Uncategorized https://vishwaprabha.com Mon, 07 Mar 2022 15:58:19 +0000 en-US hourly 1 https://wordpress.org/?v=6.6.2 185986473 ರೈತರು ಆಹೋರಾತ್ರಿ ಧರಣಿ https://vishwaprabha.com/2022/03/1203/?utm_source=rss&utm_medium=rss&utm_campaign=%25e0%25b2%25b0%25e0%25b3%2588%25e0%25b2%25a4%25e0%25b2%25b0%25e0%25b3%2581-%25e0%25b2%2586%25e0%25b2%25b9%25e0%25b3%258b%25e0%25b2%25b0%25e0%25b2%25be%25e0%25b2%25a4%25e0%25b3%258d%25e0%25b2%25b0%25e0%25b2%25bf-%25e0%25b2%25a7%25e0%25b2%25b0%25e0%25b2%25a3%25e0%25b2%25bf https://vishwaprabha.com/2022/03/1203/#respond Mon, 07 Mar 2022 15:53:57 +0000 https://vishwaprabha.com/?p=1203

Loading

ಗುಬ್ಬಿ_ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯ ನೆಡೆದಿದೆ. ಯಾವುದೇ ಮುಂಗಡ ಮಾಹಿತಿ ನೀಡದೆ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ನುಗ್ಗಿ ತೆಂಗು,ಅಡಿಕೆ ಇತರ ಬೆಳೆಗಳನ್ನು ನಾಶಮಾಡಲಾಗಿದೆ.. ರೈತರು ಆಹೋರಾತ್ರಿ ಧರಣಿ ಕಾರ್ಯಕ್ರಮವನ್ನು ಗುಬ್ಬಿ ತಾಲೂಕು ಕಚೇರಿಯ ಎದುರು ಹಮ್ಮಿಕೊಳ್ಳಲಾಗಿತ್ತು ಈ ಒಂದು ಧರಣಿ ಕಾರ್ಯಕ್ರಮಕ್ಕೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಬಿಎಸ್ ನಾಗರಾಜ್ ಅವರು ಬೆಂಬಲ ಸೂಚಿಸಿ ನಾನು ರೈತ ರೊಟ್ಟಿಗೆ ಇದ್ದೀನಿ ಭಯ ಪಡಬೇಡಿ ಎಂದು ಸಾಂತ್ವನ ಹೇಳಿ. ಕೂಡಲೇ ಘಟನೆಯಿಂದ ಹಾನಿಗೊಳಗಾಗಿರುವ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಮತ್ತು ಕೂಡಲೇ ಅರಣ್ಯ ಅಧಿಕಾರಿಯನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು

]]>
https://vishwaprabha.com/2022/03/1203/feed/ 0 1203
ಐಡಿಹಳ್ಳಿಗೆ ಪೊಲೀಸ್ ಠಾಣೆ ನೀಡಿಸದನದಲ್ಲಿ ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ ಮನವಿ https://vishwaprabha.com/2022/02/1149/?utm_source=rss&utm_medium=rss&utm_campaign=%25e0%25b2%2590%25e0%25b2%25a1%25e0%25b2%25bf%25e0%25b2%25b9%25e0%25b2%25b3%25e0%25b3%258d%25e0%25b2%25b3%25e0%25b2%25bf%25e0%25b2%2597%25e0%25b3%2586-%25e0%25b2%25aa%25e0%25b3%258a%25e0%25b2%25b2%25e0%25b3%2580%25e0%25b2%25b8%25e0%25b3%258d-%25e0%25b2%25a0%25e0%25b2%25be%25e0%25b2%25a3%25e0%25b3%2586-%25e0%25b2%25a8 https://vishwaprabha.com/2022/02/1149/#respond Thu, 17 Feb 2022 15:51:52 +0000 https://vishwaprabha.com/?p=1149

Loading

ಮಧುಗಿರಿ: ತಾಲೂಕಿನ ಗಡಿಭಾಗವಾದ ಐಡಿಹಳ್ಳಿ ಹೋಬಳಿಗೆ ನೂತನ ಪೊಲೀಸ್ ಠಾಣೆ ನೀಡುವಂತೆ ಸದನ ದಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದರು.
ಸದನದಲ್ಲಿ ಭಾಗವಹಿಸಿ ಚುಕ್ಕೆ ಪ್ರಶ್ನೆ ಮೂಲಕ ತಾಲೂಕಿಗೆ ಪೊಲೀಸ್ ಠಾಣೆಗೆ ಒತ್ತಾಯಿಸಿ ಮಾತನಾಡಿ, ಶಾಸಕರು, ಐಡಿಹಳ್ಳಿ ಗಡಿಭಾಗವಾಗಿದೆ. ಸೂತ್ತಲೂ ನೆರೆಯ ಆಂಧ್ರದ ಭೌಗೋಳಿಕ ಪ್ರದೇಶವೇ ತುಂಬಿದೆ, ಅಲ್ಲದೆ ಪುರವರ ಹೋಬಳಿಯನ್ನು ಕೂಡ ಕೊಡಿಗೇನ ಹಳ್ಳಿಗೆ ಹಾಗೂ ಮಿಡಿಗೇಶಿಗೆ ಸರಹದ್ದು ನಿಗದಿಪಡಿಸಿದ್ದು, 15-20 ಕಿ.ಮೀ. ದೂರದ ಹಾದಿಯಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಸಚಿವ ಐಡಿಹಳ್ಳಿಗೆ ನೂತನ ಪೊಲೀಸ್ ಠಾಣೆ ಮಂಜೂರು ಒತ್ತಾಯಿಸಿದರು. ಮನವಿ ತಿರಸ್ಕರಿಸಿದ ಸಚಿವ ಅರಗ ಜ್ಞಾನೇಂದ್ರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಪೊಲೀಸ್ ನಿಯಮದ ಪ್ರಕಾರ 50 ಸಾವಿರ ಜನಸಂಖ್ಯೆ ಇರಬೇಕಿದೆ. 100ಕ್ಕೂ ಹೆಚ್ಚು ಅಪರಾಧ ಪ್ರಕರಣ ಈ ವ್ಯಾಪ್ತಿಯಲ್ಲಿ ನಡೆಯಬೇಕಿದೆ. ಅಲ್ಲದೆ, ಮಧುಗಿರಿಯಲ್ಲಿ ಕಾನೂನು ಸುವ್ಯವಸ್ಥೆ ಸಮರ್ಥವಾಗಿದ್ದು, ಈ ಬಗ್ಗೆ ಯಾವುದೇ ಅಹಿತಕರ ಈ ಘಟನೆಗಳು ವರದಿಯಾಗಿ ನಿರ್ದಿಷ್ಟ ಪ್ರಕರಣ ದಾಖಲಾಗುತ್ತಿಲ್ಲ. ಆದ್ದರಿಂದ ಐಡಿಹಳ್ಳಿಗೆ ನೂತನವಾಗಿ ಪೊಲೀಸ್ ಠಾಣೆ ಮಂಜೂರಿಗೆ ಕಾನೂನಿನಲ್ಲಿ ಅವಕಾಶ ಇಲ್ಲದ ಮನವಿಯನ್ನು ಕಾರಣ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ.

]]>
https://vishwaprabha.com/2022/02/1149/feed/ 0 1149
ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ಸಭೆ https://vishwaprabha.com/2022/02/1142/?utm_source=rss&utm_medium=rss&utm_campaign=%25e0%25b2%2585%25e0%25b2%2596%25e0%25b2%25bf%25e0%25b2%25b2-%25e0%25b2%2595%25e0%25b2%25b0%25e0%25b3%258d%25e0%25b2%25a8%25e0%25b2%25be%25e0%25b2%259f%25e0%25b2%2595-%25e0%25b2%25b6%25e0%25b3%258d%25e0%25b2%25b0%25e0%25b3%2580%25e0%25b2%2597%25e0%25b2%2582%25e0%25b2%25a7-%25e0%25b2%25ae%25e0%25b2%25a4%25e0%25b3%258d https://vishwaprabha.com/2022/02/1142/#respond Sun, 06 Feb 2022 03:57:26 +0000 https://vishwaprabha.com/?p=1142

Loading

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕ್ರಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ದಿನಾಂಕ, 07-02-2022 ರಂದು ಮದ್ಯಾನ್ಹ 12-30 ಘಂಟೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪಿಟ್ಲಾಲಿ ಗ್ರಾಮದ. (ಕಸ್ತೂರಿ ರಂಗಪ್ಪನಹಳ್ಲಿ ಗೇಟ್ .ರಾ.ಹೆ.4 ಶ್ರೀ ರಾಮಣ್ಣನವರ ತೋಟದಲ್ಲಿ ಸಭೆಯ ನ್ನು ಏರ್ಪಡಿಸಲಾಗಿದೆ ಆದುದರಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೋರಿಕೆ . ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಅಮರನಾರಾಯಣ ರವರು ಮತ್ತು ಇತರ ಪದಾಧಿಕಾರಿಗಳು ಪಾಲ್ಗೊಳ್ಳುವರು . ಹೆಚ್ಚಿನ ಮಾಹಿತಿಗಾಗಿ ಶ್ರೀ ದಿನೇಶ್ ಹೂಳಲಕೆರೆ. 9686584148.ಶ್ರೀ ರಾಮಣ್ಣ 9844557570.ಮತ್ತು ಶ್ರೀ ರವಿಕುಮಾರ್ 9731951595.ಹಿರಿಯೂರು ಇವರನ್ನು ಸಂಪರ್ಕಿಸಬಹುದು ಸದಾಶಿವ್ ಶ್ರೀಗಂಧ .ಪ್ರಧಾನ ಕಾರ್ಯದರ್ಶಿ ಅ, ಕ, ಶ್ರೀ, ಮತ್ತು ವ, ಕ್ರಿ, ಬೆ , ಸಂಘ

]]>
https://vishwaprabha.com/2022/02/1142/feed/ 0 1142
ಒಕ್ಕಲಿಗರೇ ಕಾಫಿ ಕುಡಿಯೋಣ ಬನ್ನಿ https://vishwaprabha.com/2022/01/1050/?utm_source=rss&utm_medium=rss&utm_campaign=%25e0%25b2%2592%25e0%25b2%2595%25e0%25b3%258d%25e0%25b2%2595%25e0%25b2%25b2%25e0%25b2%25bf%25e0%25b2%2597%25e0%25b2%25b0%25e0%25b3%2587-%25e0%25b2%2595%25e0%25b2%25be%25e0%25b2%25ab%25e0%25b2%25bf-%25e0%25b2%2595%25e0%25b3%2581%25e0%25b2%25a1%25e0%25b2%25bf%25e0%25b2%25af%25e0%25b3%258b%25e0%25b2%25a3-%25e0%25b2%25ac https://vishwaprabha.com/2022/01/1050/#respond Mon, 24 Jan 2022 16:26:26 +0000 https://vishwaprabha.com/?p=1050

Loading

ದಿನಾಂಕ : 26-01-2022 ಬುಧವಾರ ಸಂಜೆ 6-30 ರಿಂದ 08 ಗಂಟೆಯವರೆಗೆ

ಜೂಮ್ ಅ್ಯಪ್ ನಲ್ಲಿ ಕಾರ್ಯಕ್ರಮ.

Krishna Gowda is inviting you to a scheduled Zoom meeting.

Join Zoom Meeting

https://us02web.zoom.us/j/85483595961?pwd=cHpIalB5aGJSWm1xYldmaDRGaFlWdz09

Meeting ID: 854 8359 5961
Passcode: 621610

ಸಂಘಟನೆ ಅದರ ಆಗುಹೋಗುಗಳ ಬಗ್ಗೆ ಚರ್ಚೆ

ಶ್ರೀ ಕೆ.ನ. ಲಿಂಗೇಗೌಡರು
ಪತ್ರಕರ್ತರು, ಹೋರಾಟಗಾರರು ಹಾಗೂ ಸಂಘಟಕರು

ಎಲ್ಲಾ ಗೌಡತಿಯರ ಸೇನೆ ಹಾಗೂ ಗೌಡರ ಯುವಸೇನೆ ಪದಾಧಿಕಾರಿಗಳು ಮತ್ತು ಪದಾಧಿಕಾರಿಗಳು ಆಗಲೂ ಇಚ್ಛಿಸುವವರು ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ.

ಇತರರು ತಮ್ಮ ಸಲಹೆಗಳನ್ನು ಕೊಟ್ಟು ಸಂಘಟನೆ ಹೆಚ್ಚು ಬಲಿಷ್ಠವಾಗಲು ಸಹಕರಿಸಿ
ಪ್ರತಿಯೊಬ್ಬ ಒಕ್ಕಲಿಗರು ಜೂಮ್ ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಬಿ. ಕೃಷ್ಣೇಗೌಡ
ಸಂಸ್ಥಾಪಕ ಗೌಡರ ಸೇನೆ
9448763006

]]>
https://vishwaprabha.com/2022/01/1050/feed/ 0 1050
ಗೂಡು ಸೇರಿದಾಗ https://vishwaprabha.com/2022/01/991/?utm_source=rss&utm_medium=rss&utm_campaign=%25e0%25b2%2597%25e0%25b3%2582%25e0%25b2%25a1%25e0%25b3%2581-%25e0%25b2%25b8%25e0%25b3%2587%25e0%25b2%25b0%25e0%25b2%25bf%25e0%25b2%25a6%25e0%25b2%25be%25e0%25b2%2597 https://vishwaprabha.com/2022/01/991/#respond Wed, 19 Jan 2022 10:05:37 +0000 https://vishwaprabha.com/?p=991

Loading

ಸುಮಾರು ಇಪ್ಪತ್ತು ವರ್ಷಗಳ ನಂತರ ಅಪರಿಚಿತ ದೂರವಾಣಿ ಕರೆಯೊಂದು ನನ್ನ ಕರೆಯಿತು. ಕುತೂಹಲದಿಂದ ರಿಂಗಣಿಸುತ್ತಿದ್ದ ಫೋನ್ ತೆಗೆದೆ. ಅತ್ತಲಿಂದ ಹಲೋ ನಾನು ಲೀಲಾ ಮಾತಾಡ್ತಾ ಇರೋದು , ಬಿಎ ಓದುವಾಗಿನ ಸ್ನೇಹಿತೆ ಗುರುತು ಸಿಕ್ಕಿತಾ ಎಂದಳು. ನನಗೆ ಥಟ್ಟನೆ ಲೀಲಾ ಎಂದಾಕ್ಷಣ ಬಳುಕುವ ಬಳ್ಳಿ, ಉದ್ದನೆಯ ಜಡೆಯ ಹುಡುಗಿ ಎಂದು ಅರ್ಥವಾಯಿತು. ಸಂತೋಷಕ್ಕೆ ಪಾರವೇ ಇರಲಿಲ್ಲ. ಲೀಲಾ ಇಷ್ಟು ವರ್ಷ ಕಳೆದ ಮೇಲೆ ಕಾಲ್ ಮಾಡಿರುವೆ ನಂಬರ್ ಹೇಗೆ ಸಿಕ್ತು ಆರೋಗ್ಯ ತಾನೇ ಎಂದೆ. ಅದಕ್ಕವಳು ಅಮ್ಮಾ ತಾಯೀ, ನಾವು ನಮ್ಮ ಬ್ಯಾಚ್ ನ ಹಳೆಯ ಸ್ನೇಹಿತರ ವಾಟ್ಸಾಪ್ ಗ್ರೂಪ್ ರಚಿಸಿದ್ದೇವೆ. ಗುಂಪು ರಚಿಸಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ನೀವ್ಯಾರೋ ಕೆಲವರು ಮಾತ್ರ ಗ್ರೂಪಿನಲ್ಲಿ ಇಲ್ಲ . ಹೇಗೋ ಪತ್ತೇ ಮಾಡಿ ನಿನ್ನ ನಂಬರ್ ಹುಡುಕಿದೆ, ಎಂದಳು. ನಂತರ ಇಬ್ಬರು ಸುಮಾರು ದಿನಗಳ ನಂತರ ಸಿಕ್ಕಿದ್ದರಿಂದ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡೆವು. ಹಾಗೇ ಅವಳು ನನ್ನನ್ನು ಗ್ರೂಪಿಗೆ ಸೇರಿಸಿ ನನ್ನ ಹೆಸರು ಮತ್ತು ಫೋಟೋ ಹಾಕಿದಳು. ಆ ದಿನಗಳಲ್ಲಿ ಸಿರಾ ನನಗೆ ಬಹಳ ಹೊಸದು. ದೂರದ ಸಂಬಂಧಿಗಳು ಬಿಟ್ಟರೆ ಅಷ್ಟಾಗಿ ಹತ್ತಿರದ ಸಂಬಂಧಿಗಳು ಇಲ್ಲಾ, ಸ್ನೇಹಿತರಂತೂ ಇಲ್ಲವೇ ಇಲ್ಲ. ನನ್ನ ತಂದೆಗೆ ಸಿರಾ ಕೋರ್ಟ್ ಗೆ ಶಿರಸ್ತೇದಾರ್ ಆಗಿ ಮಧುಗಿರಿಯಿಂದ ವರ್ಗಾವಣೆಯಾದಾಗ ಅದೇ ವೇಳೆಗೆ ದ್ವಿತೀಯ ಪಿಯುಸಿ ಮುಗಿಸಿದ ನನಗೆ ಸಿರಾ ರಂಗನಾಥ ಪ್ರಥಮ ದರ್ಜೆ ಕಾಲೇಜಿಗೆ ಸೇರುವ ಸೌಭಾಗ್ಯ ದೊರೆತಿತ್ತು. ನಮ್ಮ ಮನೆಯವರೆಲ್ಲ ಮಧುಗಿರಿಯಲ್ಲಿಯೇ, ಬಿಎ ಪದವಿ ಮುಗಿಸಿದರೂ ನಾನು ಮಾತ್ರ ಸಿರಾದಲ್ಲಿ ಕಾಲೇಜಿಗೆ ಸೇರಿದ್ದೆ.  ಆಕಸ್ಮಿಕವಾಗಿ ನನ್ನ ತಂದೆಗೆ ಕಾಲೇಜಿನ  ಉಪನ್ಯಾಸಕರ ಪರಿಚಯವಾಗಿ ಅವರ ಕೃಪಾಕಟಾಕ್ಷ ದಿಂದ ನಾನು ಸಿರಾದಲ್ಲಿ ಓದುವಂತಾಯಿತು. ಹೀಗೆ ಮೂರು ವರ್ಷ ಕಾಲೇಜಿಗೆ ಬಂದರೂ ಸಹ  ಆ ಮೂರುವರ್ಷ ಗಳಲ್ಲಿ ನಾನು ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲೇ ಇಲ್ಲ. ಮಿತಭಾಷಿ ಮತ್ತು ಸಂಕೋಚದ ಸ್ವಭಾವ ನನಗಾವರಿಸಿದ್ದರಿಂದ ಹೊಸ ಜಾಗ ಯಾರ ಉಸಾಬರಿಯೂ ಬೇಡವೆಂದು ಯಾರನ್ನೂ ಪರಿಚಯಮಾಡಿಕೊಳ್ಳದೆ ತಾನಾಯಿತು ತನ್ನ ಕೆಲಸವಾಯಿತು ಎನ್ನುತ್ತಾ ಒಂದಿಬ್ಬರು ಗೆಳತಿಯರನ್ನು ಬಿಟ್ಟರೆ  ಮಿಕ್ಕವರ ಜೊತೆ ಸ್ನೇಹ ಹಂಚಿಕೊಳ್ಳದೇ ಕೊನೆಯವರೆಗೂ ಹಾಗೇ ಉಳಿದೆ.  ಇದರಿಂದ ಕಾಲೇಜಿನಲ್ಲಿ ನಾನು ಇದ್ದೂ ಇಲ್ಲದಂತಾಗಿದ್ದೆ. ಹಾಗಾಗಿ ನನ್ನ ಬ್ಯಾಚ್ ನ ಸ್ನೇಹಿತರುಗಳು ಒಂಟಿಯಾಗಿರುತ್ತಿದ್ದ ನನ್ನನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದರು. ಲೀಲಾ ಮತ್ತು ಹಲವಾರು ಸ್ನೇಹಿತರು ಜೊತೆಗೂಡಿ ಮಾಡಿದ ವಾಟ್ಸಾಪ್ ಗ್ರೂಪಿನಿಂದ ನನ್ನ  ಹಳೆಯ ಸ್ನೇಹಿತರ ಗೂಡು ಸೇರಿದೆ, ಆ ಗೂಡಿನಲ್ಲಿ ನಾನು ಸಹ ಚಿಲಿಪಿಗುಟ್ಟಿ ಕಲರವದಿಂದ ಭಾವ ಹೊಳೆಯಲ್ಲಿ ಈಜುತ್ತಿದ್ದೇನೆ. ಕನಸಿನಲ್ಲಿಯೂ ಸಹ ಮರಳಿ ಬಿಎ ವ್ಯಾಸಾಂಗ ಮಾಡುವಾಗ ಇದ್ದ ಮಿತ್ರರನ್ನೆಲ್ಲಾ ಸೇರಿ ಅವರೊಂದಿಗೆ ನಲಿದುಲಿಯುತ್ತೇನೆ ಎಂದುಕೊಂಡಿರಲಿಲ್ಲ. ಮೊದಲಿಗೆ ಈ ಗುಂಪನ್ನು ರಚಿಸಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದವರಿಗೆ ಕೃತಜ್ಞತೆ ಹೇಳಲೇಬೇಕು.

 ಇನ್ನು ಲೀಲಾ ಮೊನ್ನೆ ನನ್ನ ಗ್ರೂಪಿಗೆ ಸೇರಿಸಿ ನನ್ನ ಪರಿಚಯ ಹಾಕಿದಾಗ ಎಲ್ಲರಿಗೂ ಅತ್ಯಾಶ್ಚರ್ಯ. ಈ ಹುಡುಗಿ ನಮ್ಮ ಬ್ಯಾಚಾ ಎಂದರೆ, ಮತ್ತೊಬ್ಬರು ಈ ಹೆಸರೇ ಕೇಳಿಲ್ಲವೆಂದರು. ಒಬ್ಬರಿಗೊಬ್ಬರು ಅವರವರೇ ಮಾತನಾಡಿಕೊಳ್ಳುತ್ತಿದ್ದಾರೆ, ನನಗೂ ನೆನಪಿಲ್ಲ, ನಾನೂ ನೋಡಿಲ್ಲ ವೆಂದು . ಒಂದಿಬ್ಬರು ಗೆಳತಿಯರು ಮಾತ್ರ ವಾದಿಸುತ್ತಿದ್ದಾರೆ ನಮ್ಮ ಜೊತೆಗಾತಿಯೇ, ಅವಳು ಯಾರನ್ನು ಮಾತನಾಡಿಸುತ್ತಿರಲಿಲ್ಲ, ಎಂದು. ಕಾಲೇಜಿನ ಸಂತೋಷಕೂಟ ಸಮಾರಂಭದ ಫೋಟೋದಲ್ಲಿ ಸಹ ನನ್ನ ಗುರುತು ಹಿಡಿಯುವವರೇ ಇಲ್ಲ.  ಕೊನೆಗೆ ನಾನೇ ಹೊಸ ಜಾಗವಾದ್ದರಿಂದ ನಾನು ಅಷ್ಟಾಗಿ ಯಾರನ್ನು ಪರಿಚಯ ಮಾಡಿಕೊಳ್ಳಲಿಲ್ಲ, ಮಧುಗಿರಿಯ ಪಕ್ಕ ಹಳ್ಳಿಯಿಂದ ಬರುತ್ತಿದ್ದೇ ಎಂದಾಗ ಗೆಳೆಯನೊಬ್ಬ, ಈಗ ನೆನಪಾಯಿತು ನೀವು ಶಿವಗಂಗಾ ಬಸ್ಸಿನಲ್ಲಿ ಹೋಗುತ್ತಿದ್ದಿರೀ, ಅಲ್ವಾ ಮೇಡಂ ನಾನು ಹೊಟ್ಟೆ ಪಾಡಿಗಾಗಿ ಕಾಲೇಜು ಮುಗಿದ ಮೇಲೆ ಬಸ್ಸಿನಲ್ಲಿ ಟಿಕೇಟ್ ಬರೆಯುತ್ತಿದ್ದೇ, ಈಗ ನೆನಪಾಯಿತು ಎಂದರು. ನಿಜಕ್ಕೂ ಶೋಕಿಗಾಗಿ ಬುರುಡೆ ಬಿಟ್ಟು ಇಲ್ಲ ಸಲ್ಲದ್ದನ್ನು ಹೇಳುವವರ ಮಧ್ಯೆ ಈತನ ಪ್ರಾಮಾಣಿಕ ಹೇಳಿಕೆಯ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸಿತು. ದೇವರು ಇಂತವರನ್ನು ಚನ್ನಾಗಿಟ್ಟಿರಲಿ ಎನಿಸಿತು. ಹೀಗೆ ನನ್ನ ಇರುವ ಇಲ್ಲದಿರುವ ಬಗ್ಗೆ ಅಪಾರ ಚರ್ಚೆಗಳು ನಡೆದವು ಕೊನೆಗೆ ಅಟೆಂಡೆನ್ಸ್ ತೆಗೆದು ನೋಡುವುದೆಂಬ ತೀರ್ಮಾನಕ್ಕೆ ಬಂದರು. ಏಕೆಂದರೆ ಕಾಲೇಜು ದಿನಗಳಲ್ಲಿ ಅಷ್ಟು ಮೂಕಳಾಗಿದ್ದೆ. ನಾನು ಸ್ವರ ಹೊರಡಿಸಿ ಮಾತಾಡಿರುವುದನ್ನು ಯಾರೂ ನೋಡಿಯೂ ಇಲ್ಲ. ಹಾಗಾಗಿ ಅಕ್ಷರಶಃ ನಾನು ಯಾರಿಗೂ ನೆನಪಿನಲ್ಲಿರಲಿಲ್ಲ.

 ವಾದಗಳು ನಡೆದ ಮಾರನೇ ದಿನ ಮಧ್ಯಾಹ್ನ ಒಂದು ಗಂಟೆಗೆ ಕಾಲೇಜಿನಲ್ಲಿ ನಾವು ಓದುತ್ತಿದ್ದ ವರ್ಷದ ಹಾಜರಾತಿ ಪುಸ್ತಕದ ನನ್ನ ಹೆಸರಿರುವ ಫೋಟೋವೊಂದನ್ನು ತೆಗೆದು ಹಾಕಿದ್ದರು. ನಂತರ ಎಲ್ಲರಿಗೂ ನಾನಿರುವುದು ಖಾತ್ರಿಯಾಗಿತ್ತು. ನನಗೋ ಬೆರಳೆಣಿಕೆಯಷ್ಟು ಹಳೆಯ ಸ್ನೇಹಿತೆಯರು ಮಾತ್ರ ಪರಿಚಯವಿದ್ದರು. ಇವರನ್ನೆಲ್ಲಾ ನೋಡಿದ ನನಗೂ ಹಳೆಯ ಫೋಟೋ ಈಗಿನ ಇವರ ಫೋಟೋ ನೋಡಿದರೆ ಪರಮಾಶ್ಚರ್ಯ ಆಗುತ್ತಿದೆ. ನನಗೆ ಒಂದೂ ನೆನಪಿಲ್ಲದ ಮುಖಗಳು ರಾರಾಜಿಸುತ್ತಿವೆ. ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಎಷ್ಟೋ ಬದಲಾವಣೆಗಳು ಆಗುತ್ತಿರುತ್ತವೆ. ಅಂತಹುದರಲ್ಲಿ ಇಪ್ಪತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿರಬಹು ಕಲ್ಪನೆಗೆ ಸಿಗುವುದು ಕಷ್ಟಸಾಧ್ಯ. ಸುನಾಮಿ ಅಲೆಯಲ್ಲಿ ಕೊಚ್ಚಿ ಹೋದ ಗೆಳತಿಯೊಬ್ಬಳು,  ಕೊರೋನಾದಿಂದಾಗಿ ಜೀವ ಕಳೆದುಕೊಂಡ ಸ್ನೇಹಿತರು. ಹಲವಾರು ಸಾಧಕರು, ಉದ್ದಿಮೆ ಉದ್ಯೋಗಗಳಲ್ಲಿ ತೊಡಗಿಕೊಂಡವರ ಬಗ್ಗೆ ಕೇಳಿದೆ, ಕೆಲವು ಬೇಜಾರಿನ ಸಂಗತಿಗಳು ಮನಸ್ಸು ಕ್ಷೋಭೆಗೊಳಿಸಿದರೆ, ಕೆಲವು ಸ್ನೇಹಿತರ ಸಾಧನೆ ಮನಸ್ಸಿಗೆ ಹರ್ಷವೆನಿಸಿತು. ಒಟ್ಟಿನಲ್ಲಿ ಸ್ನೇಹಿತೆಯ ಕೃಪೆಯಿಂದ ಮರೆತು ಹೋಗಿದ್ದ ಜೀವನದಲ್ಲಿ ಇನ್ನೆಂದಿಗೂ ಸಿಗಲಾರರು ಅಂದುಕೊಂಡಿದ್ದ ಹಳೆಯ ಸ್ನೇಹಿತರೆಲ್ಲಾ ಸಿಕ್ಕಿದ್ದರೂ ನಿಜಕ್ಕೂ ಸ್ನೇಹಬಂಧನವೆಂದರೇ ಇದೇನಾ ಅನ್ನಿಸಿತು.  ಇಂತಹ ಸ್ನೇಹಕ್ಕೆ ಸಾಟಿಯುಂಟೇ, ಸ್ನೇಹ ಸಾಗರದಂತೆ, ಹಲವಾರು ನದಿಗಳು ಸಾಗರ ಸೇರುವಂತೆ ಎಲ್ಲೋ ಹುಟ್ಟಿ ಬೆಳೆದ ನಾವು ಸ್ನೇಹಸಂಬಂಧಗಳ ಮೂಲಕ  ಒಂದುಗೂಡಿ ಚಿರಪರಿಚಿತರಾಗುತ್ತೇವೆ.  ಗೆಳೆಯ ಗೆಳತಿಯರೇ ಸ್ನೇಹವೆನ್ನುವುದು ಶುದ್ಧ ಮನಸ್ಸಿನಂತೆ, ಸ್ನೇಹದಲ್ಲಿ ಕಲ್ಮಶ ಇರುವುದಿಲ್ಲ. ಸ್ನೇಹದ ನೆನಪುಗಳೇ ಮಧುರ ಅಲೆಗಳು. ಆ ಅಲೆಗಳು ಬಿರುಗಾಳಿಗೆ ಸಿಲುದೆ ತಂಪಾದ ತಂಗಾಳಿಯಲ್ಲಿ ಸಾಗಲಿ.


            -  🖊ಕೀರ್ತಿಶ್ರೀ.ಬಿ.ಜಿ
]]>
https://vishwaprabha.com/2022/01/991/feed/ 0 991
ಕಿಡ್ನಿ ವೈಫಲ್ಯ ಅನಾರೋಗ್ಯ ದಿಂದ ಬಳಳುತ್ತಿದ್ದ ಲೋಕೇಶ್ ರವರಿಗೆ ಆರ್ಥಿಕ ಸಹಾಯ https://vishwaprabha.com/2022/01/988/?utm_source=rss&utm_medium=rss&utm_campaign=%25e0%25b2%2595%25e0%25b2%25bf%25e0%25b2%25a1%25e0%25b3%258d%25e0%25b2%25a8%25e0%25b2%25bf-%25e0%25b2%25b5%25e0%25b3%2588%25e0%25b2%25ab%25e0%25b2%25b2%25e0%25b3%258d%25e0%25b2%25af-%25e0%25b2%2585%25e0%25b2%25a8%25e0%25b2%25be%25e0%25b2%25b0%25e0%25b3%258b%25e0%25b2%2597%25e0%25b3%258d%25e0%25b2%25af-%25e0%25b2%25a6 https://vishwaprabha.com/2022/01/988/#respond Wed, 19 Jan 2022 09:57:58 +0000 https://vishwaprabha.com/?p=988

Loading

ಇತ್ತೀಚೆಗೆ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಕಿತ್ತಗಳಿ ಗ್ರಾಮದ ಲೋಕೇಶ್ ಎಂಬ ವ್ಯಕ್ತಿ ತನ್ನ ಎರಡು ಕಿಡ್ನಿ ವೈಫಲ್ಯ ಅನಾರೋಗ್ಯ ದಿಂದ ಬಳಳುತ್ತಿದ್ದು ಇದನ್ನ ಮನಗೊಂಡ ಮಾನ್ಯ ಮಾಜಿ ಶಾಸಕರು,ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ** *ಶ್ರೀ ಕೆ ಎನ್ ರಾಜಣ್ಣ ನವರು ***ವಕೀಲರಾದ *ನಾರಾಯಣ ಗೌಡ್ರು ಹಾಗೂ ಆಪ್ತ ಸಹಾಯಕರು ಆದ ವಸಂತ್ ರವರು* ಜೊತೆಯಾಗಿ ಆಸ್ಪತ್ರೆಗೆ ಹೋಗಿ ಲೋಕೇಶ್ ರವರಿಗೆ ಆರ್ಥಿಕ ಸಹಾಯ ಮಾಡಿ ಬೇಗ ಗುಣಮುಖರಾಗಲಿ ಎಂದು ಹಾರೈಸಿದರು

]]>
https://vishwaprabha.com/2022/01/988/feed/ 0 988
ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ https://vishwaprabha.com/2022/01/899/?utm_source=rss&utm_medium=rss&utm_campaign=%25e0%25b2%25a4%25e0%25b3%2581%25e0%25b2%25ae%25e0%25b2%2595%25e0%25b3%2582%25e0%25b2%25b0%25e0%25b3%2581-%25e0%25b2%259c%25e0%25b2%25bf%25e0%25b2%25b2%25e0%25b3%258d%25e0%25b2%25b2%25e0%25b2%25be-%25e0%25b2%2589%25e0%25b2%25aa%25e0%25b2%25be%25e0%25b2%25a7%25e0%25b3%258d%25e0%25b2%25af%25e0%25b2%2595%25e0%25b3%258d%25e0%25b2%25b7 https://vishwaprabha.com/2022/01/899/#respond Mon, 10 Jan 2022 23:21:37 +0000 https://vishwaprabha.com/?p=899

Loading

ಶ್ರೀ .ವಿ .ಎಚ್. ವೆಂಕಟೇಶಯ್ಯ …ಅಧ್ಯಕ್ಷರು ..ರಾಜ್ಯ ಸರ್ಕಾರಿ ನೌಕರರ ಸಂಘ ಮಧುಗಿರಿ… ಇವರನ್ನು ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷರಾದ ಶ್ರೀಯುತ ಎನ್…ನರಸಿಂಹರಾಜಣ್ಣ ನವರಿಗೂ …ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಟಿ ಎನ್ ಜಗದೀಶ ರವರೆಗೂ ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಷಡಕ್ಷರಿ ರವರಿಗು ಸಮಸ್ತ ಮಧುಗಿರಿ ತಾಲ್ಲೂಕಿನ ನೌಕರರ ಪರವಾಗಿ ಧನ್ಯವಾದಗಳು ..💐💐💐

]]>
https://vishwaprabha.com/2022/01/899/feed/ 0 899
ಆಸೆಯ ಕಂಗಳು https://vishwaprabha.com/2022/01/893/?utm_source=rss&utm_medium=rss&utm_campaign=%25e0%25b2%2586%25e0%25b2%25b8%25e0%25b3%2586%25e0%25b2%25af-%25e0%25b2%2595%25e0%25b2%2582%25e0%25b2%2597%25e0%25b2%25b3%25e0%25b3%2581 https://vishwaprabha.com/2022/01/893/#respond Mon, 10 Jan 2022 23:14:01 +0000 https://vishwaprabha.com/?p=893

Loading

🖊 ಬಿ.ಜಿ. ಕೀರ್ತಿ ಶ್ರೀ ಹವ್ಯಾಸಿ ಬರಹಗಾರ್ತಿ 9740716250

ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯ. ಕಾಂಪೌಡಿನಲ್ಲಿ ಕುಳಿತು ಯಾವುದೋ ಹಳೆಯ ಕಾದಂಬರಿಯೊಂದರ ಪುಟಗಳ ಮೇಲೆ ಬೆರಳಾಡಿಸುತ್ತಿದ್ದೆ. ಟಾರು ರಸ್ತೆಯಲ್ಲಿ ಅನೇಕ ವಾಹನ ಸವಾರರು ಓಡಾಡುತ್ತಿದ್ದರು. ಸೂಪರ್ ಎಕ್ಸೆಲ್ಲೊಂದು ನಿಧಾನವಾಗಿ ಚಲಿಸಿ ನಿಂತು, ಅದರಲ್ಲಿ ಬಂದವರು ಯಾರೋ ಏನೋ ಮಾತಾಡಿಸಲು ಬರುತ್ತಿದ್ದಾರೆನಿಸಿ ಗೇಟಿನ ಬಳಿ ತಲೆ ಎತ್ತಿದೆ, ಹಾಲಿನ ಸಿದ್ದಣ್ಣ ಮತ್ತು ಅವನ ಹೆಂಡತಿ ರಂಗಮ್ಮ ತಮ್ಮ ಏಳು ವರ್ಷದ ಮಗುವಿನೊಂದಿಗೆ ಗೇಟ್ ಸಮೀಪ ಬರುತ್ತಿರುವುದನ್ನು ಮನಗಂಡು, ನಾನೇ ಬೇಗನೆ ಲಗುಬಗೆಯಿಂದ ಕಾದಂಬರಿಯನ್ನು ಪಕ್ಕಕ್ಕೆ ಎತ್ತಿಟ್ಟು ಗೇಟ್ ತೆಗೆದು ಹೊರ ನಡೆದು ಅವರ ಬಳಿ ಅಂತರ ಕಾಯ್ದುಕೊಂಡು ನಿಂತೆ. ಸುಮಾರು ಎರಡು ವರ್ಷಗಳಿಂದ ಮನೆಯ ಬಳಿ ಯಾರಾದರೂ ಬರುತ್ತಿದ್ದಾರೆ ಎನಿಸಿದರೆ ಕೊರೋನಾದಿಂದಾಗಿ ಅಂಗಳದೊಳಗೆ ಬಿಟ್ಟು ಕೊಳ್ಳದೆ ದಾರಿಯಲ್ಲಿ ಮಾತಾಡಿಸಿ ಕಳಿಸುವುದು ರೂಢಿಯಾಗಿದೆ. ತೀರಾ ಆತ್ಮೀಯರಾದವರು ಆರೋಗ್ಯ ಚನ್ನಾಗಿರುವವರಿಗೆ ಮಾತ್ರ ಮನೆಯೊಳಗೆ ಕರೆದು ಮಾತಾಡಿಸುವ ಪರಿಪಾಠವಿದೆ. ಇದು ಕೊರೋನಾದಿಂದ ಕಲಿತಿರುವ ಎಚ್ಚರಿಕೆಯ ಪಾಠ. ಕೆಲವರಿಗೆ ನನ್ನ ಇತ್ತೀಚಿನ ನಡವಳಿಕೆಯಿಂದ ಜಂಭತನ ಅನ್ನಿಸಿದರೂ ನಮ್ಮ ಆರೋಗ್ಯ ಮುಖ್ಯ. ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ರೋಗಗಳಿಂದ ನಾವು ದೂರ ಇರಬೇಕಲ್ಲವೇ. ಹೀಗೆ ಹೊರಗೆ ನಡೆದು ಎಲ್ಲಿ ಹೋಗಿದ್ರಿ ಸಿದ್ದಣ ಸಂಸಾರ ಸಮೇತ ತುಂಬಾ ಅಪರೂಪ ಆಯ್ತು ಎಂದೇ, ಅವರಿಬ್ಬರೂ ವಯಸ್ಸಿನಲ್ಲಿ ನಮಗಿಂತ ಕಿರಿಯರು. ಅಕ್ಕ ನನ್ನ ಮಗನಿಗೆ ಜ್ವರ ಆಸ್ಪತ್ರೆಗೆ ಹೋಗಿದ್ವಿ, ಸರ್ಕಾರಿ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಮಾಡಿಸಿಕೊಂಡು ಬಂದೆವು ಎಂದಳು ರಂಗಮ್ಮ. ನಿಂತಿರುವ ಎಕ್ಸೆಲ್ ಮೇಲೆ ಕುಳಿತಿತ್ತು ರಂಗಮ್ಮ ಸಿದ್ದಣ್ಣ ರ ಮುದ್ದಿನ ಕೂಸು. ಆದರೆ ಮಗು ಹುಷಾರಿಲ್ಲ ಎಂದಾಕ್ಷಣ ನಾನು ಹೌಹಾರಿದೆ. ಈಗ ನಾನು ಗೇಟಿನಿಂದ ಒಳಗೆ ಬಿಟ್ಟುಕೊಳ್ಳದೆ ಅವರು ಬಳಿ ನಾನೇ ಬಂದಿದ್ದು ಸರಿಯೆನಿಸಿತು. ತಕ್ಷಣ ಹೊದಿದ್ದ ದುಪ್ಪಟದಿಂದ ಮೂಗು ಬಾಯಿ ಲಘುವಾಗಿ ಮುಚ್ಚಿಕೊಂಡು ಜ್ವರ ಅಂತಾ ಹೇಳುತ್ತೀರಾ, ಆದರೆ ಮಗುವಿಗೆ ಒಂದು ಮಾಸ್ಕ್ ಹಾಕಿಲ್ಲ, ಮೊದಲು ಮಾಸ್ಕ್ ಹಾಕಿ ಜನ ಇರುವ ಕಡೆ ಬಿಡಬೇಡಿ ಎಂದೆ, ಸರಿ ಎನ್ನುವಂತೆ ತಲೆಯಾಡಿಸಿ ನಸು ನಕ್ಕರು. ಅದೇ ವೇಳೆಗೆ ಊರಿನ ಜನಪ್ರತಿನಿಧಿಯೊಬ್ಬರು ಅದೇ ದಾರಿಯಲ್ಲಿ ಹಾದು ಹೋಗುವಾಗ ನನ್ನ ಮಾತಾಡಿಸಿ ಲೋಕಾರೂಢಿ ಎನ್ನುವಂತೆ ಇವರನ್ನು ಮಾತಾಡಿಸಿದರು. ತಮಾಷೆಗೆ ಸಿದ್ದಣ್ಣ ನಮಗೊಂದು ಮನೆ ಹಾಕಿಸಿಕೊಂಡು ಅಣ್ಣಾ ಎಂದ, ಗ ಆ ವ್ಯಕ್ತಿ ದಾಖಲೆಗಳೆಲ್ಲ ರೆಡಿ ಮಾಡಿಕೊಳ್ಳಿ ಮನೆ ಬಂದಾಗ ಹೇಳುವೆ ಎಂದು ಕಾಲ್ಕಿತ್ತರು. ಆತ ಮುಂದೆ ಹೋಗುತ್ತಿದ್ದಂತೆ ಇವರಿಬ್ಬರೂ ತಮಗೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ಅನುಕೂಲ ಇಲ್ಲ ನಾವು ಅಣ್ಣ ತಮ್ಮಂದಿರು ಒಬ್ಬರಿಗೊಬ್ಬರು ಮುಖ ನೋಡುವುದಿಲ್ಲ ಈಗ ಹೊಲದಲ್ಲಿ ಚಿಕ್ಕದೊಂದು ಕಲ್ಲು ನಿಲ್ಲಿಸಿಕೊಂಡು ಮನೆಮಾಡಿಕೊಂಡು ವಾಸಿಸುತ್ತಿದ್ದೇವೆ. ರಸ್ತೆಯಿಂದ ಹಲವಾರು ಜನರು ಹೊಲ ದಾಟಿ ನಾವು ಮನೆ ಸೇರಬೇಕು. ಈಗ ನೆರೆಹೊರೆಯ ಹೊಲದವರ ಜೊತೆ ಅನುವು ತನುವಾಗಿದ್ದೇವೆ, ಹಾಗಾಗಿ ಮನೆ ಸೇರಲು ತೊಂದರೆ ಇಲ್ಲ. ಮುಂದೆ ಹೀಗೆ ಎಲ್ಲರ ಹತ್ತಿರ ಚೆನ್ನಾಗಿ ಇರುತ್ತೇವೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಮಗು ಇನ್ನೂ ಚಿಕ್ಕದು, ಎರಡು ಹೂವಿನ ಮೊಗ್ಗು ಬಿಡಿಸಬೇಕು ಜೀವನದ ಬಂಡಿ ನಡೆಯಬೇಕು. ಊರಿನಲ್ಲಿ ನಿವೇಶನವಿದ್ದರೂ ಅದು ಗೊಂದಲದ ಗೂಡಾಗಿದೆ ಎಂದು ನನ್ನ ಬಳಿ ಅಳಲು ತೋಡಿಕೊಂಡರು. ನಾನಿನ್ನು ಏನು ಹೇಳಲು ಸಾಧ್ಯ.ಹೇಗೋ ಇಬ್ಬರೂ ಹೊಂದಿಕೊಂಡು ಹೋದರೆ ಸರ್ಕಾರಿ ಸವಲತ್ತು ಸಿಗುತ್ತವೆ. ಯಾರೋ ಒಬ್ಬರು ನೀವೆ ಅಣ್ಣ ತಮ್ಮ ತಾನೇ ತಿಂದರೆ ತಿನ್ನುವುದು, ಸರಿ ಗಾಡಿ ನಿಲ್ಲಿಸಿದ ಸಮಾಚಾರ ಏನೆಂದು ಕೇಳಿದೆ. ಕೇಳುತ್ತಲೇ ರಂಗಮ್ಮ ಆಸೆ ಕಣ್ಣುಗಳು ಅರಳಿಸುತ್ತಾ, ಅಕ್ಕ ಗಿಡದ ತುಂಬಾ ಅರಳಿರುವ ಹೂವುಗಳು ಕಂಡು ಗುಲಾಬಿ ಮುಡಿಯುವ ಆಸೆಯಾಯಿತು, ಎರಡು ಕೇಳಿ ಪಡೆಯೋಣವೆಂದು ಗಾಡಿ ನಿಲ್ಲಿಸಿದೆವು ಎಂದಳು. ಪಾಪ ಬಡಪಾಯಿ ಹುಡುಗಿ ಯಾವುದಕ್ಕೆ ಆಸೆ ಪಟ್ಟಿದೆ ಎನಿಸಿತು. ನನಗೆ, ಇಲ್ಲೇ ಇರಿ ಕೊರೋನಾ ಅಲೆ ಮತ್ತೆ ಎದ್ದಿರುವುದರಿಂದ ನಾನು ಯಾರನ್ನೂ ಒಳ ಸೇರಿಸುವುದಿಲ್ಲ ಅಪಾರ್ಥ ತಿಳಿಯಬೇಡಿ ಎಂದೇಳಿ ಆಗಲೇ ರಣ ಬಿಸಿಲಿಗೆ ಬಾಡಿ ಬಳಲಿದ್ದ ಸುಮಾರು ಒಂದಿಪ್ಪತ್ತು ಗುಲಾಬಿ ಹೂಗಳನ್ನು ಕಿತ್ತು ತಂದು ಅವಳ ಮಡಿಲಿಗೆ ಹಾಕಿದೆ. ಹೂವುಗಳನ್ನು ಕಂಡು ಅವಳ ಮುಖ ಸಂತಸದಿ ಕುಣಿಯಿತು, ಹೂವುಗಳನ್ನು ಕೊಟ್ಟಿದ್ದಕ್ಕೆ ಕೃತಜ್ಞತೆ ಯ ಭಾವದಿಂದ ನನ್ನೆಡೆ ನೋಡಿದಳು. ಅವಶ್ಯಕತೆ ಇರುವವರಿಗೆ ಅದು ಚಿಕ್ಕ ವಸ್ತುವೇ ಆಗಿರಲಿ ದುಬಾರಿಯಾಗಿ ಕಾಣುತ್ತದೆ. ಈಗಲೋ ಆಗಲೋ ಬಾಡುವ ಗುಲಾಬಿಗಳ ಮಹಾಪ್ರಸಾದ ವೆಂಬಂತೆ ಹಿಡಿದು ಮಧ್ಯದಲ್ಲಿ ಹುಷಾರಿಲ್ಲದ ಮಗನನ್ನು ಹಿಡಿದುಕೊಂಡು ಗಂಡನ ಜೊತೆ ಹೊರಟು ನಗು ಮೊಗವ ಹೊತ್ತು ಮರೆಯಾಗುವ ವರೆಗೂ ಧನ್ಯತಾಭಾವದಿಂದ ನನ್ನ ನೋಡುತ್ತಲೆ ಇದ್ದಳು, ಮಗುವಿನ ಆರೋಗ್ಯದ ಬಗ್ಗೆ ನಿಗಾವಹಿಸುವ ಬಗ್ಗೆ ಮತ್ತೊಮ್ಮೆ ಎಚ್ಚರಿಸಿದಾಗ ಆ ಬಡಪಾಯಿ ದಂಪತಿಗಳಿಬ್ಬರೂ ತಲೆಯಾಡಿಸಿ ಮತ್ತೊಮ್ಮೆ ನಗುವಿನ ಮುಖ ಧರಿಸಿದರು.ಗುಲಾಬಿ ಹೂವಿನ ಮೇಲೆ ರಂಗಮ್ಮಳಿಗಿದ್ದ ಆಸೆಯ ಕಂಗಳ ನೆನೆಸಿಕೊಂಡು ಅಯ್ಯೋ ಎಂತಹುದಕ್ಕೆ ಆಸೆ ಪಟ್ಟ ಹುಡುಗಿ ಈಕೆ ಎಂದೆನಿಸಿತು.

                    - 🖊ಕೀರ್ತಿಶ್ರೀ

]]>
https://vishwaprabha.com/2022/01/893/feed/ 0 893
ಶ್ರೀ ಬಾಲಾಜಿ ಪೆಟ್ರೋಲ್ ಬಂಕ್ ನೂತನ ಉದ್ಘಾಟನೆ ಕಾರ್ಯಕ್ರಮ https://vishwaprabha.com/2022/01/837/?utm_source=rss&utm_medium=rss&utm_campaign=%25e0%25b2%25b6%25e0%25b3%258d%25e0%25b2%25b0%25e0%25b3%2580-%25e0%25b2%25ac%25e0%25b2%25be%25e0%25b2%25b2%25e0%25b2%25be%25e0%25b2%259c%25e0%25b2%25bf-%25e0%25b2%25aa%25e0%25b3%2586%25e0%25b2%259f%25e0%25b3%258d%25e0%25b2%25b0%25e0%25b3%258b%25e0%25b2%25b2%25e0%25b3%258d-%25e0%25b2%25ac%25e0%25b2%2582%25e0%25b2%2595 https://vishwaprabha.com/2022/01/837/#respond Sat, 08 Jan 2022 01:06:42 +0000 https://vishwaprabha.com/?p=837

Loading

ಕೊರಟಗೆರೆ ರಿಂಗ್ ರಸ್ತೆಯಲ್ಲಿ ಶ್ರೀ ಬಾಲಾಜಿ ಪೆಟ್ರೋಲ್ ಬಂಕ್ ನೂತನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠ ಎಲೆರಾಂಪುರ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ಶ್ರೀಶ್ರೀಶ್ರೀ ಹನುಮಂತನಾಥ ಸ್ವಾಮೀಜಿಯವರು ಹಾಗೂ ಕೊರಟಗೆರೆ ತಾಲೂಕು ಜನಪ್ರಿಯ ಶಾಸಕರಾದ ಡಾ.ಜಿ ಪರಮೇಶ್ವರ್‌ರವರು ಉದ್ಘಾಟನೆ ಮಾಡಿದರು.

]]>
https://vishwaprabha.com/2022/01/837/feed/ 0 837
ಕುವೆಂಪುರವರ ಚಿಂತನೆಗಳು ರೋಗಗ್ರಸ್ತ ಮನಸ್ಸಿಗೆ ಔಷಧಗಳು https://vishwaprabha.com/2021/12/675/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%25b5%25e0%25b3%2586%25e0%25b2%2582%25e0%25b2%25aa%25e0%25b3%2581%25e0%25b2%25b0%25e0%25b2%25b5%25e0%25b2%25b0-%25e0%25b2%259a%25e0%25b2%25bf%25e0%25b2%2582%25e0%25b2%25a4%25e0%25b2%25a8%25e0%25b3%2586%25e0%25b2%2597%25e0%25b2%25b3%25e0%25b3%2581-%25e0%25b2%25b0%25e0%25b3%258b%25e0%25b2%2597 https://vishwaprabha.com/2021/12/675/#respond Fri, 31 Dec 2021 00:42:46 +0000 https://vishwaprabha.com/?p=675

Loading

ನಾವಿಂದು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ .ಕೊರೋನ ವೈರಾಣು ಮತ್ತು ರಾಜಕೀಯ ವೈರಾಣುಗಳು ,ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ತಳಮಳಗೊಳಿಸುತ್ತಿವೆ .ಕುವೆಂಪುರವರ ಚಿಂತನೆಗಳು ರೋಗಗ್ರಸ್ತ ಮನಸ್ಸಿಗೆ ಕೊಡುವ ಔಷಧಗಳು.  ಎಂದು ಹಿರಿಯ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯರವರು ನುಡಿದರು.

ಕರ್ನಾಟಕ ಲೇಖಕಿಯರ ಸಂಘ (ರಿ)  ತುಮಕೂರು ಜಿಲ್ಲಾ ಶಾಖೆಯು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು  ಸದರಿ ಕಾಲೇಜಿನ ಮಹಿಳಾ ಸಬಲೀಕರಣ ವೇದಿಕೆ ಸಹಯೋಗದೊಂದಿಗೆ , ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡುತ್ತಾ ಮೇಲಿನಂತೆ ನುಡಿದರು ಮತ್ತು ಕುವೆಂಪು ರವರ ಎರಡು ಕಾದಂಬರಿಗಳು ಮಹಾನ್ ಕೃತಿಗಳು. ಕುವೆಂಪು ಬಹುದೊಡ್ಡ ಸ್ತ್ರೀ ಸಂವೇದನೆಯನ್ನು ಇಟ್ಟುಕೊಂಡ ಲೇಖಕ.ಅವರ ಸಾಹಿತ್ಯ ದಲ್ಲಿ ಸ್ತ್ರೀ ಪ್ರಧಾನತೆಯ ಹೆಸರುಗಳು ,ಹೆಣ್ಣಿನ ಒಳಸಂಕಟಗಳು ,ಸಂಕಥನಗಳು ಇವೆ.ಪ್ರತಿಭಟನಾ ಶಕ್ತಿಯ  ಸ್ತ್ರೀ ಪಾತ್ರಗಳಿವೆ.

20 ನೇ ಶತಮಾನದ ಎಲ್ಲಾ ಕನ್ನಡ ಪ್ರಜ್ಞೆಯನ್ನು ಬೆಳೆಸಿದವರು.ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಬೆಳೆಸಬೇಕು . ಕುವೆಂಪುರವರ ಸಾಹಿತ್ಯ ಅದರಲ್ಲೂ, ಅವರ ವಿಚಾರ ಸಾಹಿತ್ಯ ಓದಿಸಿದರೆ , ಮುಂದಿನ ದಿನಗಳಲ್ಲಿ ಸಮಾಜ ಸ್ವಾಸ್ಥ್ಯ ವಾಗಿ ಇರಬಲ್ಲದು ಎಂದು ಹೇಳಿದರು.

ಕಾರ್ಯಕ್ರಮದ ಭಾಗವಾದ “ಮಲೆಗಳಲ್ಲಿ ಮದುಮಗಳು ಮತ್ತು ಮಹಿಳೆ ” ಎಂಬ ವಿಷಯದ ಬಗ್ಗೆ ಉಮಾ ಗ್ಯಾರಳ್ಳ ರವರು ಉಪನ್ಯಾಸ ನೀಡುತ್ತಾ ಕುವೆಂಪುರವರ ಎರಡು ಕಾದಂಬರಿಗಳೂ ಮಹಾಕಾವ್ಯಗಳೇ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ,
ಪ್ರಾರಂಭದಲ್ಲಿಯೇ ಹೇಳಿರುವಂತೆ ಇಲ್ಲಿ ಯಾರೂ ಮುಖ್ಯರಲ್ಲ .ಯಾರೂ ಅಮುಖ್ಯರಲ್ಲ. ಎಲ್ಲಾ ಪಾತ್ರಗಳೂ ಮುಖ್ಯವಾಗಿವೆ.
ಕಾದಂಬರಿಯಲ್ಲಿ ಬರುವ ಎಲ್ಲಾ ಮಹಿಳೆಯರೂ ಅಕ್ಷರಸ್ಥ ರಲ್ಲ. ಮಹಿಳೆಯರು ಕಲಿಯುವುದು ಹಾಸ್ಯಾಸ್ಪದ ಎಂದು ತಿಳಿದಿದ್ದ ಕಾಲದಲ್ಲೂ ಸೇಸಿ ,ತಿಮ್ಮಿ ,ಪೀಂಚಲು ಚಿನ್ನಮ್ಮ ನಂತಹ ಹೆಣ್ಣು ಪಾತ್ರಗಳು ಹೆದರುವುದಿಲ್ಲ . ಅಪಾಯದ ಅರಿವಿದ್ದೂ ಧೈರ್ಯ ವಾಗಿ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪ್ರೀತಿಯೇ ಪ್ರತಿಭಟನೆಯಾಗಿರುತ್ತದೆ ಎಂದು ನುಡಿದರು.

ಲೇಖಕಿಯರ ಸಂಘದ ಅಧ್ಯಕ್ಷರಾದ ಜಿ.ಮಲ್ಲಿಕಾ ಬಸವರಾಜು ರವರು ಪ್ರಸ್ತಾವನೆ ಮಾಡುತ್ತಾ, ಕುವೆಂಪುರವರ ವಿಶ್ವ ಮಾನವ ಸಂದೇಶ ಮತ್ತು ಮಂತ್ರಮಾಂಗಲ್ಯದ ಮಹತ್ವವನ್ನು, ಇದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು  ತಿಳಿಸಿದರು, ವರ್ತಮಾನದ ತಲ್ಲಣಗಳಿಗೆ ,ಸಂಕಟಗಳಿಗೆ ಕುವೆಂಪುರವರ ಬರಹದಲ್ಲಿ ಪರಿಹಾರವಿದೆ. ಬದುಕು ಬರಹ ಒಂದೇ ಆಗಿದ್ದವರು ಕುವೆಂಪುರವರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ,ಕಾಲೇಜಿನ ಪ್ರಾಂಶುಪಾಲರಾದ ವಸಂತ ಟಿ.ಡಿ.ರವರು ಮಾತನಾಡುತ್ತಾ ,ಕುವೆಂಪುರವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು .ಆ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕು ಎಂದರು.

ಲಲಿತಾ ಮಲ್ಲಪ್ಪರವರು ನಾಡಗೀತೆಯನ್ನು , ಲೇಖಕಿಯರ ಸಂಘದ ಉಪಾಧ್ಯಕ್ಷರಾದ ಸಿ.ಎ.ಇಂದಿರಾ ರವರು ಕುವೆಂಪುರವರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಸದರಿ ಕಾಲೇಜಿನ ,ಮಹಿಳಾ ಸಬಲೀಕರಣ ವೇದಿಕೆಯ ಸಂಚಾಲಕರಾದ ರೇಣುಕಾರವರು,
ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ
ಸಿ.ಎನ್.ಸುಗುಣಾ ದೇವಿ . ಖಜಾಂಚಿ ಸಿ.ಎಲ್.ಸುನಂದಮ್ಮ ,ಸದಸ್ಯರಾದ ಸುಶೀಲಾ ಸದಾಶಿವಯ್ಯ ,ಮುದ್ದರಂಗಮ್ಮ ,ಮರಿಯಂಬಿರವರು ಕಾರ್ಯಕ್ರಮ ದಲ್ಲಿ  ಹಾಜರಿದ್ದರು

ಕೃಷ್ಣನಾಯಕ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿ, ಮರಿಯಂಬಿ ರವರು ಸ್ವಾಗತಿಸಿ ,
ಡಾ/ ಶಿವಲಿಂಗಮೂರ್ತಿ ರವರು ವಂದನಾರ್ಪಣೆ ಮಾಡಿದರು.

]]>
https://vishwaprabha.com/2021/12/675/feed/ 0 675