General https://vishwaprabha.com Sun, 25 Feb 2024 00:17:20 +0000 en-US hourly 1 https://wordpress.org/?v=6.6.2 185986473 ಕುಂಚಿಟಿಗ ಒಕ್ಕಲಿಗ ಸಮಾಜದ ವದು ವರರಿಗೆ ನೇರ ಮುಖಾಮುಖಿ ಕಾರ್ಯಕ್ರಮ https://vishwaprabha.com/2024/02/1214/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%2582%25e0%25b2%259a%25e0%25b2%25bf%25e0%25b2%259f%25e0%25b2%25bf%25e0%25b2%2597-%25e0%25b2%25b8%25e0%25b2%25ae%25e0%25b2%25be%25e0%25b2%259c%25e0%25b2%25a6-%25e0%25b2%25b5%25e0%25b2%25a6%25e0%25b3%2581-%25e0%25b2%25b5%25e0%25b2%25b0%25e0%25b2%25b0%25e0%25b2%25bf%25e0%25b2%2597 https://vishwaprabha.com/2024/02/1214/#respond Sat, 24 Feb 2024 07:24:33 +0000 https://vishwaprabha.com/?p=1214

Loading

ಕರ್ನಾಟಕ ರಾಜ್ಯ ಕುಂಚಿಟಿಗ ಒಕ್ಕಲಿಗರ ಸಂಘ ಬೆಂಗಳೂರು ವತಿಯಿಂದ ದಿನಾಂಕ 25.02.2024 ರ ಭಾನುವಾರ ಬೆಳಿಗ್ಗೆ 11.00 ಘಂಟೆಗೆ ಸಿ. ಚಿಕ್ಕಣ್ಣ ಸಮುದಾಯ ಭವನ,ನ0 65/67,2ನೇ ಅಡ್ಡ ರಸ್ತೆ, ಬಾಲಾಜಿ ಎಂಕ್ಲೇವ್, ಸಾಗರ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹಿಂಭಾಗ,ಕರಿಹೋಬನಹಳ್ಳಿ(ಎಂಟನೇ ಮೈಲಿ -ಮಾಗಡಿ ರಸ್ತೆ ಮಧ್ಯೆ) ಇಲ್ಲಿ ಕುಂಚಿಟಿಗ ಸಮಾಜದ ವದು ವರರಿಗೆ ನೇರ ಮುಖಾಮುಖಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ದಯಮಾಡಿ ಸಮಾಜದ ಬಂಧುಗಳು ಇದರ ಸದುಪಯೋಗ ಮಾಡಿ ಕೊಳ್ಳಬೇಕೆಂದು ಕೋರಿದೆ.

9901377911/9845363934/9008274344/9844434206

    https://maps.app.goo.gl/5EG1VbAP1RFnU5RV6

    ]]>
    https://vishwaprabha.com/2024/02/1214/feed/ 0 1214
    ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ https://vishwaprabha.com/2022/02/1132/?utm_source=rss&utm_medium=rss&utm_campaign=%25e0%25b2%25a4%25e0%25b2%25b3%25e0%25b2%25b5%25e0%25b2%25be%25e0%25b2%25b0-%25e0%25b2%25b8%25e0%25b2%25ae%25e0%25b2%25be%25e0%25b2%259c%25e0%25b2%2595%25e0%25b3%258d%25e0%25b2%2595%25e0%25b3%2586-%25e0%25b2%25aa%25e0%25b2%25b0%25e0%25b2%25bf%25e0%25b2%25b6%25e0%25b2%25bf%25e0%25b2%25b7%25e0%25b3%258d%25e0%25b2%259f https://vishwaprabha.com/2022/02/1132/#respond Thu, 03 Feb 2022 13:19:11 +0000 https://vishwaprabha.com/?p=1132

    Loading

    ಇಂದು ನಮ್ಮ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ದೊರತಿದೆ ಅಂದರೆ, ಅದರ ಹಿಂದಿನ ದಾರಿ ತುಂಬಾ ಕಷ್ಟಕರವಾಗಿತ್ತು. ಎಷ್ಟೇ ಕಷ್ಟ ಬಂದರು, ಅಡೆತಡೆಗಳಾದರು, ಸರಕಾರಕ್ಕೆ ಬೆಂಬಿಡದೆ. ಬೇತಾಳನಂತೆ ಬೆನ್ನು ಹತ್ತಿ ನಮಗೆ ನ್ಯಾಯ ಕೊಡಿಸುವಲ್ಲಿ ಯಶಸ್ವೀ ಆಗಿದ್ದರೆ ನಮ್ಮ ಹೋರಾಟದ ಹುಲಿ ಶಿವಾಜಿ ಅಣ್ಣನವರು. ದಿನಾಂಕ: 20-03-2020ರಂದು ಕೇಂದ್ರ ಸರಕಾರ ತಳವಾರ ಪರಿವಾರ ಸಮುದಾಯಕ್ಕೆ st ಮೀಸಲಾತಿ ಆದೇಶ ಹೊರಡಿಸಿತು, ನಾವು ಎಲ್ಲರೂ ಖುಷಿ ಪಟ್ಟೆವು. ಅದರೇ ಆ ಖುಷಿ ತುಂಬಾ ದಿನ ಉಳಿಯಲಿಲ್ಲ. ನಮ್ಮ ತಳವಾರ ಸಮಾಜಕ್ಕೆ st ಮೀಸಲಾತಿ ನೀಡಬಾರದು ಎಂಬ ದುರಾಲೋಚನೆಯಿಂದ ರಾಜ್ಯ ಸರಕಾರ, ಮತ್ತು ಕೆಲವು bjp ನಾಯಕರು ಕೇಂದ್ರ ಸರಕಾರದ ಆದೇಶವನ್ನು ತಿರುಚಿ ಹೇಳಿಕೆ ನೀಡುತ್ತಾ ಸಾಗಿದರು. ಇದರಿಂದ ಬೇಸೆತ್ತ ನಮ್ಮ ಯುವ ಹೋರಾಟಗಾರಗು ಸರ್ಕಾರಕ್ಕೆ ಸವಾಲ್ ಎಸೆದರು. ನಮ್ಮ ಹಕ್ಕನ್ನು ನಾವು ಹೋರಾಟದಿಂದ ತೆಗೆದುಕೊಳ್ಳೋಣ ಎಂದು ಯುವಕರಲ್ಲಿ ಹೋರಾಟದ ಕಿಚ್ಚು ಹಚ್ಚಿದರು. ಅದರಂತೆ ಹಳ್ಳಿ ಹಳ್ಳಿಗನ್ನು ಸುತ್ತಾಡಿ ಸಮಾಜದ ಸಂಘಟನೆ ಮಾಡಿದರು ನಮ್ಮ ಹೋರಾಟದ ಹುಲಿ ಶಿವಾಜಿ ಮೇಟಗಾರ ಅವರು. ತಳವಾರ ಪರಿವಾರ ಸಮಾಜವನ್ನು st ಪಟ್ಟಿಗೆ ಸೇರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದರು ರಾಜ್ಯ ಸರಕಾರ st ಪ್ರಮಾಣ ಪತ್ರ ನೀಡದೆ ಅನ್ಯಾಯ ಮಾಡುತ್ತಿದ್ದು, ಉಪ ಮುಖ್ಯಮಂತ್ರಿಗಳು ದ್ವಂದ್ವ ಹೇಳಿಕೆ ನೀಡುತ್ತಿದ್ದು.. ಕೇಂದ್ರ ಸರಕಾರದ ಆದೇಶವನ್ನು ತಿರುಚಿ… ರಾಜ್ಯ ಸರಕಾರ ಬೇರೆ ಬೇರೆ ಸುತ್ತೋಲೆಗಳನ್ನು ಹೊರಡಿಸುತ್ತಾ.. ನಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹ ವಿಸ್ತಾರವಾಗಿ..07-07-2020ರಂದು ಲೈವ್ ಬಂದು ಹೇಳಲಾಯಿತು. 24-07-2020ರಂದು ವಿಜಯಪುರದಲ್ಲಿ ಬ್ರಹತ್ ಹೋರಾಟ ಮಾಡಿ ನಮ್ಮ ಹಕ್ಕು ಪಡಿಯೋಕ್ಕೆ ಯುವಕರಿಗೆ ಕರೆ ನೀಡಿದರು. 21-07-2020ರಂದು ಲೈವ್ ಬರುವ ಮೂಲಕ… ದಿನಾಂಕ 24-07-2020ರಂದು ವಿಜಯಪುರದಲ್ಲಿ ನಡೆಯಬೇಕಿದ್ದ ಹೋರಾಟವನ್ನು ಜಿಲ್ಲೆಯ ಹಿರಿಯರ ಮಾರ್ಗದರ್ಶನ ದಿಂದ 15ದಿನ ಮುಂದುಡಿದ ಬಗ್ಗೆ ಹೇಳಲಾಯಿತು. 21-08-2020ರಂದು ಲೈವ್ ಬಂದು ನಮ್ಮ ಬೇಡಿಕೆಗೆ ಯಾರು ಸ್ಪಂದನೆ ನೀಡದೆ ಇರದ ಕಾರಣ 31-08-2020ರಂದು ವಿಜಾಪುರ ದಲ್ಲಿ ತಳವಾರ ಸಮಾಜದ ವಿಭಿನ್ನವಾದ ಬ್ರಹತ್ ಹೋರಾಟದ ಬಗ್ಗೆ ಹೇಳಿದರು. 29-08-2020ರಂದು ಲೈವ್ ಬರುವ ಮೂಲಕ ಕಾಡು ಜನರ ವೇಷದಲ್ಲಿ, ಅರಬೆತ್ತಲೆಯಾಗಿ.. ಸೊಂಟಕ್ಕೆ ಬೇವಿನ ತಪ್ಪಲ್ಲ ಕಟ್ಟಿಕೊಂಡು ದಿನಾಂಕ 31-08-2020ರಂದು ವಿಜಯಪುರದಲ್ಲಿ ಹೋರಾಟ ಮಾಡುವುದುರ ಬಗ್ಗೆ ಮಾತನಾಡಲಾಯಿತು. 31-8-2020ರಂದು ವಿಜಯಪುರದಲ್ಲಿ 10ಸಾವಿರಕ್ಕು ಅದಿಕ ಜನಗಳು ಸೇರಿ ಕಾಡು ಜನರ ವೇಷದಲ್ಲಿ, ಅರಬೆತ್ತಲೆಯಾಗಿ.. ಪ್ರತಿಭಟನೆ ಮೆರವಣಿಗೆ ಮೂಲಕ dc ಗೆ ಮನವಿ ನೀಡಲಾಯಿತು. 01-10-2020ರಂದು ಫೇಸ್ಬುಕ್ ಲೈವ್ ಬಂದು ಚಳಿಗಾಲ ಅಧಿವೇಶನದಲ್ಲಿ ನಮ್ಮ ಸಮಾಜದ ಬಗ್ಗೆ ಯಾರು ಧ್ವನಿ ಎತ್ತದೇ ಇದ್ದಿದಕ್ಕೆ, ನ್ಯಾಯ ಸಿಗದಿದ್ದಕ್ಕೆ.. ಸರಕಾರದ ವಿರುದ್ಧ ಆಕ್ರೋಶ ವೆಕ್ತಪಡಿಸಿದರು. ದಿನಾಂಕ 05-10-2020ರಂದು ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನಲ್ಲಿ, 09-10-2020ರಂದು ಆಳಂದ್ ತಾಲೂಕಲ್ಲಿ, ಹಾಗೂ ಅಪಜಲಪುರಲ್ಲಿ… ಸುರುಪುರು ತಾಲೂಕಲ್ಲಿ ತಳವಾರ ಸಮಾಜದ ಹೋರಾಟಗಳು ಆದವು. ದಿನಾಂಕ:11-11-2020ರಂದು ಮುದೋಳ’ದಲ್ಲಿ ಬೇಟೆಗಾರರ ವೇಷದಲ್ಲಿ… ಯುವಕರು, ಸಾವಿರಾರು ಮಹಿಳೆಯರು ಸೇರಿ ಬ್ರಹತ್ st ಹೋರಾಟ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲಾಯಿತು. ಹೀಗೆ ನಾನಾ ಜಿಲ್ಲೆಗಳಲ್ಲಿ… ನಾನಾ ವೇಷ ಭೂಷಣ ತೊಟ್ಟು… 15ತಿಂಗಳಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಹೇಳುತ್ತಾ ಹೊರಟರೆ ಶಿವಾಜಿ ಅಣ್ಣನ ಹೋರಾಟದ ಹಾದಿ ಮುಗಿಯುವದಿಲ್ಲ. ಜೀವನದುದ್ದಕ್ಕೂ ಹತ್ತು ಹಲವು, ವಿಭಿನ್ನ ವಿಶಿಷ್ಟವಾದ ಹೋರಾಟಗಳನ್ನು ಮಾಡುತ್ತ ಬಂದವರು ಶಿವಾಜಿ ಮೇಟಗಾರ್ ಅವರು. ಇಂತಹ ನಿಷ್ಷಕ್ಷವಾದ ಹೋರಾಟಗಾರರಿಗೆ, ಹೋರಾಟಗಳಿಗೆ ಬೆಂಬಲಿಸಿದರಿಗಿಂತ ಹೀಯಾಳಿಸಿದವರು, ಕಾಲು ಎಳದವರೇ ಹೆಚ್ಚು. ಅದನೆಲ್ಲ ಮೆಟ್ಟಿ ನಿಂತು… ಸಮಾಜಕ್ಕಾಗಿ ತಮ್ಮ ಸರ್ವಸ್ವನ್ನೇ ಮುಡುಪಾಗಿಟ್ಟ ಸಮಾಜ ಸೇವಕ, ತಳವಾರ ಸಮಾಜದ ಅಪರೂಪದ ಮುತ್ತು, ಹೋರಾಟದ ಹುಲಿ ಶಿವಾಜಿ ಅಣ್ಣನವರಿಗೆ ಸಲಾಂ ಹೇಳಲೇ ಬೇಕು. ಇಂತಿ ನಿಮ್ಮ ಸಹೋದರ #ಅಲೋಕ್_ರೋಡಗಿ.

    ]]>
    https://vishwaprabha.com/2022/02/1132/feed/ 0 1132
    ಅಂತಿಮ ವರ್ಷದ ವಿಜ್ಞಾನ ವಿದ್ಯಾರ್ಥಿಗಳಿಗೆ ಎಂ ಟೆಕ್ ಕಲಿಕೆಯೊಂದಿಗೆ ಗಳಿಕೆ(Earn while you learn program ) https://vishwaprabha.com/2022/02/1120/?utm_source=rss&utm_medium=rss&utm_campaign=%25e0%25b2%2585%25e0%25b2%2582%25e0%25b2%25a4%25e0%25b2%25bf%25e0%25b2%25ae-%25e0%25b2%25b5%25e0%25b2%25b0%25e0%25b3%258d%25e0%25b2%25b7%25e0%25b2%25a6-%25e0%25b2%25b5%25e0%25b2%25bf%25e0%25b2%259c%25e0%25b3%258d%25e0%25b2%259e%25e0%25b2%25be%25e0%25b2%25a8-%25e0%25b2%25b5%25e0%25b2%25bf%25e0%25b2%25a6%25e0%25b3%258d https://vishwaprabha.com/2022/02/1120/#respond Wed, 02 Feb 2022 07:35:17 +0000 https://vishwaprabha.com/?p=1120

    Loading

    ಪದವಿಯಲ್ಲಿ ಇಲ್ಲಿಯವರೆಗೆ ಕೇವಲ ಶೇ 60% ಅಂಕ ಪಡೆದವರೆಲ್ಲರೂ ಅರ್ಹರು

    ಈ ಲಿಂಕ್ ಮುಖೇನ ಸಂಪೂರ್ಣ ಮಾಹಿತಿ ಪಡೆಯಿರಿ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸಿ https://dceplacementcell.blogspot.com/2022/01/wipro-wilp-hiring-bsc-bca-7th-feb-2022.html

    ]]>
    https://vishwaprabha.com/2022/02/1120/feed/ 0 1120
    ಪಿರಿಯಾಪಟ್ಟಣ ಮಡಿಕಟ್ಟೆ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ. https://vishwaprabha.com/2022/02/1114/?utm_source=rss&utm_medium=rss&utm_campaign=%25e0%25b2%25aa%25e0%25b2%25bf%25e0%25b2%25b0%25e0%25b2%25bf%25e0%25b2%25af%25e0%25b2%25be%25e0%25b2%25aa%25e0%25b2%259f%25e0%25b3%258d%25e0%25b2%259f%25e0%25b2%25a3-%25e0%25b2%25ae%25e0%25b2%25a1%25e0%25b2%25bf%25e0%25b2%2595%25e0%25b2%259f%25e0%25b3%258d%25e0%25b2%259f%25e0%25b3%2586-%25e0%25b2%2586%25e0%25b2%25b5%25e0%25b2%25b0 https://vishwaprabha.com/2022/02/1114/#respond Wed, 02 Feb 2022 00:47:36 +0000 https://vishwaprabha.com/?p=1114

    Loading

    ಪಿರಿಯಾಪಟ್ಟಣ ಮಡಿಕಟ್ಟೆ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ತಾಲ್ಲೂಕು ಮಡಿವಾಳ ಸಂಘದ ಅದ್ಯಕ್ಷರಾದ ಮಾದೇಶ್ ಕುಮಾರ್,ಮಾನವ ಹಕ್ಕುಸಂರಕ್ಷಣೆ ತಾಲೊಕು ಅದ್ಯಕ್ಷರಾದ ಸಂತೋಷ್ ಗೌಡ,ಮಧುಗೌಡ ಮಡಿವಾಳ ಸಂಘದ ಗೌರವಾದ್ಯಕ್ಷರಾದ ಕೃಷ್ಣಶೆಟ್ಟರು, ಉಪಾದ್ಯಕ್ಷರಾದ ರಾಮು,ಮತ್ತು ವಸಂತ,ಸಹಕಾರ್ಯದರ್ಶಿ ಸತೀಶ್,ಖಚಾಂಚಿ ರಾಜಶೆಟ್ಟಿ,ನಿರ್ದೇಶಕರಾದ ಪ್ರಸನ್ನ,ನಾಗರಾಜು,ಅಶೋಕ,ವೀರಭದ್ರ ಶೆಟ್ಟಿ, ವೀರಭದ್ರ,ಕುಮಾರ ಸೋಮ,ನವೀನ,ಪ್ರದೀಪ್, ಮಂಜು,ಪಿರಿಯಾಪಟ್ಟ ಟೌನ್ ಮಡಿವಾಳ ಸಂಘದ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು

    ]]>
    https://vishwaprabha.com/2022/02/1114/feed/ 0 1114
    ಮಾಸದ ನೆನಪು https://vishwaprabha.com/2022/01/1105/?utm_source=rss&utm_medium=rss&utm_campaign=%25e0%25b2%25ae%25e0%25b2%25be%25e0%25b2%25b8%25e0%25b2%25a6-%25e0%25b2%25a8%25e0%25b3%2586%25e0%25b2%25a8%25e0%25b2%25aa%25e0%25b3%2581 https://vishwaprabha.com/2022/01/1105/#respond Mon, 31 Jan 2022 11:54:35 +0000 https://vishwaprabha.com/?p=1105

    Loading

    ಓದುವ ಅಭಿರುಚಿ ಬೆಳೆದಿದ್ದು ಕನ್ನಡ ವಾರ ಪತ್ರಿಕೆ ತರಂಗದ ಬಾಲವನದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕಾರಂತಜ್ಜನ ಪುಟ ಹಾಗೂ ಮಕ್ಕಳ ಕಥೆಗಳು, ಪುಟ್ಟ ಕವನಗಳಿಂದ ನಂತರ ಚಿನಕುರಳಿ ಹಾಸ್ಯ ಹಾಗೊಮ್ಮೆ ಹೀಗೊಮ್ಮೆ ಸಿನಿಮಾ ಪುಟಗಳನ್ನು ತಿರುವುತ್ತಾ ತಿರುವುತ್ತಾ ಪ್ರತಿವಾರ ನಮ್ಮ ಮನೆಗೆ ತರಂಗ ಬರುವುದನ್ನೆ ಕಾತುರದಿಂದ ಕಾಯುತ್ತಿದ್ದೆವು. ಹೀಗೆ ಬೆಳೆದ ಪುಸ್ತಕದೊಳಗಿನ ನಂಟು ಬಿಡಿಸದ ಬಂಧನವಾಯಿತು. ತರಂಗದೊಂದಿಗೆ ಸುಧಾ, ರೂಪತಾರ ಗೃಹಶೋಭಾ,ವಿಜಯಚಿತ್ರ, ದೀಪಾವಳಿ ವಿಶೇಷಾಂಕಗಳು, ತಿಂಗಳಿಗೊಂದು ಹಂಸರಾಗ, ಚಂಪಕ, ಬಾಲಮಿತ್ರ, ಪ್ರತಿವಾರ ತಪ್ಪದೇ ತರುತ್ತಿದ್ದ ಲಂಕೇಶ್ ಪತ್ರಿಕೆ, ಮತ್ತೇ ಹೊಸತನದಿಂದ ಮೂಡಿ ಬಂದ ಹಾಯ್ ಬೆಂಗಳೂರು ಪ್ರತಿದಿನ ಬರುತ್ತಿದ್ದ ಕನ್ನಡ ಪ್ರಭ ಇವಿಷ್ಟು ನಮ್ಮ ಮನೆಯ ಟೇಬಲ್ ಅಲಂಕರಿಸುತ್ತಿದ್ದವು. ಯಾವುದು ಓದುವುದು ಯಾವುದು ಬಿಡುವುದು, ಎಲ್ಲವೂ ಹೊಸ ಹೊಸ ವಿಷಯಗಳನ್ನು ಹೊತ್ತು ತರುತ್ತಿದ್ದವು. ಇದರ ಜೊತೆಗೆ ಶಾಲಾಪುಸ್ತಕಗಳನ್ನು ಓದಬೇಕಿತ್ತು. ಈ ಓದುವ ಹವ್ಯಾಸ ಬೆಳೆಸಿಕೊಂಡು ಶಾಲೆಯಲ್ಲಿ ಗುರುಗಳು ಕೊಟ್ಟ ಮನೆ ಕೆಲಸವನ್ನು ಕಾಟಾಚಾರಕ್ಕೆ ತಿದ್ದಿ ರೂಲ್ ದೊಣ್ಣೆಯಿಂದ ಏಟು ತಿಂದ ನೆನಪುಗಳು ಇವೆ. ಆದರೂ ನಿಯತಕಾಲಿಕಗಳ ಮೇಲಿನ ವ್ಯಾಮೋಹ ಮಾತ್ರ ಹೋಗುತ್ತಿರಲಿಲ್ಲ. ಇದರ ಜೊತೆಗೆ ಗ್ರಂಥಾಲಯದಿಂದ ತರುತ್ತಿದ್ದ ಬೆಕ್ಕಿನ ಕಣ್ಣು, ತಾಮ್ರದ ತಂಬಿಗೆ, ಹಣ್ಣೆಲೆ ಚಿಗುರಿದಾಗ, ಪ್ರೇಮ ಪಲ್ಲವಿ, ಚಂದ್ರಮ, ನನ್ನ ನಿನ್ನ ನಡುವೆ, ಇನ್ನೂ ಹಲವಾರು ಕಾದಂಬರಿಗಳು ಓದುವ ಮನಸ್ಸನ್ನು ಸೆರೆಹಿಡಿದುಬಿಟ್ಟಿದ್ದವು. ಪ್ರತಿವಾರ ತರಂಗದಲ್ಲಿ ಪ್ರಕಟವಾಗುತ್ತಿದ್ದ ಕಪ್ಪಂಚು ಬಿಳಿ ಸೀರೆ ಧಾರಾವಾಹಿಯಂತೂ ವಾರಪತ್ರಿಕೆ ಬರುವುದು ತಡವಾದರೆ ಮನ ಮಿಡುಕುತ್ತಿತ್ತು.

    ಶ್ರೀ ಮತಿ ರೇಖಾ ಕಾಖಂಡಕಿಯವರು ಬರೆದ ಬಯಲು ಆಲಯ ಮನಸೂರೆಗೊಂಡು ಧಾರಾವಾಹಿ ಓದುವ ಹುಚ್ಚು ಹಿಡಿಸಿ ಬಿಟ್ಟಿತ್ತು. ಓದುತ್ತಾ ಓದುತ್ತಾ ಅವರ ಪುಟ್ಟ ಅಭಿಮಾನಿಯಾಗಿ ಪ್ರೌಢಶಾಲೆ ಓದುತ್ತಿರುವಾಗಲೇ ಅವರಿಗೆ ಅಂಚೆ ಕಾರ್ಡಿನಲ್ಲಿ ಪತ್ರ ಬರೆದು ಅಭಿಮಾನ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ ಅವರೂ ಸಹ ಹಿಂದಿರುಗಿ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದಾಗ ನನಗಾದ ಸಂತಸ ಅಷ್ಟಿಷ್ಟಲ್ಲ. ಅವರು ಪತ್ರದಲ್ಲಿ ಅರುಣರಾಗ , ನಾನು ಬರೆದ ಕಾದಂಬರಿ ಸಿನಿಮಾ ಆಗಿದೆ ಎಂದು ತಿಳಿಸಿದ್ದರು. ಇದು ನನಗೆ ಇನ್ನೂ ಮಾಸದ ನೆನಪಾಗಿ ಉಳಿದಿದೆ.

     ಹೀಗೆ ಓದುವ ಅಭಿರುಚಿ ಬೆಳೆಸಿಕೊಂಡು ನಾನು ನಾನೇ ಲೇಖನಗಳನ್ನು ಬರೆಯುವಷ್ಟು ಪ್ರಬುದ್ಧಳಾದೆ. ರಾಜಕೀಯ ಜ್ಞಾನ ಸಾಮಾಜಿಕ ಕಾಳಜಿಗಳು ದೇಶದ ಸ್ಥಿತಿಗಳ ಬಗ್ಗೆ ಕಿಂಚಿತ್ತಾದರೂ ಬೆಳಕು ಇದೆ ಎಂದರೆ ಅದಕ್ಕೆ ಪ್ರತಿ ವಾರ ಓದುತ್ತಿದ್ದ ಪಿ. ಲಂಕೇಶ್ ರವರ ಲಂಕೇಶ್ ಪತ್ರಿಕೆ ಎಂದರೆ ತಪ್ಪಾಗದು, ಬೆಳಿಗ್ಗೆ ಎದ್ದ ತಕ್ಷಣ ಪೇಪರ್ ಮುಂದಿಟ್ಟುಕೊಂಡು ಕೂರುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನಾನು ಗೃಹಿಣಿಯರು ಮಾಡುವ ಮನೆ ಕೆಲಸಗಳನ್ನು ಕಲಿಯದೆ ಮನೆ ಮಂದಿಯೊಂದಿಗೆ ಬೈಸಿಕೊಂಡಿದ್ದು ಇದೆ. ಹೀಗೆ ಪುಸ್ತಕದ ಜೊತೆ ನನ್ನ ಸ್ನೇಹ ಈಗಲೂ ಮುಂದುವರೆದಿದೆ. ಆದರೆ ಮೊದಲಿನಷ್ಟಲ್ಲ. ಸಾಮಾಜಿಕ ಜಾಲತಾಣಗಳ ಸೆಳೆತಕ್ಕೆ ಸಿಕ್ಕಿ ಸ್ವಲ್ಪ ಕಡಿಮೆಯಾಗಿದೆ.
    
     ಹೌದು ಇದು ನನಗೊಬ್ಬಳಿಗೆ ಅನ್ವಯಿಸುವುದಿಲ್ಲ, ನನ್ನಂತಹ ಸಾವಿರಾರು ಓದುಗರು ಇಂದು ಮೊಬೈಲ್ ಮಾಯಾಲೋಕಕ್ಕೆ ಸಿಲುಕಿ ಪುಸ್ತಕ ಓದುವವರ ಸಂಖ್ಯೆ ಗಮನಾರ್ಹ ಇಳಿಕೆಯಾಗಿದೆ. ಮೊನ್ನೆ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೊರಟಾಗ ಮೊಬೈಲ್ ಬಳಕೆ ಕಡಿಮೆ ಮಾಡಲೆಂದು ಬುಕ್ ಸ್ಟೋರ್ ನಲ್ಲಿ ಒಂದು ವಾರಪತ್ರಿಕೆ ಕೇಳಿದಾಗ ಅಂಗಡಿಯಾತ ನಕ್ಕು ನುಡಿದ, ಮೇಡಂ ಈಗ ಪತ್ರಿಕೆಗಳು ಮೊದಲಿನಂತೆ ಬರುತ್ತಿಲ್ಲ ಓದುಗರ ಸಂಖ್ಯೆ ಇಳಿಕೆಯಾಗಿದೆ ಎಂದಾಗ ಬಹಳ ಬೇಜಾರಾಯಿತು. 
    
    ಎಷ್ಟು ಸತ್ಯ ಸಂಗತಿ ಅಲ್ಲವೇ, ಸಾವಿರಾರು ವಿಷಯಗಳನ್ನು ಒಡಲಲ್ಲಿ ಹುದುಗಿಸಿಕೊಂಡು ಓದುಗರಿಗೆ ರಸದೌತಣ ನೀಡುತ್ತಿದ್ದ ಪತ್ರಿಕೆಗಳು, ಕಾದಂಬರಿಗಳು, ಮಕ್ಕಳ ಕಥೆಗಳು,ಮುಂತಾದವುಗಳು ಇಂದು ಸತ್ವ ಕಳೆದುಕೊಂಡು ಮೂಲೆ ಸೇರುವುದರ ಜೊತೆಗೆ ಕಾಣದಂತೆ ಮಾಯವಾಗುತ್ತಿವೆ.ಮೊಬೈಲ್ ಬಳಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ ಮೇಲಂತೂ ಪುಸ್ತಕ ಓದುವುದನ್ನು ಎಲ್ಲರೂ ಮರೆತಿದ್ದಾರೆ. ಇನ್ನು ಆನ್ಲೈನ್ನಲ್ಲಿ ಶಿಕ್ಷಣ, ಬಯಸಿದ ಚಲನಚಿತ್ರಗಳು, ಹಾಡುಗಳು, ಸಾಹಿತ್ಯ, ಅಡಿಗೆ,ಅಲಂಕಾರಗಳ ಬಗ್ಗೆ ಮಾಹಿತಿ ವಿಜ್ಞಾನ ರಾಜಕೀಯ, ಸಾಮಾಜಿಕ ಆರ್ಥಿಕ ವಿಷಯ ಮುಂತಾದವುಗಳ ಬಗ್ಗೆ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳು ಕ್ಷಣಾರ್ಧದಲ್ಲಿ ಕುಳಿತ ಜಾಗದಲ್ಲೇ ವೀಕ್ಷಿಸುವಂತ ವಿಪುಲ ಅವಕಾಶಗಳನ್ನು ಈ ಜಂಗಮವಾಣಿ ಒದಗಿಸಿಕೊಟ್ಟಿರುವುದರಿಂದ ಮುಂದಿನ ತಲೆಮಾರಿನವರು ಪುಸ್ತಕ ಹೇಗೆ ಉಪಯೋಗಿಸುತ್ತಿದ್ದರು ಅದರಿಂದ ವಿಷಯ ಹೇಗೆ ತಿಳಿಯುತ್ತಿದ್ದರು ಎನ್ನುವುದನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬೇಕಾಗುತ್ತದೆಯೇನೋ ಅನಿಸುವುದುಂಟು. ಒಟ್ಟಿನಲ್ಲಿ ಜಂಗಮವಾಣಿಯ ಆಕರ್ಷಣೆಯಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿರುವುದಂತೂ ಸುಳ್ಳಲ್ಲ. 
    
     🖊 ಕೀರ್ತಿ ಶ್ರೀ ಬಿ.ಜಿ.
    ]]>
    https://vishwaprabha.com/2022/01/1105/feed/ 0 1105
    ಆಸರೆ ಫೌಂಡೇಶನ್ ವತಿಯಿಂದ ಶಾಲೆಗೆ ಸುಣ್ಣ-ಬಣ್ಣ https://vishwaprabha.com/2022/01/1083/?utm_source=rss&utm_medium=rss&utm_campaign=%25e0%25b2%2586%25e0%25b2%25b8%25e0%25b2%25b0%25e0%25b3%2586-%25e0%25b2%25ab%25e0%25b3%258c%25e0%25b2%2582%25e0%25b2%25a1%25e0%25b3%2587%25e0%25b2%25b6%25e0%25b2%25a8%25e0%25b3%258d-%25e0%25b2%25b5%25e0%25b2%25a4%25e0%25b2%25bf%25e0%25b2%25af%25e0%25b2%25bf%25e0%25b2%2582%25e0%25b2%25a6-%25e0%25b2%25b6%25e0%25b2%25be https://vishwaprabha.com/2022/01/1083/#respond Fri, 28 Jan 2022 16:26:42 +0000 https://vishwaprabha.com/?p=1083

    Loading

    ಕೊರಟಗೆರೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡದ ನವೀಕರಣ ಕಾರ್ಯಕ್ಕೆ
    ಮುಂದಾದ ಆಸರೆ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಂಬಾ ಹಳೆಯದಾದ ಶಾಲಾ ಕಟ್ಟಡ ಸುಣ್ಣ ಬಣ್ಣ ಇಲ್ಲದೆ ಹಾಗೂ ಒಡೆದು ಹೋಗಿದ್ದ ಗಾಜುಗಳಿಂದ ಕಳೆಗುಂದಿತ್ತು ಇದನ್ನು ಕಂಡ ಆಸರೆ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತಮ್ಮದುಡಿಮೆಯ ಸ್ವಂತ ಹಣವನ್ನು ಕೈಲಾದಷ್ಟು ವ್ಯಯಿಸಿ ಸುಣ್ಣಬಣ್ಣ ಬಳಿಸಿ ಹಾಗೂ ಗಾಜುಗಳನ್ನು ಪುನರ್ ಸ್ಥಾಪಿಸಿ ಶಾಲೆಯನ್ನು ಕಂಗೊಳಿಸುವಂತೆ ಮಾಡಿದ್ದಾರೆ ಈ ಕಾರ್ಯನಾಗರೀಕರ ಶ್ಲಾಘನೆಗೆ ಕಾರಣವಾಗಿದೆ.

    ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ಶಾಲೆಯ ಅಭಿವೃದ್ಧಿಗೆ ಮನಸ್ಸು ಮಾಡಿರುವುದು ಸಂತಸದ ವಿಚಾರ. ಪ್ರತಿಯೊಬ್ಬರು ತಾನು ಓದಿದ ಶಾಲೆಗೆ ಅಳಿಲು ಸೇವೆ ಮಾಡಬೇಕೆಂಬ ಮನಸ್ಸು ಮಾಡಿದರೆ ಎಲ್ಲ ಶಾಲೆಗಳು ಸುಸಜ್ಜಿತಗೊಂಡು ಮುಂದಿನ ಯುವ ಪೀಳಿಗೆಗೆ ವಿದ್ಯಾಭ್ಯಾಸ ಮಾಡಲು ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.

    ಆಸರೆ ಫೌಂಡೇಶನ್ ಅಧ್ಯಕ್ಷ ಹೊನ್ನೇಶ್ ಮಾತನಾಡಿ ಹಳೆಯ ವಿದ್ಯಾರ್ಥಿಗಳು ಹಾಗೂ ಆಸರೆ ಫೌಂಡೇಶನ್ ಕಾರ್ಯಕರ್ತರು ಈ ಶಾಲೆಯ ದುಃಸ್ಥಿತಿಯನ್ನು ಕಂಡು ಉತ್ತಮ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯೋಜನೆಗೆ ಮುಂದಾಗಿದ್ದಾಗಿ ತಿಳಿಸಿ ಇನ್ನೂ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು ಇನ್ನುಳಿದ ಹಳೆಯ ವಿದ್ಯಾರ್ಥಿಗಳ ನೆರವು ಪಡೆದು ಪೂರ್ಣಗೊಳಿಸುವ ಭರವಸೆ ಇದೆಯೆಂದು ಅಭಿಪ್ರಾಯಪಟ್ಟರು.

    ಸಮಾರಂಭದಲ್ಲಿ ಆಸರೆ ಫೌಂಡೇಶನ್ ಪದಾಧಿಕಾರಿಗಳಾದ ಪ್ರಸನ್ನಕುಮಾರ್, ಭೀಮರಾಜು, ಕಾಂತರಾಜು ಉಮೇಶ್ ಸುನಿಲ್ ಕುಮಾರ್ ಆನಂದ್ ಮಲ್ಲೇಶ್, ಹಳೆಯ ವಿದ್ಯಾರ್ಥಿಗಳ ಸಂಘದ ಮಾನಸ, ಮಂಜುಳಾ, ಭವ್ಯ, ಶಾಲಿನಿ, ಶಾಲಾ ಉಪಪ್ರಾಂಶುಪಾಲ ಚೈತ್ರ, ಶಾಲಾ ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು

    ]]>
    https://vishwaprabha.com/2022/01/1083/feed/ 0 1083
    ಟಿ.ವಿ.ಮಾರುತಿರವರಿಗೆ ನುಡಿನಮನ https://vishwaprabha.com/2022/01/1040/?utm_source=rss&utm_medium=rss&utm_campaign=%25e0%25b2%259f%25e0%25b2%25bf-%25e0%25b2%25b5%25e0%25b2%25bf-%25e0%25b2%25ae%25e0%25b2%25be%25e0%25b2%25b0%25e0%25b3%2581%25e0%25b2%25a4%25e0%25b2%25bf%25e0%25b2%25b0%25e0%25b2%25b5%25e0%25b2%25b0%25e0%25b2%25bf%25e0%25b2%2597%25e0%25b3%2586-%25e0%25b2%25a8%25e0%25b3%2581%25e0%25b2%25a1%25e0%25b2%25bf%25e0%25b2%25a8 https://vishwaprabha.com/2022/01/1040/#respond Mon, 24 Jan 2022 15:44:49 +0000 https://vishwaprabha.com/?p=1040

    Loading

    ಟಿ.ವಿ.ಮಾರುತಿರವರಿಗೆ ನುಡಿನಮನ

    ಇತ್ತೀಚೆಗೆ ಬೆಂಗಳೂರಿನಲ್ಲಿ ನಿಧನರಾದ ದಿವಂಗತ ಟಿ.ವಿ.ಮಾರುತಿರವರಿಗೆ ಗೌರವ ಸಲ್ಲಿಸಲು ಆನ್‌ಲೈನ್ ಮೂಲಕ ಸಾರ್ವಜನಿಕ ‘ ನುಡಿ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ದಿನಾಂಕ: 26-1-2022, ಸಮಯ: ಸಂಜೆ 6 ಗಂಟೆಗೆ ಸರಿಯಾಗಿ

    GOOGLE MEET meeting link: meet.google.com/rce-tysy-euh

    ದಿವಂಗತ ಟಿ.ವಿ.ಮಾರುತಿರವರ ಅಭಿಮಾನಿಗಳು, ಹಿತೈಷಿಗಳು, ಸಂಬಂಧಿಕರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಇತ್ಯಾದಿ ಎಲ್ಲರೂ ಭಾಗವಹಿಸಿ ತಮ್ಮ ನುಡಿ ನಮನ ಸಲ್ಲಿಸಬಹುದಾಗಿದೆ. ಆನ್‌ಲೈನ್ ಸಭೆಯಾಗಿರುವುದರಿಂದ ಸಭೆ ಚುಟುಕಾಗಿರುತ್ತದೆ. ಪ್ರತಿಯೊಬ್ಬರೂ ಗರಿಷ್ಟ 5 ನಿಮಿಷಗಳ ಕಾಲದೊಳಗೆ ತಮ್ಮ ನುಡಿ-ನಮನ ಸಲ್ಲಿಸಲು ಪೂರ್ವತಯಾರಿ ಮಾಡಿಕೊಂಡು ಬಂದರೆ ಒಳ್ಳೆಯದು. ಪೂರ್ವತಯಾರಿಯಲ್ಲಿ ಲಿಖಿತವಾಗಿ ಕಾರ್ಯಕ್ರಮ ಪೂರ್ವದಲ್ಲಿಯೇ ನುಡಿ-ಸಿದ್ದಪಡಿಸಿ ಈ ಉದ್ದೇಶಕ್ಕೆ ರಚಿಸುವ whatsapp group ನಲ್ಲಿ ಹಂಚಿಕೊಂಡರೆ ಇನ್ನೂ ಉತ್ತಮವಾಗಿರುತ್ತದೆ. ಈ ರೀತಿ ಲಿಖಿತವಾಗಿ ಹಂಚಿಕೊಳ್ಳುವ ನುಡಿ-ನಮನವನ್ನು ಅಂತಿಮವಾಗಿ Compile ಮಾಡಿ ಪ್ರಕಟಿಸಲು ಪ್ರಯತ್ನಿಸಲಾಗುವುದು.

    ಇದಕ್ಕಾಗಿ ಈ ಕೆಳಗಿನ whatsapp group ರಚಿಸಿದ್ದು ಇಚ್ಚಿಸುವವರು group ಗೆ ಸೇರಬಹುದಾಗಿದೆ:


    https://chat.whatsapp.com/CZLM8Kekiot4wfKUeEKfkH

    ಈ ಸುದ್ದಿಯನ್ನು ಸಾರ್ವತ್ರಿಕವಾಗಿ ಎಲ್ಲರಿಗೂ share ಮಾಡಿ.

    ಸಭೆ ಆರಂಭವಾದಾಗ ದಯೆಮಾಡಿ ಎಲ್ಲರೂ volume mute ಮಾಡಿಕೊಂಡಿರಿ ಹಾಗೂ ಮಾತನಾಡಲು ಇಚ್ಚಿಸುವವರಿಗೆ ಅನುಮತಿಸಲಾಗುವುದು.

    ಮಾತನಾಡಲಿಚ್ಚಿಸದೇ ಲಿಖಿತವಾಗಿ ಅಭಿಪ್ರಾಯ ನೀಡುವವರು whatsapp ಗ್ರೂಪ್ ನಲ್ಲಿ ನೀಡಬಹುದಾಗಿದೆ.

    ಮಾತನಾಡುವಾಗ ಅಥವಾ ಲಿಖಿತ ಅಭಿಪ್ರಾಯ ನೀಡುವಾಗ ದಿವಂಗತ ಟಿ.ವಿ.ಮಾರುತಿರವರೊಂದಿಗೆ ನಿಮ್ಮ ಒಡನಾಟ, ಅವರ ಸಾಧನೆಗಳು, ಸಮಾಜಸೇವೆ, ಅವರ ವ್ಯಕ್ತಿತ್ವ , ನಿಮ್ಮ ಅನುಭವ ಇತ್ಯಾದಿ ಎಲ್ಲಾ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಅರ್ಥಪೂರ್ಣವಾಗಿ ಸ್ಪುಟವಾಗಿ ವ್ಯಕ್ತಪಡಿಸಬಹುದಾಗಿದೆ.

    ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಲು ಎಲ್ಲರೂ ಸಹಕರಿಸಲು ಕೋರಿದೆ.

    ಆಯೋಜಕರು :

    ಕುಸಾವಿನಿ ಬಳಗ(ರಿ),
    ನಂ.46, ಕೆ.ಎಸ್.ವಿ. ನಿಲಯ, 11 ನೇ ಕ್ರಾಸ್, ಮಿಲ್ಲರ್ ರಸ್ತೆ, ವಸಂತನಗರ, ಬೆಂಗಳೂರು-560052

    email: kusavini@gmail.com
    website: www.kusavinibalaga.org

    ]]>
    https://vishwaprabha.com/2022/01/1040/feed/ 0 1040
    ಕಸ ವಿಲೇವಾರಿ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿ https://vishwaprabha.com/2022/01/1015/?utm_source=rss&utm_medium=rss&utm_campaign=%25e0%25b2%2595%25e0%25b2%25b8-%25e0%25b2%25b5%25e0%25b2%25bf%25e0%25b2%25b2%25e0%25b3%2587%25e0%25b2%25b5%25e0%25b2%25be%25e0%25b2%25b0%25e0%25b2%25bf-%25e0%25b2%2598%25e0%25b2%259f%25e0%25b2%2595%25e0%25b2%25a6%25e0%25b2%25b2%25e0%25b3%258d%25e0%25b2%25b2%25e0%25b2%25bf-%25e0%25b2%2595%25e0%25b2%25be%25e0%25b2%25a3 https://vishwaprabha.com/2022/01/1015/#respond Thu, 20 Jan 2022 14:58:31 +0000 https://vishwaprabha.com/?p=1015

    Loading

    ಕೊರಟಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವತಿಯಿಂದ ನಿರ್ವಹಿಸುತ್ತಿರುವoತಹ ಘನತ್ಯಾಜ್ಯ ಘಟಕದ ವಿಲೇವಾರಿ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಕೆಲಕಾಲ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಮತ್ತು ಇತರೆ ಪೌರಕಾರ್ಮಿಕರು ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.ಮುಖ್ಯ ಅಧಿಕಾರಿ ಲಕ್ಷ್ಮಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಬೆಂಕಿ ಅವಘಡ ಕಾರಣಕ್ಕೆ ತನಿಖೆ ನಡೆಸಲಾಗುತ್ತಿದೆ.

    ]]>
    https://vishwaprabha.com/2022/01/1015/feed/ 0 1015
    ಅಸಂಘಟಿತ ಕಾಮಿ೯ಕರಿಗಾಗಿ ಇ-ಶ್ರಮ ಕಾಡ೯ https://vishwaprabha.com/2022/01/1005/?utm_source=rss&utm_medium=rss&utm_campaign=%25e0%25b2%2585%25e0%25b2%25b8%25e0%25b2%2582%25e0%25b2%2598%25e0%25b2%259f%25e0%25b2%25bf%25e0%25b2%25a4-%25e0%25b2%2595%25e0%25b2%25be%25e0%25b2%25ae%25e0%25b2%25bf%25e0%25b3%25af%25e0%25b2%2595%25e0%25b2%25b0%25e0%25b2%25bf%25e0%25b2%2597%25e0%25b2%25be%25e0%25b2%2597%25e0%25b2%25bf-%25e0%25b2%2587-%25e0%25b2%25b6 https://vishwaprabha.com/2022/01/1005/#respond Thu, 20 Jan 2022 13:57:06 +0000 https://vishwaprabha.com/?p=1005

    Loading

    ರೈತರು,ಸಮಾಜಸೇವಕರು,ಚಾಲಕರು,ಅಚ೯ಕರು ಸೇರಿದಂತೆ 24 ಕ್ಕೂ ಹೆಚ್ಚು ವಗ೯ದ ಜನರಿಗೆ ಅಜಿ೯ಸಲ್ಲಿಸಲು ಮಾಹಿತಿ

    ]]>
    https://vishwaprabha.com/2022/01/1005/feed/ 0 1005
    ಗೂಡು ಸೇರಿದಾಗ https://vishwaprabha.com/2022/01/991/?utm_source=rss&utm_medium=rss&utm_campaign=%25e0%25b2%2597%25e0%25b3%2582%25e0%25b2%25a1%25e0%25b3%2581-%25e0%25b2%25b8%25e0%25b3%2587%25e0%25b2%25b0%25e0%25b2%25bf%25e0%25b2%25a6%25e0%25b2%25be%25e0%25b2%2597 https://vishwaprabha.com/2022/01/991/#respond Wed, 19 Jan 2022 10:05:37 +0000 https://vishwaprabha.com/?p=991

    Loading

    ಸುಮಾರು ಇಪ್ಪತ್ತು ವರ್ಷಗಳ ನಂತರ ಅಪರಿಚಿತ ದೂರವಾಣಿ ಕರೆಯೊಂದು ನನ್ನ ಕರೆಯಿತು. ಕುತೂಹಲದಿಂದ ರಿಂಗಣಿಸುತ್ತಿದ್ದ ಫೋನ್ ತೆಗೆದೆ. ಅತ್ತಲಿಂದ ಹಲೋ ನಾನು ಲೀಲಾ ಮಾತಾಡ್ತಾ ಇರೋದು , ಬಿಎ ಓದುವಾಗಿನ ಸ್ನೇಹಿತೆ ಗುರುತು ಸಿಕ್ಕಿತಾ ಎಂದಳು. ನನಗೆ ಥಟ್ಟನೆ ಲೀಲಾ ಎಂದಾಕ್ಷಣ ಬಳುಕುವ ಬಳ್ಳಿ, ಉದ್ದನೆಯ ಜಡೆಯ ಹುಡುಗಿ ಎಂದು ಅರ್ಥವಾಯಿತು. ಸಂತೋಷಕ್ಕೆ ಪಾರವೇ ಇರಲಿಲ್ಲ. ಲೀಲಾ ಇಷ್ಟು ವರ್ಷ ಕಳೆದ ಮೇಲೆ ಕಾಲ್ ಮಾಡಿರುವೆ ನಂಬರ್ ಹೇಗೆ ಸಿಕ್ತು ಆರೋಗ್ಯ ತಾನೇ ಎಂದೆ. ಅದಕ್ಕವಳು ಅಮ್ಮಾ ತಾಯೀ, ನಾವು ನಮ್ಮ ಬ್ಯಾಚ್ ನ ಹಳೆಯ ಸ್ನೇಹಿತರ ವಾಟ್ಸಾಪ್ ಗ್ರೂಪ್ ರಚಿಸಿದ್ದೇವೆ. ಗುಂಪು ರಚಿಸಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ನೀವ್ಯಾರೋ ಕೆಲವರು ಮಾತ್ರ ಗ್ರೂಪಿನಲ್ಲಿ ಇಲ್ಲ . ಹೇಗೋ ಪತ್ತೇ ಮಾಡಿ ನಿನ್ನ ನಂಬರ್ ಹುಡುಕಿದೆ, ಎಂದಳು. ನಂತರ ಇಬ್ಬರು ಸುಮಾರು ದಿನಗಳ ನಂತರ ಸಿಕ್ಕಿದ್ದರಿಂದ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡೆವು. ಹಾಗೇ ಅವಳು ನನ್ನನ್ನು ಗ್ರೂಪಿಗೆ ಸೇರಿಸಿ ನನ್ನ ಹೆಸರು ಮತ್ತು ಫೋಟೋ ಹಾಕಿದಳು. ಆ ದಿನಗಳಲ್ಲಿ ಸಿರಾ ನನಗೆ ಬಹಳ ಹೊಸದು. ದೂರದ ಸಂಬಂಧಿಗಳು ಬಿಟ್ಟರೆ ಅಷ್ಟಾಗಿ ಹತ್ತಿರದ ಸಂಬಂಧಿಗಳು ಇಲ್ಲಾ, ಸ್ನೇಹಿತರಂತೂ ಇಲ್ಲವೇ ಇಲ್ಲ. ನನ್ನ ತಂದೆಗೆ ಸಿರಾ ಕೋರ್ಟ್ ಗೆ ಶಿರಸ್ತೇದಾರ್ ಆಗಿ ಮಧುಗಿರಿಯಿಂದ ವರ್ಗಾವಣೆಯಾದಾಗ ಅದೇ ವೇಳೆಗೆ ದ್ವಿತೀಯ ಪಿಯುಸಿ ಮುಗಿಸಿದ ನನಗೆ ಸಿರಾ ರಂಗನಾಥ ಪ್ರಥಮ ದರ್ಜೆ ಕಾಲೇಜಿಗೆ ಸೇರುವ ಸೌಭಾಗ್ಯ ದೊರೆತಿತ್ತು. ನಮ್ಮ ಮನೆಯವರೆಲ್ಲ ಮಧುಗಿರಿಯಲ್ಲಿಯೇ, ಬಿಎ ಪದವಿ ಮುಗಿಸಿದರೂ ನಾನು ಮಾತ್ರ ಸಿರಾದಲ್ಲಿ ಕಾಲೇಜಿಗೆ ಸೇರಿದ್ದೆ.  ಆಕಸ್ಮಿಕವಾಗಿ ನನ್ನ ತಂದೆಗೆ ಕಾಲೇಜಿನ  ಉಪನ್ಯಾಸಕರ ಪರಿಚಯವಾಗಿ ಅವರ ಕೃಪಾಕಟಾಕ್ಷ ದಿಂದ ನಾನು ಸಿರಾದಲ್ಲಿ ಓದುವಂತಾಯಿತು. ಹೀಗೆ ಮೂರು ವರ್ಷ ಕಾಲೇಜಿಗೆ ಬಂದರೂ ಸಹ  ಆ ಮೂರುವರ್ಷ ಗಳಲ್ಲಿ ನಾನು ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲೇ ಇಲ್ಲ. ಮಿತಭಾಷಿ ಮತ್ತು ಸಂಕೋಚದ ಸ್ವಭಾವ ನನಗಾವರಿಸಿದ್ದರಿಂದ ಹೊಸ ಜಾಗ ಯಾರ ಉಸಾಬರಿಯೂ ಬೇಡವೆಂದು ಯಾರನ್ನೂ ಪರಿಚಯಮಾಡಿಕೊಳ್ಳದೆ ತಾನಾಯಿತು ತನ್ನ ಕೆಲಸವಾಯಿತು ಎನ್ನುತ್ತಾ ಒಂದಿಬ್ಬರು ಗೆಳತಿಯರನ್ನು ಬಿಟ್ಟರೆ  ಮಿಕ್ಕವರ ಜೊತೆ ಸ್ನೇಹ ಹಂಚಿಕೊಳ್ಳದೇ ಕೊನೆಯವರೆಗೂ ಹಾಗೇ ಉಳಿದೆ.  ಇದರಿಂದ ಕಾಲೇಜಿನಲ್ಲಿ ನಾನು ಇದ್ದೂ ಇಲ್ಲದಂತಾಗಿದ್ದೆ. ಹಾಗಾಗಿ ನನ್ನ ಬ್ಯಾಚ್ ನ ಸ್ನೇಹಿತರುಗಳು ಒಂಟಿಯಾಗಿರುತ್ತಿದ್ದ ನನ್ನನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದರು. ಲೀಲಾ ಮತ್ತು ಹಲವಾರು ಸ್ನೇಹಿತರು ಜೊತೆಗೂಡಿ ಮಾಡಿದ ವಾಟ್ಸಾಪ್ ಗ್ರೂಪಿನಿಂದ ನನ್ನ  ಹಳೆಯ ಸ್ನೇಹಿತರ ಗೂಡು ಸೇರಿದೆ, ಆ ಗೂಡಿನಲ್ಲಿ ನಾನು ಸಹ ಚಿಲಿಪಿಗುಟ್ಟಿ ಕಲರವದಿಂದ ಭಾವ ಹೊಳೆಯಲ್ಲಿ ಈಜುತ್ತಿದ್ದೇನೆ. ಕನಸಿನಲ್ಲಿಯೂ ಸಹ ಮರಳಿ ಬಿಎ ವ್ಯಾಸಾಂಗ ಮಾಡುವಾಗ ಇದ್ದ ಮಿತ್ರರನ್ನೆಲ್ಲಾ ಸೇರಿ ಅವರೊಂದಿಗೆ ನಲಿದುಲಿಯುತ್ತೇನೆ ಎಂದುಕೊಂಡಿರಲಿಲ್ಲ. ಮೊದಲಿಗೆ ಈ ಗುಂಪನ್ನು ರಚಿಸಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದವರಿಗೆ ಕೃತಜ್ಞತೆ ಹೇಳಲೇಬೇಕು.
    
     ಇನ್ನು ಲೀಲಾ ಮೊನ್ನೆ ನನ್ನ ಗ್ರೂಪಿಗೆ ಸೇರಿಸಿ ನನ್ನ ಪರಿಚಯ ಹಾಕಿದಾಗ ಎಲ್ಲರಿಗೂ ಅತ್ಯಾಶ್ಚರ್ಯ. ಈ ಹುಡುಗಿ ನಮ್ಮ ಬ್ಯಾಚಾ ಎಂದರೆ, ಮತ್ತೊಬ್ಬರು ಈ ಹೆಸರೇ ಕೇಳಿಲ್ಲವೆಂದರು. ಒಬ್ಬರಿಗೊಬ್ಬರು ಅವರವರೇ ಮಾತನಾಡಿಕೊಳ್ಳುತ್ತಿದ್ದಾರೆ, ನನಗೂ ನೆನಪಿಲ್ಲ, ನಾನೂ ನೋಡಿಲ್ಲ ವೆಂದು . ಒಂದಿಬ್ಬರು ಗೆಳತಿಯರು ಮಾತ್ರ ವಾದಿಸುತ್ತಿದ್ದಾರೆ ನಮ್ಮ ಜೊತೆಗಾತಿಯೇ, ಅವಳು ಯಾರನ್ನು ಮಾತನಾಡಿಸುತ್ತಿರಲಿಲ್ಲ, ಎಂದು. ಕಾಲೇಜಿನ ಸಂತೋಷಕೂಟ ಸಮಾರಂಭದ ಫೋಟೋದಲ್ಲಿ ಸಹ ನನ್ನ ಗುರುತು ಹಿಡಿಯುವವರೇ ಇಲ್ಲ.  ಕೊನೆಗೆ ನಾನೇ ಹೊಸ ಜಾಗವಾದ್ದರಿಂದ ನಾನು ಅಷ್ಟಾಗಿ ಯಾರನ್ನು ಪರಿಚಯ ಮಾಡಿಕೊಳ್ಳಲಿಲ್ಲ, ಮಧುಗಿರಿಯ ಪಕ್ಕ ಹಳ್ಳಿಯಿಂದ ಬರುತ್ತಿದ್ದೇ ಎಂದಾಗ ಗೆಳೆಯನೊಬ್ಬ, ಈಗ ನೆನಪಾಯಿತು ನೀವು ಶಿವಗಂಗಾ ಬಸ್ಸಿನಲ್ಲಿ ಹೋಗುತ್ತಿದ್ದಿರೀ, ಅಲ್ವಾ ಮೇಡಂ ನಾನು ಹೊಟ್ಟೆ ಪಾಡಿಗಾಗಿ ಕಾಲೇಜು ಮುಗಿದ ಮೇಲೆ ಬಸ್ಸಿನಲ್ಲಿ ಟಿಕೇಟ್ ಬರೆಯುತ್ತಿದ್ದೇ, ಈಗ ನೆನಪಾಯಿತು ಎಂದರು. ನಿಜಕ್ಕೂ ಶೋಕಿಗಾಗಿ ಬುರುಡೆ ಬಿಟ್ಟು ಇಲ್ಲ ಸಲ್ಲದ್ದನ್ನು ಹೇಳುವವರ ಮಧ್ಯೆ ಈತನ ಪ್ರಾಮಾಣಿಕ ಹೇಳಿಕೆಯ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸಿತು. ದೇವರು ಇಂತವರನ್ನು ಚನ್ನಾಗಿಟ್ಟಿರಲಿ ಎನಿಸಿತು. ಹೀಗೆ ನನ್ನ ಇರುವ ಇಲ್ಲದಿರುವ ಬಗ್ಗೆ ಅಪಾರ ಚರ್ಚೆಗಳು ನಡೆದವು ಕೊನೆಗೆ ಅಟೆಂಡೆನ್ಸ್ ತೆಗೆದು ನೋಡುವುದೆಂಬ ತೀರ್ಮಾನಕ್ಕೆ ಬಂದರು. ಏಕೆಂದರೆ ಕಾಲೇಜು ದಿನಗಳಲ್ಲಿ ಅಷ್ಟು ಮೂಕಳಾಗಿದ್ದೆ. ನಾನು ಸ್ವರ ಹೊರಡಿಸಿ ಮಾತಾಡಿರುವುದನ್ನು ಯಾರೂ ನೋಡಿಯೂ ಇಲ್ಲ. ಹಾಗಾಗಿ ಅಕ್ಷರಶಃ ನಾನು ಯಾರಿಗೂ ನೆನಪಿನಲ್ಲಿರಲಿಲ್ಲ.
    
     ವಾದಗಳು ನಡೆದ ಮಾರನೇ ದಿನ ಮಧ್ಯಾಹ್ನ ಒಂದು ಗಂಟೆಗೆ ಕಾಲೇಜಿನಲ್ಲಿ ನಾವು ಓದುತ್ತಿದ್ದ ವರ್ಷದ ಹಾಜರಾತಿ ಪುಸ್ತಕದ ನನ್ನ ಹೆಸರಿರುವ ಫೋಟೋವೊಂದನ್ನು ತೆಗೆದು ಹಾಕಿದ್ದರು. ನಂತರ ಎಲ್ಲರಿಗೂ ನಾನಿರುವುದು ಖಾತ್ರಿಯಾಗಿತ್ತು. ನನಗೋ ಬೆರಳೆಣಿಕೆಯಷ್ಟು ಹಳೆಯ ಸ್ನೇಹಿತೆಯರು ಮಾತ್ರ ಪರಿಚಯವಿದ್ದರು. ಇವರನ್ನೆಲ್ಲಾ ನೋಡಿದ ನನಗೂ ಹಳೆಯ ಫೋಟೋ ಈಗಿನ ಇವರ ಫೋಟೋ ನೋಡಿದರೆ ಪರಮಾಶ್ಚರ್ಯ ಆಗುತ್ತಿದೆ. ನನಗೆ ಒಂದೂ ನೆನಪಿಲ್ಲದ ಮುಖಗಳು ರಾರಾಜಿಸುತ್ತಿವೆ. ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಎಷ್ಟೋ ಬದಲಾವಣೆಗಳು ಆಗುತ್ತಿರುತ್ತವೆ. ಅಂತಹುದರಲ್ಲಿ ಇಪ್ಪತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿರಬಹು ಕಲ್ಪನೆಗೆ ಸಿಗುವುದು ಕಷ್ಟಸಾಧ್ಯ. ಸುನಾಮಿ ಅಲೆಯಲ್ಲಿ ಕೊಚ್ಚಿ ಹೋದ ಗೆಳತಿಯೊಬ್ಬಳು,  ಕೊರೋನಾದಿಂದಾಗಿ ಜೀವ ಕಳೆದುಕೊಂಡ ಸ್ನೇಹಿತರು. ಹಲವಾರು ಸಾಧಕರು, ಉದ್ದಿಮೆ ಉದ್ಯೋಗಗಳಲ್ಲಿ ತೊಡಗಿಕೊಂಡವರ ಬಗ್ಗೆ ಕೇಳಿದೆ, ಕೆಲವು ಬೇಜಾರಿನ ಸಂಗತಿಗಳು ಮನಸ್ಸು ಕ್ಷೋಭೆಗೊಳಿಸಿದರೆ, ಕೆಲವು ಸ್ನೇಹಿತರ ಸಾಧನೆ ಮನಸ್ಸಿಗೆ ಹರ್ಷವೆನಿಸಿತು. ಒಟ್ಟಿನಲ್ಲಿ ಸ್ನೇಹಿತೆಯ ಕೃಪೆಯಿಂದ ಮರೆತು ಹೋಗಿದ್ದ ಜೀವನದಲ್ಲಿ ಇನ್ನೆಂದಿಗೂ ಸಿಗಲಾರರು ಅಂದುಕೊಂಡಿದ್ದ ಹಳೆಯ ಸ್ನೇಹಿತರೆಲ್ಲಾ ಸಿಕ್ಕಿದ್ದರೂ ನಿಜಕ್ಕೂ ಸ್ನೇಹಬಂಧನವೆಂದರೇ ಇದೇನಾ ಅನ್ನಿಸಿತು.  ಇಂತಹ ಸ್ನೇಹಕ್ಕೆ ಸಾಟಿಯುಂಟೇ, ಸ್ನೇಹ ಸಾಗರದಂತೆ, ಹಲವಾರು ನದಿಗಳು ಸಾಗರ ಸೇರುವಂತೆ ಎಲ್ಲೋ ಹುಟ್ಟಿ ಬೆಳೆದ ನಾವು ಸ್ನೇಹಸಂಬಂಧಗಳ ಮೂಲಕ  ಒಂದುಗೂಡಿ ಚಿರಪರಿಚಿತರಾಗುತ್ತೇವೆ.  ಗೆಳೆಯ ಗೆಳತಿಯರೇ ಸ್ನೇಹವೆನ್ನುವುದು ಶುದ್ಧ ಮನಸ್ಸಿನಂತೆ, ಸ್ನೇಹದಲ್ಲಿ ಕಲ್ಮಶ ಇರುವುದಿಲ್ಲ. ಸ್ನೇಹದ ನೆನಪುಗಳೇ ಮಧುರ ಅಲೆಗಳು. ಆ ಅಲೆಗಳು ಬಿರುಗಾಳಿಗೆ ಸಿಲುದೆ ತಂಪಾದ ತಂಗಾಳಿಯಲ್ಲಿ ಸಾಗಲಿ.
    
    
                -  🖊ಕೀರ್ತಿಶ್ರೀ.ಬಿ.ಜಿ
    ]]>
    https://vishwaprabha.com/2022/01/991/feed/ 0 991