್ಕಮಗಳೂರು ಜಿಲ್ಲೆ- 577120
sಸಂಪರ್ಕಕ್ಕೆ : 9845071185. (ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ)

Email : prabodhinigurukula@gmail.com
www.prabodhinigurukula.org

]]>
https://vishwaprabha.com/2022/01/1002/feed/ 0 1002
ಹೆಚ್ವಿಸಲಾದ ಗೌರವಧನಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಜಿ೯ಸಲ್ಲಿಸಲು 21/01/22 ಕಡೆಯ ದಿನಾಂಕ https://vishwaprabha.com/2022/01/954/?utm_source=rss&utm_medium=rss&utm_campaign=%25e0%25b2%25b9%25e0%25b3%2586%25e0%25b2%259a%25e0%25b3%258d%25e0%25b2%25b5%25e0%25b2%25bf%25e0%25b2%25b8%25e0%25b2%25b2%25e0%25b2%25be%25e0%25b2%25a6-%25e0%25b2%2597%25e0%25b3%258c%25e0%25b2%25b0%25e0%25b2%25b5%25e0%25b2%25a7%25e0%25b2%25a8%25e0%25b2%2595%25e0%25b3%258d%25e0%25b2%2595%25e0%25b3%2586-%25e0%25b2%2585%25e0%25b2%25a4 https://vishwaprabha.com/2022/01/954/#respond Mon, 17 Jan 2022 14:45:53 +0000 https://vishwaprabha.com/?p=954

Loading

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹೆಚ್ವಿಸಲಾದ ಗೌರವಧನಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅನ್ಲೈನ್ ಮೂಲಕ ಅಜಿ೯ ಕೆರಯಲಾಗಿದೆ ಹೆಚ್ಚಿನ ಮಾಹಿತಿಗೆ ಕೆಳಕಂಡ ಅದೇಶದ ಪ್ರತಿ ನೋಡಿ

]]>
https://vishwaprabha.com/2022/01/954/feed/ 0 954
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸೇವಾ ಭದ್ರತೆಗಾಗಿ ಸಭೆ https://vishwaprabha.com/2022/01/860/?utm_source=rss&utm_medium=rss&utm_campaign=%25e0%25b2%25aa%25e0%25b2%25a6%25e0%25b2%25b5%25e0%25b2%25bf-%25e0%25b2%2595%25e0%25b2%25be%25e0%25b2%25b2%25e0%25b3%2587%25e0%25b2%259c%25e0%25b3%2581%25e0%25b2%2597%25e0%25b2%25b3-%25e0%25b2%2585%25e0%25b2%25a4%25e0%25b2%25bf%25e0%25b2%25a5%25e0%25b2%25bf-%25e0%25b2%2589%25e0%25b2%25aa%25e0%25b2%25a8%25e0%25b3%258d https://vishwaprabha.com/2022/01/860/#respond Sat, 08 Jan 2022 04:13:32 +0000 https://vishwaprabha.com/?p=860

Loading

ಬೆಂಗಳೂರಿನ ಸೌಹಾರ್ದ ಸಹಕಾರಿ ಸೌಧದಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸೇವಾ ಭದ್ರತೆಗಾಗಿ ನಡೆದ ಸಭೆಯಲ್ಲಿ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ ನಾರಾಯಣ ರವರೊಂದಿಗೆ ಮಾನ್ಯ ವಿಧಾನ ಪರಿಷತ್ ಶಾಸಕರಾದ ಪುಟ್ಟಣ್ಣರವರು , ಶ್ರೀ ಚಿದಾನಂದ್ ಎಂ ಗೌಡ , ವೈ.ಎ. ನಾರಾಯಣ ಸ್ವಾಮಿ, ಅರುಣ್ ಷಹಪುರ್ ಮುಂತಾದ ಎಲ್ಲಾ ಪದವೀಧರ ಕ್ಷೇತ್ರದ ಶಾಸಕರು ಹಾಗೂ ಶಿಕ್ಷಕರ ಕ್ಷೇತ್ರದ ಶಾಸಕರು ಭಾಗವಹಿಸಿ, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಹಾಗೂ ಸೇವಾ ಭದ್ರತೆಯ ಬಗ್ಗೆ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಎಲ್ಲಾ ಶಾಸಕರುಗಳ ಮನವಿಯನ್ನು ಪರಿಗಣಿಸಿದ ಮಾನ್ಯ ಸಚಿವರು ಮುಂದಿನ ಮಂಗಳವಾರ ಮದ್ಯಾಹ್ನ ವಿಧಾನ ಸೌಧದಲ್ಲಿ ಮತ್ತೊಂದು ಸಭೆ ನಡೆಸಿ ಪೂರಕವಾದ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.

]]>
https://vishwaprabha.com/2022/01/860/feed/ 0 860
ಅತಿಥಿ ಉಪನ್ಯಾಸಕರ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಕರ್ನಾಟಕ ಲೇಖಕಿಯರ ಸಂಘ ಭಾಗವಹಿಸಿ ಬೆಂಬಲ https://vishwaprabha.com/2022/01/824/?utm_source=rss&utm_medium=rss&utm_campaign=%25e0%25b2%2585%25e0%25b2%25a4%25e0%25b2%25bf%25e0%25b2%25a5%25e0%25b2%25bf-%25e0%25b2%2589%25e0%25b2%25aa%25e0%25b2%25a8%25e0%25b3%258d%25e0%25b2%25af%25e0%25b2%25be%25e0%25b2%25b8%25e0%25b2%2595%25e0%25b2%25b0-%25e0%25b2%25aa%25e0%25b3%258d%25e0%25b2%25b0%25e0%25b2%25a4%25e0%25b2%25bf%25e0%25b2%25ad%25e0%25b2%259f%25e0%25b2%25a8 https://vishwaprabha.com/2022/01/824/#respond Fri, 07 Jan 2022 00:34:04 +0000 https://vishwaprabha.com/?p=824

Loading

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯಿಂದ ತುಮಕೂರು ಡಿಸಿ ಆಫೀಸ್ ಮುಂಭಾಗ ಸುಮಾರು ದಿನಗಳಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಭದ್ರತೆ ಹಾಗೂ ಸೇವಾ ವಿಲೀನತೆ ಗಾಗಿ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿಗೆ ಕರ್ನಾಟಕ ಲೇಖಕಿಯರ ಸಂಘ (ರಿ.) ತುಮಕೂರು ಜಿಲ್ಲಾ ಶಾಖೆ ತುಮಕೂರು. ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಬ.ಹ.ರಮಾಕುಮಾರಿ ಹಾಗೂ ಶೈಲಾ ನಾಗರಾಜು, ಸಿ.ಎ.ಇಂದಿರಮ್ಮ,ಲಲಿತಾ ಮಲ್ಲಪ್ಪ,ಪ್ರಿಯಾಂಕಾ.ಹಾಗೂ ಸಂಘದ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು

]]>
https://vishwaprabha.com/2022/01/824/feed/ 0 824
ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ https://vishwaprabha.com/2020/12/243/?utm_source=rss&utm_medium=rss&utm_campaign=%25e0%25b2%25b6%25e0%25b2%25bf%25e0%25b2%2595%25e0%25b3%258d%25e0%25b2%25b7%25e0%25b2%2595%25e0%25b2%25b0-%25e0%25b2%25ae%25e0%25b2%2595%25e0%25b3%258d%25e0%25b2%2595%25e0%25b2%25b3%25e0%25b2%25bf%25e0%25b2%2597%25e0%25b3%2586-%25e0%25b2%25aa%25e0%25b3%258d%25e0%25b2%25b0%25e0%25b2%25a4%25e0%25b2%25bf%25e0%25b2%25ad%25e0%25b2%25be https://vishwaprabha.com/2020/12/243/#comments Sat, 26 Dec 2020 04:18:41 +0000 https://vishwaprabha.com/?p=243

Loading

ಕನಿಷ್ಠ ಶೇ.60 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ನಿಗದಿತ ಅರ್ಜಿಗಳನ್ನು ಸಂಸ್ಥೆಯ ಮುಖ್ಯಸ್ಥರ ದೃಢೀಕರಿಸಿದ ಅಂಕ ಪಟ್ಟಿಯೊಂದಿಗೆ ಕಾರ್ಯದರ್ಶಿ/ಖಜಾಂಚಿಗಳ ಕಛೇರಿ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಂಗಳೂರು -560002 ಈ ವಿಳಾಸಕ್ಕೆ ಸಲ್ಲಿಸಲು ತಿಳಿಸಿದೆ. ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುತ್ತದೆ

2019-20ನೇ ಸಾಲಿನ ಏಪ್ರಿಲ್ ಮತ್ತು ಜೂನ್ 2020ರಲ್ಲಿ ನಡೆದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ(ಆರ್ಟ್ಸ್, ಸೈನ್ಸ್, ಕಾಮರ್ಸ್) (ಸಿಬಿಎಸ್‌ಇ, ಐಸಿಎಸ್‌ಇ ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ) ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

2019-20ನೇ ಸಾಲಿನ ಪದವಿ ಅಂತಿಮ ವರ್ಷ (ಬಿಎ, ಬಿಎಸಿ, ಬಿಕಾಂ, ಬಿಇಡಿ, ಬಿಸಿಎ, ಬಿಬಿಎಂ, ಬಿಎಸ್ ಸಿ ಎ, ಬಿ ಹೆಚ್ ಎಂ, ಎಲ್ ಎಲ್ ಬಿ) ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

2019-20ನೇ ಸಾಲಿನಲ್ಲಿ ಬಿಇ 6ನೇ ಸೆಮಿಸ್ಟರ್ ಉತ್ತೀರ್ಣರಾದವರು, ಈಗ ಬಿಇ 7ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಓದುತ್ತಿರುವವರು ಅರ್ಜಿಸಲ್ಲಿಸಬಹುದಾಗಿರುತ್ತದೆ. 2019-20ನೇ ಸಾಲಿನಲ್ಲಿ 2ನೇ ಫೇಸ್ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು (MBBS, BDS, BHMS, BUMS, BAMS ಹಾಗೂ 3ನೇ ಫೇಸ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

2019-20ನೇ ಸಾಲಿನಲ್ಲಿ 2ನೇ ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ( ಎಂಎ, ಎಂಎಸ್ಸಿ, ಎಂಕಾಂ, ಎಂಎಡ್) ಹಾಗೂ 3ನೇ ಸಮಿಸ್ಟರ್ ಸ್ನಾತ್ತಕೋತ್ತರ ಪದಿವ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಕಲ್ಯಾಣ ನಿಧಿಯ ಉಪ ನಿರ್ದೇಶಕರು ಹಾಗೂ ಪ್ರಭಾರಾಧಿಕಾರಿಗಳು 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ನಿಧಿಯ ವತಿಯಿಂದ ಜಿಲ್ಲಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಶಿಕ್ಷಕರುಗಳ, ನಿವೃತ್ತ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-12-2020 ಆಗಿರುತ್ತದೆ

]]>
https://vishwaprabha.com/2020/12/243/feed/ 7 243